5ಜಿ ಯೋಜನೆಯಿಂದ ಚೀನಾ ಸಂಸ್ಥೆಯನ್ನು ಬಹಿಷ್ಕರಿಸಿದ ಬ್ರಿಟನ್!ಚೀನಾ ವಿರುದ್ಧ ಅಮೆರಿಕ ಹೆಣೆಯುತ್ತಿರುವ ಜಾಗತಿಕ ಮಟ್ಟದ ಸಮರದಲ್ಲಿ ಮಹತ್ವದ ಬೆಳವಣಿಗೆ ವರದಿಯಾಗಿದ್ದು, ಅಮೆರಿಕಾದ ಒತ್ತಡಕ್ಕೆ ಬ್ರಿಟನ್ ಮಣಿದಿದೆ.
'ಅಯೋಧ್ಯೆ ಭಾರತದಲ್ಲಿಲ್ಲ, ನೇಪಾಳದಲ್ಲಿದೆ' ನೇಪಾಳ ಪ್ರಧಾನಿ ಹೇಳಿಕೆಗೆ ಅಲ್ಲಿನ ವಿದೇಶಾಂಗ ಇಲಾಖೆ ಕೊಟ್ಟ ಸ್ಪಷ್ಟತೆ ಏನು ಗೊತ್ತೇ?ಅಯೋಧ್ಯೆ ಭಾರತದಲ್ಲಿಲ್ಲ, ನಿಜವಾದ ಅಯೋಧ್ಯೆ ಇರುವುದು ನೇಪಾಳದಲ್ಲಿ ರಾಮ ನೇಪಾಳದವನು ಎಂಬ ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ ಹೇಳಿಕೆಗೆ ಅಲ್ಲಿನ ವಿದೇಶಾಂಗ ಇಲಾಖೆ ತೇಪೆ ಹಚ್ಚುವ ಕೆಲಸ ಮಾಡಿ ಸ್ಪಷ್ಟನೆ ನೀಡಲು ಯತ್ನಿಸಿದೆ.
ವಿದೇಶಿ ವಿದ್ಯಾರ್ಥಿಗಳಿಗೆ ನೂತನ ನೀತಿ: ಟ್ರಂಪ್ ಆಡಳಿತ ವಿರುದ್ಧ ಗೂಗಲ್ ಸೇರಿದಂತೆ ಅಮೆರಿಕದ 17 ಕಂಪನಿಗಳ ಮೊಕದ್ದಮೆವಿದೇಶಿ ವಿದ್ಯಾರ್ಥಿಗಳು ಅಮೆರಿಕದಲ್ಲಿ ಉಳಿಯುವುದನ್ನು ತಡೆಯುವ ಟ್ರಂಪ್ ಆಡಳಿತದ ಇತ್ತೀಚಿನ ಹೊಸ ನೀತಿಯ ವಿರುದ್ಧ ಹಾರ್ವಡ್ ವಿಶ್ವವಿದ್ಯಾಲಯ ಮತ್ತು ಎಂಐಟಿ ಸಲ್ಲಿಸಿರುವ ಮೊಕದ್ದಮೆಗೆ ಇದೀಗ ಗೂಗಲ್, ಫೇಸ್ ಬುಕ್ ಮತ್ತು ಮೈಕ್ರೋಸಾಫ್ಟ್ ಸೇರಿದಂತೆ ಅಮೆರಿಕಾದ ಒಂದು ಡಜನ್ ಗೂ ಹೆಚ್ಚು ತಂತ್ರಜ್ಞಾನ ಕಂಪನಿಗಳು ಕೂಡಾ ಸೇರಿಕೊಂಡಿವೆ.
ಕೊರೋನಾ ವೈರಸ್: ಜಾಗತಿಕ ಸೋಂಕಿತರ ಸಂಖ್ಯೆ 1 ಕೋಟಿ 31 ಲಕ್ಷ, 5.73 ಲಕ್ಷ ಮಂದಿ ಸಾವುಜಗತ್ತಿನಾದ್ಯಂತ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ದಿನದಿಂದ ಏರಿಕೆಯಾಗುತ್ತಿದ್ದು, ಭಾನುವಾರ ಸಂಜೆ ವೇಳೆಗೆ ಜಾಗತಿಕ ಸೋಂಕಿತರ ಸಂಖ್ಯೆ 1 ಕೋಟಿ 31 ಲಕ್ಷಕ್ಕೇರಿದೆ. ಸಾವಿನ ಸಂಖ್ಯೆ 5 ಲಕ್ಷದ 73 ಸಾವಿರ ದಾಟಿದೆ.
ಹಾಲಿವುಡ್ ನಟಿ ನಯ ರಿವೇರಾ ಮೃತದೇಹ ಕ್ಯಾಲಿಫೋರ್ನಿಯಾ ಕಣಿವೆಯಲ್ಲಿ ಪತ್ತೆಕಳೆದ ವಾರ ಕ್ಯಾಲಿಫೋರ್ನಿಯಾ ಕಣಿವೆಯಲ್ಲಿ ಬೋಟ್ ಮಗುಚಿ ನಾಪತ್ತೆಯಾಗಿದ್ದ ಹಾಲಿವುಡ್ನ ಖ್ಯಾತ ನಟಿ ನಯ ರಿವೇರಾ ಮೃತದೇಹ ಸೋಮವಾರ ಪತ್ತೆಯಾಗಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.
130 ಮಿಲಿಯನ್ ಮಂದಿಯನ್ನು ಹಸಿವಿಗೆ ದೂಡಿದ ಕೊರೋನಾ ವೈರಸ್: ವಿಶ್ವಸಂಸ್ಥೆಜಗತ್ತಿನ 210 ದೇಶಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಜಗತ್ತಿನಾದ್ಯಂತ 130 ಮಿಲಿಯನ್ ಮಂದಿಯನ್ನು ಹಸಿವಿಗೆ ದೂಡಲಿದೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
ಶ್ರೀರಾಮ ಭಾರತೀಯನಲ್ಲ, ಆತ ನೇಪಾಳಿ, ನಿಜವಾದ ಅಯೋಧ್ಯೆ ನೇಪಾಳದಲ್ಲಿದೆ: ಪ್ರಧಾನಿ ಕೆಪಿ ಶರ್ಮಾ ಒಲಿಹಿಂದೂಗಳ ಆರಾಧ್ಯ ದೈವ ಶ್ರೀರಾಮ ಭಾರತೀಯನಲ್ಲ, ಆತ ನೇಪಾಳಿ. ನಿಜವಾದ ಅಯೋಧ್ಯೆ ನೇಪಾಳದಲ್ಲಿದೆ ಎಂದು ಪ್ರಧಾನಿ ಕೆಪಿ ಶರ್ಮಾ ಒಲಿ ಹೇಳಿದ್ದಾರೆ.
ರಷ್ಯಾದಲ್ಲಿ ವಿಶ್ವದ ಮೊದಲ ಕೋವಿಡ್-19 ಲಸಿಕೆಯ ಕ್ಲಿನಿಕಲ್ ಪ್ರಯೋಗ ಯಶಸ್ವಿ!ಮಾಸ್ಕೋ ವೈದ್ಯಕೀಯ ವಿಶ್ವವಿದ್ಯಾಲಯ ವಿಶ್ವದ ಮೊದಲ ಕೊರೋನಾ ವೈರಸ್ ಲಸಿಕೆಯ ಕ್ಲಿನಿಕಲ್ ಪ್ರಯೋಗವನ್ನು ಪೂರ್ಣಗೊಳಿಸಿದೆ ಎಂದು ಟ್ರಾನ್ಸ್ಲೇಷನಲ್ ಮೆಡಿಸಿನ್ ಅಂಡ್ ಬಯೋ ಟೆಕ್ನಾಲಜಿ ಸಂಸ್ಥೆಯ ನಿರ್ದೇಶಕ ವಾಡಿಮ್ ತಾರಸೊವ್ ತಿಳಿಸಿದ್ದಾರೆ.
ನೆಲ್ಸನ್ ಮಂಡೇಲಾ ಪುತ್ರಿ ಜಿಂದ್ಜಿ ವಿಧಿವಶ- ವರದಿಗಳುನೆಲ್ಸನ್ ಮಂಡೇಲಾ ಮತ್ತು ವಿನ್ನಿ ಮಡಿಕಿಜೆಲಾ ಮಂಡೇಲಾ ದಂಪತಿಯ ಪುತ್ರಿ ಜಿಂದ್ಜಿ ಮಂಡೇಲಾ ಹ್ಲಾಂಗ್ವಾನೆ ವಿಧಿವಶರಾಗಿದ್ದಾರೆ.ಅವರಿಗೆ 59 ವರ್ಷ ವಯಸ್ಸಾಗಿತ್ತು ಎಂದು ಸ್ಥಳೀಯ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.
ಜಾಗತಿಕ ಕೊರೊನವೈರಸ್ ಪ್ರಕರಣಗಳ ಸಂಖ್ಯೆ 1 ಕೋಟಿ 28 ಲಕ್ಷಕ್ಕೇರಿಕೆಜಾಗತಿಕ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಭಾನುವಾರ 1 ಕೋಟಿ 28 ಲಕ್ಷ ತಲುಪಿದ್ದರೆ, ಸಾವಿನ ಸಂಖ್ಯೆ 5 ಲಕ್ಷದ 67 ಸಾವಿರಕ್ಕಿಂತ ಹೆಚ್ಚಾಗಿದೆ.
ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾಸ್ಕ್ ಧರಿಸಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಇಷ್ಟು ದಿನ ಮಾಸ್ಕ್ ಧರಿಸುವುದಿಲ್ಲ ಎಂದು ಹಠ ಹಿಡಿಯುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊನೆಗೂ ಮಾಸ್ಕ್ ಧರಿಸಿದ್ದಾರೆ.
ಅಮೆರಿಕಾದಲ್ಲಿ ಕೊರೋನಾ ಸ್ಫೋಟ: ಒಂದೇ ದಿನ ಬರೋಬ್ಬರಿ 66,528 ಮಂದಿಯಲ್ಲಿ ವೈರಸ್ ದೃಢ!ವಿಶ್ವದ ದೊಡ್ಡಣ್ಣ ಅಮೆರಿಕಾ ರಾಷ್ಟ್ರವನ್ನು ಮಹಾಮಾರಿ ಕೊರೋನಾ ವೈರಸ್ ಬೆನ್ನು ಬಿಡದಂತೆ ಕಾಡುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 66,528 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಲಡಾಕ್ ನ ಪಾಂಗೊಂಗ್ ತ್ಸೋ ಪ್ರದೇಶದಿಂದ ಮತ್ತಷ್ಟು ಸೇನಾಪಡೆಯನ್ನು ಹಿಂತೆಗೆದುಕೊಂಡ ಚೀನಾ:ಮೂಲಗಳುಪೂರ್ವ ಲಡಾಕ್ ನ ಗಲ್ವಾನ್ ಕಣಿವೆಯ ಗಡಿ ವಾಸ್ತವ ರೇಖೆಯ ಪಾಂಗೊಂಗ್ ತ್ಸೋ ಬಳಿಯಿಂದ ತನ್ನ ಸೇನೆಯನ್ನು ಚೀನಾ ಮತ್ತಷ್ಟು ಹಿಂತೆಗೆದುಕೊಂಡಿದೆ ಎಂಬ ಮಾಹಿತಿ ಸಿಕ್ಕಿದೆ.
ಪಕ್ಷದ ಆಂತರಿಕ ಭಿನ್ನಾಭಿಪ್ರಾಯ ಸಹಜ, ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು- ನೇಪಾಳ ಪ್ರಧಾನಿರಾಜೀನಾಮೆಯ ಆಗ್ರಹದ ಒತ್ತಡದ ನಡುವೆ ದೇಶವನ್ನುದ್ದೇಶಿಸಿ ಮಾತನಾಡಿರುವ ನೇಪಾಳದ ಪ್ರಧಾನಿ ಕೆ.ಪಿ ಶರ್ಮಾ ಓಲಿ, ಪಕ್ಷದ ಆಂತರಿಕ ಭಿನ್ನಾಭಿಪ್ರಾಯ ಸಹಜ, ಅವುಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಮಾಸ್ಕ್ ಧರಿಸಿ ಎಂದ ಬಸ್ ಚಾಲಕನ ಪ್ರಾಣ ತೆಗೆದ ಮೂವರು ಪ್ರಯಾಣಿಕರು!ಬಸ್ ಏರಿದ ಪ್ರಯಾಣಿಕರಿಗೆ ಮುಖ ಗವುಸು ಧರಿಸಲು ಸೂಚಿಸಿದ ಬಸ್ ಚಾಲಕನ ಮೇಲೆ ಕುಪಿತಗೊಂಡ ಮೂವರು ಕಬ್ಬಿಣದ ರಾಡುಗಳಿಂದ ಮನಸೋಇಚ್ಚೆ ಥಳಿಸಿದರು. ಇದರಿಂದ ತೀವ್ರ ಗಾಯಗೊಂಡ ಚಾಲಕ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾನೆ. ತಮ್ಮ ಒಳಿತಿಗಾಗಿ ಹೇಳಿದ್ದನ್ನು ಅರ್ಥ ಮಾಡಿಕೊಳ್ಳದೆ ವ್ಯಕ್ತಿಯ ಪ್ರಾಣವನ್ನು ತೆಗೆದ ಘಟನೆ ಫ್ರಾನ್ಸ್ ನಲ್ಲಿ ನಡೆದಿದೆ.
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!