ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

Indian Stock Market: ಮತ್ತೆ 'ಕರಡಿ ಕುಣಿತ'; ಸೆನ್ಸೆಕ್ಸ್ ಭಾರಿ ಕುಸಿತ; ಹೂಡಿಕೆದಾರರಿಗೆ 10 ಲಕ್ಷ ಕೋಟಿ ರೂ ನಷ್ಟ

ಇಂದು ಸೆನ್ಸೆಕ್ಸ್ 662.87 ಅಂಕಗಳನ್ನು ಕಳೆದುಕೊಂಡಿದ್ದು ದಿನದ ವಹಿವಾಟು ಅಂತ್ಯಕ್ಕೆ 79,402.29 ಅಂಕಗಳಿಗೆ ಕುಸಿದು ದಿನದ ವಹಿವಾಟು ಅಂತ್ಯಗೊಳಿಸಿದೆ. ಅಂತೆಯೇ ನಿಫ್ಟಿ ಕೂಡ 218.60 ಅಂಕಗಳ ಕುಸಿತಕಂಡಿದ್ದು, 24,180.80 ಅಂಕಗಳಿಗೆ ಕುಸಿದಿದೆ.

ಷೇರು ಮಾರುಕಟ್ಟೆ
Srinivasa Murthy VN
Updated On : 25 Oct 2024, 5:43 pm

ಮುಂಬೈ: ಸತತ ಕುಸಿತದ ಹಾದಿಯಲ್ಲಿದ್ದ ಭಾರತೀಯ ಷೇರುಮಾರುಕಟ್ಟೆ ಇಂದು ಮತ್ತೊಂದು ಭಾರಿ ಕುಸಿತಕ್ಕೆ ಸಾಕ್ಷಿಯಾಗಿದ್ದು, ಹೂಡಿಕೆದಾರರ 10 ಲಕ್ಷ ಕೋಟಿ ರೂ ನಷ್ಟವಾಗಿದೆ.

ಇಂದು ಸೆನ್ಸೆಕ್ಸ್ 662.87 ಅಂಕಗಳನ್ನು ಕಳೆದುಕೊಂಡಿದ್ದು ದಿನದ ವಹಿವಾಟು ಅಂತ್ಯಕ್ಕೆ 79,402.29 ಅಂಕಗಳಿಗೆ ಕುಸಿದು ದಿನದ ವಹಿವಾಟು ಅಂತ್ಯಗೊಳಿಸಿದೆ.

ಅಂತೆಯೇ ನಿಫ್ಟಿ ಕೂಡ 218.60 ಅಂಕಗಳ ಕುಸಿತಕಂಡಿದ್ದು, 24,180.80 ಅಂಕಗಳಿಗೆ ಕುಸಿದಿದೆ. ಇಂದು ಒಂದೇ ದಿನ ಭಾರತೀಯ ಷೇರುಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಬರೊಬ್ಬರಿ ಶೇ.0.83ರಷ್ಟು ಕುಸಿದಿದ್ದು, ನಿಫ್ಟಿ ಸೂಚ್ಯಂಕ ಕೂಡ ಶೇ.0.90ರಷ್ಟು ಕುಸಿದಿದೆ.

Advertisement

Advertisement

ಹೂಡಿಕೆದಾರರ 10 ಲಕ್ಷ ಕೋಟಿ ನಷ್ಟ

ಇನ್ನು ಇಂದಿನ ಮಾರುಕಟ್ಟೆ ಕುಸಿತದಿಂದಾಗಿ ಹೂಡಿಕೆದಾರರ 10 ಲಕ್ಷ ಕೋಟಿ ರೂ ನಷ್ಟವಾಗಿದ್ದು, ಬಿಎಸ್ ಇಯಲ್ಲಿ ಪಟ್ಟಿಮಾಡಲಾದ ಸಂಸ್ಥೆಗಳ ಷೇರುಗಳ ಮೌಲ್ಯ 437.76 ಲಕ್ಷ ಕೋಟಿಗೆ ಕುಸಿದಿದೆ.

Also Read

ಷೇರುಮಾರುಕಟ್ಟೆಯಲ್ಲಿ ಕರಡಿ ಕುಣಿತಕ್ಕೇನು ಕಾರಣ? (ಹಣಕ್ಲಾಸು)

ಕಂಪನಿಗಳ ನೀರಸ ಪ್ರದರ್ಶನ ಕಾರಣ!

ಇಂದಿನ ಭಾರಿ ಕುಸಿತಕ್ಕೆ 2ನೇ ತ್ರೈಮಾಸಿಕ ವರದಿಯಲ್ಲಿ ಭಾರತೀಯ ಕಂಪನಿಗಳ ನೀರಸ ಪ್ರದರ್ಶನ ಇಂದು ಮಾರುಕಟ್ಟೆ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ.

ಅಲ್ಲದೆ ಹೂಡಿಕೆದಾರರು ನಿರಂತರವಾಗಿ ವಿದೇಶಿ ಮಾರುಕಟ್ಟೆ ಮೇಲೆ ಹೂಡಿಕೆ ಮಾಡುತ್ತಿರುವುದು ಇಂದಿನ ನಕಾರಾತ್ಮಕ ವಹಿವಾಟಿಗೆ ಕಾರಣ ಎನ್ನಲಾಗಿದೆ. ಅಂತೆಯೇ ಖಾಸಗಿ ಸಾಲದಾತ ಬ್ಯಾಂಕಿಂಗ್ ಸಂಸ್ಥೆ ಇಂಡಸ್‌ಇಂಡ್ ಬ್ಯಾಂಕ್ ಮತ್ತು ಇಂಧನ ವಲಯದ NTPC ನಿರಾಶಾದಾಯಕ Q2 ಫಲಿತಾಂಶಗಳೂ ಕೂಡ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿವೆ ಎನ್ನಲಾಗಿದೆ.

ಇಂಡಸ್‌ಇಂಡ್ ಬ್ಯಾಂಕ್, ಮಹೀಂದ್ರಾ ಮತ್ತು ಮಹೀಂದ್ರಾ, ಲಾರ್ಸೆನ್ ಮತ್ತು ಟೂಬ್ರೊ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಹೆಚ್ಚು ನಷ್ಟ ಅನುಭವಿಸಿದ್ದು, ಒಟ್ಟಾರೆಯಾಗಿ ಸೆನ್ಸೆಕ್ಸ್‌ನಲ್ಲಿ ಇಂದಿನ ಕುಸಿತಕ್ಕೆ 418 ಅಂಕಗಳನ್ನು ನೀಡಿವೆ. ಹೆಚ್ಚುವರಿಯಾಗಿ, NTPC, HDFC ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇನ್ಫೋಸಿಸ್ ಮತ್ತು ಬಜಾಜ್ ಫೈನಾನ್ಸ್ ಕೂಡ ನಷ್ಟವನ್ನು ಅನುಭವಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments