ವಾಣಿಜ್ಯ

ಆಕಾಶದಲ್ಲಿ ಹೆಚ್ಚಿದ ಟ್ರಾಫಿಕ್ ದಟ್ಟಣೆ: ವಿಮಾನಗಳ ಹಾರಾಟ ಪ್ರಮಾಣ ಶೇ.67 ಪ್ರತಿಶತ ಏರಿಕೆ

Harshavardhan M

ನವದೆಹಲಿ: ದೇಶೀಯ ವೈಮಾನಿಕ ಕ್ಷೇತ್ರದಲ್ಲಿ ಕಡೆಗೂ ಚೇತರಿಕೆಯ ಎಲ್ಲಾ ಲಕ್ಷಣಗಳೂ ಗೋಚರಿಸಿವೆ. ವಿಮಾನಗಳ ಹಾರಾಟ ಪ್ರಮಾಣ ಅಕ್ಟೋಬರ್ ತಿಂಗಳಲ್ಲಿ ಶೇ.67 ಪ್ರತಿಶತ ಏರಿಕೆ ಕಂಡುಬಂದಿದೆ. ಒಟ್ಟು 88 ಲಕ್ಷ ವಿಮಾನ ಪ್ರಯಾಣಿಕರು ಹಾರಾಟ ನಡೆಸಿದ್ದಾರೆ.

ಕೊರೊನಾ ಸಾಂಕ್ರಾಮಿಕ ಕಾರಣದಿಂದ ವಿಮಾನ ಹಾರಾಟಗಳಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿತ್ತು. ಆ ಹಿನ್ನೆಲೆಯಲ್ಲಿ ವೈಮಾನಿಕ ಹಾರಾಟ ಕ್ಷೇತ್ರ ತೀವ್ರ ನಷ್ಟಕ್ಕೆ ಗುರಿಯಾಗಿತ್ತು. 

ಇದೀಗ ದೇಶೀಯ ವೈಮಾನಿಕ ಕ್ಷೇತ್ರ ಚೇತರಿಕೆಯ ಹಾದಿಯಲ್ಲಿದೆ. ಅದೇನೋ ಸರಿ ಆದರೆ ಈಗಲೂ ವಿಮಾನ ಕ್ಷೇತ್ರ ಇಂಧನ ಬೆಲೆಯೇರಿಕೆ ಸವಾಲನ್ನು ಎದುರಿಸುತ್ತಿದೆ. ಅಕ್ಟೋಬರ್ 18ರಂದು ಪೂರ್ಣ ಆಸನ ಸಾಮರ್ಥ್ಯದ ಪ್ರಯಾಣಿಕರನ್ನು ಒಯ್ಯಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು.

SCROLL FOR NEXT