ಕೈ ಹಿಡಿದು ನಡೆಸುವ ಕುಕ್ಕುಟ ಉದ್ಯಮ

ಭಾರತದಲ್ಲಿ ಕೋಳಿ ಸಾಕಾಣಿಕೆ ಪ್ರಾಚೀನ ಕಾಲದಿಂದಲೂ ಬೆಳೆದು ಬಂದಿದೆ. ಸಾವಿರಾರು ರೈತರು ಬೇಸಾಯದ ಜತೆಗೆ ಕೋಳಿಗಳನ್ನು ಸಾಕಿ ಪೂರಕ ಆದಾಯ ಪಡೆಯುತ್ತಿದ್ದಾರೆ. ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಭಾರತದಲ್ಲಿ ಕೋಳಿ ಸಾಕಾಣಿಕೆ ಪ್ರಾಚೀನ ಕಾಲದಿಂದಲೂ ಬೆಳೆದು ಬಂದಿದೆ. ಸಾವಿರಾರು ರೈತರು ಬೇಸಾಯದ ಜತೆಗೆ ಕೋಳಿಗಳನ್ನು ಸಾಕಿ ಪೂರಕ ಆದಾಯ ಪಡೆಯುತ್ತಿದ್ದಾರೆ. ಒಂದು ಉದ್ಯಮವಾಗಿ ಪರಿವರ್ತನೆಗೊಂಡಿದೆ. ಹಿಂದೆ ದೇಶೀಯ ಕೋಳಿಗಳಿಂದ ಮೊಟ್ಟೆ ಮತ್ತು ಮಾಂಸ ಉತ್ಪಾದಿಸಲಾಗುತ್ತಿತ್ತುಆದರೆ ಈಗ ನಾಟಿ ಕೋಳಿಗಳೇ ಅಲ್ಲದೆ ಗಿರಿರಾಜ, ಬ್ರಾಯ್ಲರ್, ಟೈಸನ್ ಮತ್ತಿತರ ಫಾರಂ ಕೋಳಿಗಳನ್ನೂ ಸಾಕುತ್ತಾರೆ.

ಉತ್ತಮ ನಿರ್ವಹಣಾ ವಿಧಾನಗಳು ಹಾಗೂ ಮಾರಾಟ ಸೌಕರ್ಯದಿಂದಾಗಿ, ಈ ಉದ್ಯಮ ದಿನೇ ದಿನೇ ಅಭಿವೃದ್ಧಿಗೊಳ್ಳುತ್ತಾ ಬಂದಿದೆ. ಉತ್ತಮ ಜಾತಿಯ ಕೋಳಿಗಳಿಂದ ಅಧಿಕ ಮೊಟ್ಟೆ ಮತ್ತು ಮಾಂಸ ಉತ್ಪಾದಿಸಲಾಗುತ್ತಿದೆ. ಕೋಳಿ ಸಾಕಾಣಿಕೆಗೆ ಬೇಕಾದ ಸ್ಥಳ ಬಹಳ ಕಡಿಮೆ. ಎಲ್ಲ ವರ್ಗದ ರೈತರು ಕೈಗೊಳ್ಳಬಹುದಾದ ಉದ್ಯಮ ಇದಾಗಿದೆ.

ಭೂಮಿ ಇಲ್ಲದವರಿಗೂ ಕೋಳಿ ಸಾಕಾಣಿಕೆ ಲಾಭದಾಯಕ ಉದ್ಯಮ. ಆಹಾರ ಧಾನ್ಯಗಳನ್ನು ಉಪಯೋಗಿಸಿಕೊಂಡು ಪೌಷ್ಟಿಕ ಮಾಂಸ ಉತ್ಪಾದನೆ ಮಾಡುವ ಪ್ರಾಣಿಗಳಲ್ಲಿ ಕೋಳಿ ಪ್ರಥಮ ಸ್ಥಾನದಲ್ಲಿದೆ. ಲಭ್ಯವಿರುವ ಬಹಳಷ್ಟು ಸುಧಾರಿತ ಕೋಳಿ ತಳಿಗಳನ್ನು ಭಾರತ ಹಾಗೂ ಏಷ್ಯಾ ಖಂಡದ ಹಲವಾರು ದೇಶಗಳಲ್ಲಿ ಕಂಡುಬರುವ ಕೆಂಪು ಕಾಡು ಕೋಳಿಗಳಿಂದ ಅಭಿವೃದ್ಧಿಪಡಿಸ ಲಾಗಿದೆ.

ಈ ತಳಿಗಳನ್ನು ಮಾಂಸದ ತಳಿಗಳು ಎಂದು ಎರಡು ಭಾಗ ಮಾಡಬಹುದು.

ಮಾಂಸದ ತಳಿಗಳು


ಇವು 5-6 ವಾರದಲ್ಲಿ ಸುಮಾರು 3.5 ಕಿ.ಗ್ರಾಂ. ಮೇವು ತಿಂದು 1.8 ರಿಂದ 2.0 ಕಿ.ಗ್ರಾಂ. ತೂಕ ಹೊಂದುತ್ತದೆ. ಇವುಗಳು ಬದುಕಿ ಉಳಿವ ಸಾಮರ್ಥ್ಯ ಶೇ. 98 ರಷ್ಟು ಇರುತ್ತದೆ.

ಮೊಟ್ಟೆ ತಳಿಗಳು
ಇವು ತಾವು ತಿನ್ನುವ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಮೊಟ್ಟೆ ಇಡಲು ಉಪಯೋಗಿಸುತ್ತವೆ. ಸುಮಾರು 17-18 ವಾರಗಳಲ್ಲಿ ಮೊಟ್ಟೆ ಇಡಲು ಪ್ರಾರಂಭ ಮಾಡುತ್ತವೆ. ವರ್ಷಕ್ಕೆ ಸರಾಸರಿ 310-330 ಮೊಟ್ಟೆ ಇಡಬಲ್ಲವು.

ಶೆಡ್ ವ್ಯವಸ್ಥೆ
ಕೋಳಿ ಸಾಕಣೆಗೆ ನಿರ್ಮಲವಾದ ವಾತಾವರಣ ಕಲ್ಪಿಸಿಕೊಡಲು ಉತ್ತಮವಾದ ವಸತಿ ವ್ಯವಸ್ಥೆ ಮಾಡಬೇಕು. ಕೋಳಿ ಮನೆ ಕಟ್ಟಲು ಯಾವುದೇ ಆಧುನಿಕ ಸಲಕರಣೆಗಳು ಬೇಕಾಗಿಲ್ಲ. ಸ್ಥಳೀಯವಾಗಿಯೇ ದೊರೆಯುವ ಮರಮುಟ್ಟುಗಳಿಂದ ಕಟ್ಟಬಹುದು.

ಆಹಾರ
ಕೋಳಿಗಳಿಗೆ ಉತ್ತಮ ಸಮತೋಲನ ವಾಗಿರುವ ಆಹಾರವನ್ನು ವೈಜ್ಞಾನಿಕ ರೀತಿಯಲ್ಲಿ ತಿನ್ನಿಸಬೇಕು. ಆಗ ಮಾತ್ರ ಕೋಳಿಗಳಿಂದ ಅಧಿಕ ಉತ್ಪಾದನೆಪಡೆಯಲು ಸಾಧ್ಯ. ಕೋಳಿ ಸಾಕಣೆಯ ಒಟ್ಟು ವೆಚ್ಚದಲ್ಲಿ ಶೇಕಡ 70-75 ರಷ್ಟು ಭಾಗ ಆಹಾರದ್ದಾಗಿರುತ್ತದೆ.

ಕೋಳಿ ಸಾಕಣೆಗೆ ಹಲವು ವಿಧಾನಗಳಿವೆ


ಮಾಂಸದ ಕೋಳಿ ಸಾಕಲು, ಕೋಳಿ ಒಂದಕ್ಕೆ ಒಂದು ಚದರಿ ಅಡಿ ಜಾಗ ಬೇಕು. ಬಿಸಿಲು ಹೆಚ್ಚಿರುವ ಕಡೆಗಳಲ್ಲಿ ಈ ವಿಧಾನವನ್ನು ಅನುಸರಿಸಬಹುದು. ಆದರೆ ರೋಗ ಹರಡುವ ಸಾಧ್ಯತೆ ಇರುತ್ತದೆ. ಈ ವಿಧಾನದಲ್ಲಿ ರೋಗ ಪೀಡಿತ ಕೋಳಿಗಳನ್ನು ಪ್ರಾರಂಭದ ಹಂತದಲ್ಲೇ ಬೇರ್ಪಡಿಸುವುದು ಕಷ್ಟ. ಮಾಂಸದ ಕೋಳಿಗಳನ್ನು ತಂತಿ ಜಾಲರಿಯ ಮೇಲು ಸಾಕಬಹುದು. ಈ ಪದ್ಧತಿಯಲ್ಲಿ ಮೇವು ಪೋಲಾಗುವುದು ಕಡಿಮೆಯಾಗುವುದಲ್ಲದೆ ರೋಗಗಳು ಹರಡುವ ಸಾಧ್ಯತೆಯೂ ಕಡಿಮೆ.

ಪಂಜರದ ಪದ್ಧತಿ
ಈ ಪದ್ಧತಿಯಲ್ಲಿ ಕೋಳಿಗಳನ್ನು ಪಂಜರದಲ್ಲಿಟ್ಟು ಸಾಕಲಾಗುತ್ತದೆ. ಒಂದು ಕೋಳಿಗೆ ಸುಮಾರು 70 ಚದರ ಅಂಗುಲ ಸ್ಥಳಾವಕಾಶ ಸಾಕು. ಓಡಾಡಲು ಬಿಡುವ ಕಾಲು ಹಾದಿಯನ್ನು ಸೇರಿಸಿ ಪ್ರತಿ ಕೋಳಿಗೆ 1 ಚದರ ಅಡಿಯಷ್ಟು ಜಾಗ ಬೇಕಾಗುತ್ತದೆ. ಈ ಪದ್ಧತಿಯಲ್ಲಿ ಕೋಳಿಗಳ ನಿರ್ವಹಣೆ ಸುಲಭ.

ಮರಿಗಳನ್ನು ತರುವ ಮುನ್ನ ಮಾಡಬೇಕಾದ ಪೂರ್ವ ಸಿದ್ಧತೆಗಳು
ಒಂದು ದಿನದ ಮರಿಗಳನ್ನು ಇಡಲು ವಿದ್ಯುತ್ ಬಲ್ಬುಗಳಿರುವ ಶಾಖದ ಬುಟ್ಟಿಯನ್ನು ಬಳಸಬೇಕಾಗುತ್ತದೆ. ಒಂದು ಶಾಖದ ಬುಟ್ಟಿಯ ಕೆಳಗೆ 200 ರಿಂದ 250 ಮರಿಗಳನ್ನು ಸಾಕಬಹುದು. ಶಾಖದ ಬುಟ್ಟಿಯನ್ನು ಪರೀಕ್ಷಿಸಿ ಮರಿಗಳನ್ನು ಬಿಡುವುದಕ್ಕೆ 6-8 ಗಂಟೆಗಳಷ್ಟು ಮೊದಲೇ ಅದರ ಜಾಗದಲ್ಲಿಟ್ಟು ದೀಪಗಳು ಉರಿಯುವಂತೆ ಮಾಡಬೇಕು. ನೆಲದ ಮೇಲೆ 2 ರಿಂದ 4 ಚೀಲ ಭತ್ತದ ಹೊಟ್ಟನ್ನು ಹರಡಿ ಅದರ ಮೇಲೆ ಕಾಗದ ಹರಡುವುದರಿಂದ ಎಳೆ ಮರಿಗಳು ಹೊಟ್ಟು ತಿಂದು ಸಾಯುವುದನ್ನು ತಪ್ಪಿಸಬಹುದು.

ದಿನಗಳು ಕಳೆದಂತೆ ಶಾಖ ಇಳಿಸುವುದರ ಜತೆಗೆ ಮರಿಗಳಿಗೆ ಸಾಕಷ್ಟು ಸ್ಥಳಾವಕಾಶ ಒದಗಿಸಲು ಮತ್ತು ಅವು ತೊಂದರೆ ಇಲ್ಲದೆ ಓಡಾಡುವಂತೆ ಮಾಡಲು ಮರಿ ತಡೆಯನ್ನು ವಿಸ್ತರಿಸಿ, ಶಾಖದ ಬುಟ್ಟಿಯನ್ನು ಮೇಲಕ್ಕೆ ಎತ್ತಿ ಕಟ್ಟಬೇಕು.

ಕಳೆದೊಂದು ದಶಕದಲ್ಲಿ ದೇಶೀಯ ಕುಕ್ಕುಟ ಉದ್ಯಮ ವಾರ್ಷಿಕ ಸರಾಸರಿ ಶೇ. 8 ರಿಂದ 10 ರಷ್ಟು ಪ್ರಗತಿ ಕಂಡಿದೆ. ಆದರೆ, ಆಹಾರ ಧಾನ್ಯಗಳ ಬೆಲೆಯಲ್ಲಿ ಏರಿಕೆಯಾಗಿರುವುದು, ಸಾರಿಗೆ ಮೂಲಸೌಕರ್ಯ ಮತ್ತು ಶೈತ್ಯಾಗಾರ ಕೊರತೆ, ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಹಕ್ಕಿ ಜ್ವರ, ಈ ಉದ್ಯಮಕ್ಕೆ ಸವಾಲಾಗಿವೆ.

ಕೋಳಿ ಸಾಕುವವರು ಸಾಂಪ್ರದಾಯಿಕ ತಳಿಗಿಂತ ಹೆಚ್ಚು ತೂಕ ಬರುವ ಮತ್ತು ವೇಗವಾಗಿ ಬೆಳೆಯುವ ಮಾಂಸದ ಕೋಳಿಗಳನ್ನೇ ಇಷ್ಟಪಡುತ್ತಿದ್ದಾರೆ. ಇದರಿಂದ ಕಳೆದ ಐದು ವರ್ಷಗಳಲ್ಲಿ ಮಾಂಸದ ಉತ್ಪಾದನೆ ಶೇ. 12ರಷ್ಟು ಹೆಚ್ಚಿದೆ. 2001ರಲ್ಲಿ 10 ಲಕ್ಷ ಟನ್‌ಗಳಷ್ಟಿದ್ದ ಮಾಂಸ ಉತ್ಪಾದನೆ 2012 ಕ್ಕೆ 34 ಲಕ್ಷ ಟನ್‌ಗೆ ಏರಿದೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com