ತೈವಾನ್ ಗಡಿ ಬಳಿ '100ಕ್ಕೂ ಹೆಚ್ಚು ಹಡಗುಗಳನ್ನು' ನಿಯೋಜಿಸಿದ ಚೀನಾ; ಮತ್ತೊಂದು ಭೀಕರ ಯುದ್ಧ?

ಬೀಜಿಂಗ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಸಭೆಯ ನಂತರ, ಭಾರೀ ಸಂಖ್ಯೆಯ ನೌಕಾಪಡೆಯ ಹಡಗುಗಳನ್ನು ನಿಯೋಜಿಸಲಾಗಿದೆ.
China deployed 'over 100 vessels' in regional waters, says Taiwan security chief
ತೈವಾನ್ ಸೂಪರ್ ಸಾನಿಕ್ ಕ್ಷಿಪಣಿ (ಸಂಗ್ರಹ ಚಿತ್ರ)
Updated on

ತೈಪೆ: ಹಳದಿ ಸಮುದ್ರದಿಂದ ದಕ್ಷಿಣ ಚೀನಾ ಸಮುದ್ರ ಮತ್ತು ಪಶ್ಚಿಮ ಪೆಸಿಫಿಕ್‌ವರೆಗೆ ವಿಸ್ತರಿಸಿರುವ ಪ್ರಾದೇಶಿಕ ಸಾಗರ ವ್ಯಾಪ್ತಿಯಲ್ಲಿ ಚೀನಾ 100ಕ್ಕೂ ಹೆಚ್ಚು ನೌಕಾಪಡೆ, ಕರಾವಳಿ ಕಾವಲು ಪಡೆ ಮತ್ತು ಇತರ ಹಡಗುಗಳನ್ನು ನಿಯೋಜಿಸಿದೆ ಎಂದು ತೈವಾನ್‌ನ ಭದ್ರತಾ ಮುಖ್ಯಸ್ಥರು ಶನಿವಾರ ಹೇಳಿದ್ದಾರೆ. ಇದು ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಭೀಕರ ಯುದ್ಧದ ನಂತರ ಮತ್ತೊಂದು ಭೀಕರ ಯುದ್ಧಕ್ಕೆ ಜಗತ್ತು ಸಾಕ್ಷಿಯಾಗುವ ಸುಳಿವು ನೀಡಿದೆ.

ಬೀಜಿಂಗ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಸಭೆಯ ನಂತರ, ಭಾರೀ ಸಂಖ್ಯೆಯ ನೌಕಾಪಡೆಯ ಹಡಗುಗಳನ್ನು ನಿಯೋಜಿಸಲಾಗಿದೆ ಎಂದು ತೈವಾನ್ ರಾಷ್ಟ್ರೀಯ ಭದ್ರತಾ ಮಂಡಳಿಯ ಮುಖ್ಯಸ್ಥ ಜೋಸೆಫ್ ವು ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.

ಚೀನಾವು ಈ ಭಾಗದ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಬೆದರಿಕೆ ಹಾಕುವ ಏಕೈಕ ದೇಶವಾಗಿದೆ ಎಂದು ಜೋಸೆಫ್ ಆರೋಪಿಸಿದ್ದಾರೆ.

China deployed 'over 100 vessels' in regional waters, says Taiwan security chief
ಅಮೆರಿಕ-ಚೀನಾ ಶೃಂಗಸಭೆ ಆರಂಭವಾಗುತ್ತಿದ್ದಂತೆ ಟ್ರಂಪ್‌ಗೆ 'ಖಡಕ್' ವಾರ್ನಿಂಗ್‌ ಕೊಟ್ಟ ಕ್ಸಿ ಜಿನ್‌ಪಿಂಗ್‌!

ಕಳೆದ ಬುಧವಾರ ಪ್ರಜಾಪ್ರಭುತ್ವ ದ್ವೀಪ ರಾಷ್ಟ್ರ ತೈವಾನ್ ಗೆ ಶಸ್ತ್ರಾಸ್ತ್ರ ಮಾರಾಟದ ಬಗ್ಗೆ ತೈವಾನ್ ಅಧ್ಯಕ್ಷ ಲೈ ಚಿಂಗ್-ಟೆ ಅವರೊಂದಿಗೆ ಮಾತನಾಡುತ್ತೀರಾ ಎಂದು ಪತ್ರಕರ್ತರು ಕೇಳಿದಾಗ ಟ್ರಂಪ್, ನಾನು ಎಲ್ಲರೊಂದಿಗೂ ಮಾತನಾಡುತ್ತೇನೆ. ಅವರೊಂದಿಗೂ ಮಾತನಾಡುತ್ತೇನೆ. "ತೈವಾನ್ ಸಮಸ್ಯೆ" ಪರಿಹರಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದರು. ಇದರ ಬೆನಲ್ಲೇ ಜೋಸೆಫ್ ಹೇಳಿಕೆ ಮಹತ್ವ ಪಡೆದುಕೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com