ಭೂಕಂಪ ಪೀಡಿತ ಟರ್ಕಿಯಲ್ಲಿ 6 ವರ್ಷದ ಬಾಲಕಿಯನ್ನು ರಕ್ಷಿಸಿದ ಎನ್ ಡಿಆರ್ ಎಫ್ ತಂಡಭೂಕಂಪ ಪೀಡಿತ ಟರ್ಕಿಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಭಾರತದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್)ಯ ತಂಡ ಗುರುವಾರ ಗಾಜಿಯಾಂಟೆಪ್‌ನಲ್ಲಿ ಅವಶೇಷಗಳಡಿ ಸಿಲುಕಿದ್ದ...
ಟರ್ಕಿ, ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಮೃತರ ಸಂಖ್ಯೆ 19,300ಕ್ಕೂ ಹೆಚ್ಚು ಏರಿಕೆ!ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಹಾನಿಗೊಳಗಾದ ಪ್ರದೇಶದಲ್ಲಿ ಕುಸಿದ ಮನೆಗಳ ಅವಶೇಷಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮೃತದೇಹಗಳನ್ನು ಹೊರತೆಗೆಯಲಾಗಿದ್ದು ಸಾವಿನ ಸಂಖ್ಯೆ 19,300ಕ್ಕೆ ಏರಿದೆ.
ಆಸ್ಟ್ರೇಲಿಯಾದ ರಕ್ಷಣಾ ಪ್ರದೇಶಗಳಿಂದ ಚೀನಾ ಮೇಡ್ ಕ್ಯಾಮರಾಗಳಿಗೆ ಗೇಟ್ ಪಾಸ್!ಸರ್ಕಾರಿ ಕಟ್ಟಡಗಳು, ರಕ್ಷಣಾ ಪ್ರದೇಶಗಳ ಸುರಕ್ಷತೆಯ ದೃಷ್ಟಿಯಿಂದ ಆಸ್ಟ್ರೇಲಿಯಾ ಅಲ್ಲಿ ಅಳವಡಿಸಲಾಗಿರುವ ಚೀನಾ ಮೇಡ್ ಕ್ಯಾಮರಾಗಳನ್ನು ತೆಗೆದುಹಾಕಲು ನಿರ್ಧರಿಸಿದೆ.
ಪ್ರಬಲ ಭೂಕಂಪಕ್ಕೆ ನಲುಗಿದ ಟರ್ಕಿ-ಸಿರಿಯಾ: ದಿನೇ ದಿನೇ ಏರುತ್ತಲೇ ಇರುವ ಸಾವಿನ ಲೆಕ್ಕ, 16,000 ದಾಟಿದ ಮೃತರ ಸಂಖ್ಯೆಎರಡು ದಶಕಗಳಳ್ಲೇ ಭೀಕರವಾದ ಭೂಕಂಪದಿಂದ ನಲುಗಿರುವ ಟರ್ಕಿ ಹಾಗೂ ಸಿರಿಯಾದಲ್ಲಿ ಈ ವರೆಗೆ ಸಾವಿಗೀಡಾದವರ ಸಂಖ್ಯೆ 16,000ಕ್ಕೆ ಏರಿಕೆಯಾಗಿದೆ. ಈ ಪೈಕಿ ಟರ್ಕಿಯಲ್ಲಿ ಒಂದರಲ್ಲಿಯೇ 12,873 ಮಂದಿ ಸಾವನ್ನಪ್ಪಿದ್ದರೆ, ಸಿರಿಯಾದಲ್ಲಿ 3,162 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಸಿಂಧ್ ಪ್ರಾಂತ್ಯದ 190 ಹಿಂದೂಗಳನ್ನು ಭಾರತಕ್ಕೆ ಪ್ರಯಾಣಿಸದಂತೆ ತಡೆದ ಪಾಕ್ ಅಧಿಕಾರಿಗಳು: ವರದಿಸಿಂಧ್ ಪ್ರಾಂತ್ಯದಲ್ಲಿ ವಾಸಿಸುತ್ತಿರುವ 190 ಹಿಂದೂಗಳು ನೆರೆಯ ದೇಶಕ್ಕೆ ಭೇಟಿ ನೀಡುತ್ತಿರುವ ಉದ್ದೇಶದ ಬಗ್ಗೆ ತೃಪ್ತಿಕರ ಪ್ರತಿಕ್ರಿಯೆಯನ್ನು ನೀಡದ ಕಾರಣ ಪಾಕಿಸ್ತಾನದ ಅಧಿಕಾರಿಗಳು ಭಾರತಕ್ಕೆ ಪ್ರಯಾಣಿಸುವುದನ್ನು ತಡೆದು ನಿಲ್ಲಿಸಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಟರ್ಕಿ-ಸಿರಿಯಾ ಭೂಕಂಪ: 17 ಗಂಟೆಗಳ ಕಾಲ ಅವಶೇಷದ ಕೆಳಗೆ ಸಿಲುಕಿದ ತಮ್ಮನನ್ನು ಕಾಪಾಡಿದ ಏಳು ವರ್ಷದ ಬಾಲಕಿ! ಮನಕಲಕುವ ವಿಡಿಯೋಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದ ಪರಿಣಾಮ ಅವಶೇಷಗಳ ಕೆಳಗೆ ಸಿಲುಕಿರುವ ಏಳು ವರ್ಷದ ಬಾಲಕಿ ತನ್ನ ಪುಟ್ಟ ತಮ್ಮನ ತಲೆಯನ್ನು ರಕ್ಷಿಸುತ್ತಿರುವ ಪೋಟೋ ಮನಸ್ಸು ಕರಗಿಸುವಂತಿದೆ.
'ಮೇಡ್ ಇನ್ ಅಮೆರಿಕ' ನಮ್ಮ ಮೊದಲ ಆದ್ಯತೆ: ಜೊ ಬೈಡನ್ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು 'ಮೇಡ್ ಇನ್ ಅಮೇರಿಕಾ' ತಮ್ಮ ಆಡಳಿತದ ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ. ದೇಶದಲ್ಲಿ ಸೇತುವೆಗಳು, ರಸ್ತೆಗಳು ಮತ್ತು ಹೆದ್ದಾರಿಗಳನ್ನು ಅಮೆರಿಕದಲ್ಲಿನ ನಿರ್ಮಾಣ ಸಾಮಗ್ರಿಗಳಿಂದ ಮಾಡಲಾಗುವುದು ಎಂದು ಘೋಷಿಸಿದರು.
ನಾವು ಸ್ಪರ್ಧೆ ಬಯಸುತ್ತೇವೆಯೇ ಹೊರತು ಸಂಘರ್ಷವಲ್ಲ, ಚೀನಾಗೆ ಇದನ್ನೇ ನಾವು ಸ್ಪಷ್ಟಪಡಿಸಿದ್ದೇವೆ: ಜೊ ಬೈಡನ್ಚೀನಾ ನಮ್ಮ ಸಾರ್ವಭೌಮತೆಗೆ, ನಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆಯನ್ನುಂಟುಮಾಡಿದರೆ ನಮ್ಮ ದೇಶವನ್ನು ನಾವು ರಕ್ಷಣೆ ಮಾಡಬೇಕಾಗುತ್ತದೆ. ಚೀನಾ ಜೊತೆ ಪೈಪೋಟಿ ನಡೆಸಿ ಗೆಲ್ಲಲು ನಾವೆಲ್ಲರೂ ಮೊದಲು ಒಗ್ಗಟ್ಟಾಗಬೇಕು ಎಂದು ಅಮೆರಿಕ ಅಧ್ಯಕ್ಷ ಜೊ ಬೈಡನ್ ಹೇಳಿದ್ದಾರೆ.
ಟರ್ಕಿಯಲ್ಲಿ ಮತ್ತೆರಡು ಬಾರಿ ಪ್ರಬಲ ಕಂಪನ: ಮೃತರ ಸಂಖ್ಯೆ 7,900ಕ್ಕೆ ಏರಿಕೆ; ರಕ್ಷಣಾ ಕಾರ್ಯಾಚರಣೆಗೆ ಹಿಮಪಾತ ಅಡ್ಡಿಭೂಕಂಪನದ ಮಹಾ ದುರಂತಕ್ಕೆ ಟರ್ಕಿ ಹಾಗೂ ಸಿರಿಯಾ ರಾಷ್ಟ್ರಗಳು ಅಕ್ಷರಶಃ ತತ್ತರಿಸಿ ಹೋಗಿವೆ. ಪ್ರಬಲ ಭೂಕಂಪನದಿಂದಾಗಿ ಕಟ್ಟಡಗಳು ನೆಲಸಮಗೊಂಡಿದ್ದು, ಜನರ ಆಕ್ರಂದನ, ನೆರವಾಗಿನ ಕೂಗು ಮುಗಿಲು ಮುಟ್ಟಿದೆ. ಈ ನಡುವೆ ಒಂದರ ಮೇಲೊಂದರಂತೆ ಕಂಪನಗಳು ಎದುರಾಗುತ್ತಿದ್ದು, ಜನಜೀವನವನ್ನು ಮತ್ತಷ್ಟು ಛಿದ್ರಗೊಳಿಸಿದೆ.
ಟರ್ಕಿ, ಸಿರಿಯಾದಲ್ಲಿ ಸರಣಿ ಭೂಕಂಪ: ಸಾವಿನ ಸಂಖ್ಯೆ 6200ಕ್ಕೆ ಏರಿಕೆ, ತುರ್ತು ಪರಿಸ್ಥಿತಿ ಘೋಷಣೆಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಸಂಭವಿಸಿದ ಅತ್ಯಂತ ಪ್ರಬಲ ಸರಣಿ ಭೂಕಂಪದಿಂದ ಮೃತಪಟ್ಟವರ ಸಂಖ್ಯೆ 6,300ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ.
2000 ಇಸವಿಯಿಂದೀಚೆಗೆ ಜಗತ್ತಿನಲ್ಲಿ ಸಂಭವಿಸಿದ ಮಾರಣಾಂತಿಕ ಭೂಕಂಪಗಳ ಕುರಿತು ಒಂದು ಹಿನ್ನೋಟನಿನ್ನೆ ಸೋಮವಾರ ಟರ್ಕಿ ಮತ್ತು ಸಿರಿಯಾದಲ್ಲಿ ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಎರಡು ದೇಶಗಳಲ್ಲಿ ಸುಮಾರು 5 ಸಾವಿರ ನಾಗರಿಕರು ಮೃತಪಟ್ಟಿದ್ದಾರೆ. ಶೀತ ಮತ್ತು ಹಿಮದಲ್ಲಿ ಕಟ್ಟಡಗಳ ಅವಶೇಷಗಳಲ್ಲಿ ಸಿಕ್ಕಿಬಿದ್ದ ಜನರನ್ನು ಕಾಪಾಡುವುದು ರಕ್ಷಣಾಪಡೆಗಳಿಗೆ ಕಠಿಣ ಸವಾಲಿನ ಕೆಲಸವಾಗಿದೆ.
ಟರ್ಕಿ-ಸಿರಿಯಾ ಭೂಕಂಪ: ಸಾವಿನ ಸಂಖ್ಯೆ 5 ಸಾವಿರಕ್ಕೆ ಏರಿಕೆ: ಸಾವಿರಾರು ಕಟ್ಟಡ ನೆಲಸಮ, ರಕ್ಷಣಾ ಕಾರ್ಯಕ್ಕೆ ಅಡಚಣೆಟರ್ಕಿ ಮತ್ತು ಸಿರಿಯಾದಲ್ಲಿ ನಿನ್ನೆ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 5 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ರಕ್ಷಕರು ಬದುಕುಳಿದವರಿಗಾಗಿ ಬರಿ ಕೈಗಳಿಂದ ನೆಲವನ್ನು ಅಗೆಯುತ್ತಿರುವಾಗಲೇ ಕಣ್ಣೆದುರೇ ಸಾವಿರಾರು ಕಟ್ಟಡಗಳು ಧರೆಗುರುಳಿವೆ.
ಟರ್ಕಿ-ಸಿರಿಯಾ ಪ್ರಬಲ ಮಾರಣಾಂತಿಕ ಭೂಕಂಪದಲ್ಲಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದು ಹೇಗೆ?ಟರ್ಕಿ ಮತ್ತು ಸಿರಿಯಾದಲ್ಲಿ ನಿನ್ನೆ ಸೋಮವಾರ ಮುಂಜಾನೆ ಸಂಭವಿಸಿದ ಪ್ರಬಲ ಭೂಕಂಪನಕ್ಕೆ ಅದರ ಸಮಯ, ಸ್ಥಳ, ತುಲನಾತ್ಮಕವಾಗಿ ದೋಷ ರೇಖೆ ಮತ್ತು ಕುಸಿದ ಕಟ್ಟಡಗಳ ದುರ್ಬಲ ನಿರ್ಮಾಣ ಮಾರಣಾಂತಿಕವಾಗಿತ್ತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
'ಧರ್ಮನಿಂದನೆ'ಗಾಗಿ ವಿಕಿಪೀಡಿಯಾ ಮೇಲೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಿದ ಪಾಕಿಸ್ತಾನಧರ್ಮನಿಂದನೆಯ ವಿಷಯವನ್ನು ತೆಗೆದುಹಾಕುವಲ್ಲಿ ವಿಫಲವಾದ ಕಾರಣಕ್ಕಾಗಿ ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ ಎನ್‌ಸೈಕ್ಲೋಪೀಡಿಯಾಗೆ ನಿರ್ಬಂಧ ವಿಧಿಸಿದ ಎರಡು ದಿನಗಳ ನಂತರ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ವಿಕಿಪೀಡಿಯಾ ಮೇಲೆ ವಿಧಿಸಿರುವ ನಿರ್ಬಂಧ ತೆರವಿಗೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಪ್ರಬಲ ಸರಣಿ ಭೂಕಂಪಕ್ಕೆ ನಲುಗಿದ ಟರ್ಕಿ, ಸಿರಿಯಾ; ಸಾವಿನ ಸಂಖ್ಯೆ 2300ಕ್ಕೆ ಏರಿಕೆಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪದಿಂದ ಮೃತಪಟ್ಟವರ ಸಂಖ್ಯೆ 2,300ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!