ಪೆಟ್ರೋಲ್ ಪಂಪ್‌ನಲ್ಲಿ ಈ ಸೇವೆಗಳು ಫ್ರೀ-ಫ್ರೀ-ಫ್ರೀ!  Online Desk
ವಾಣಿಜ್ಯ

ಪೆಟ್ರೋಲ್ ಪಂಪ್‌ನಲ್ಲಿ ಈ ಸೇವೆಗಳು ಫ್ರೀ-ಫ್ರೀ-ಫ್ರೀ! ಏನೆಲ್ಲ ಸೇವೆ ಸಿಗುತ್ತೆ ಅಂತ ಗೊತ್ತಾ?

ಪೆಟ್ರೋಲ್ ಹಾಕಿಸೋಕೆ ಪಂಪ್‌ಗೆ ಹೋದಾಗ ನಾವು ಕೇವಲ ಇಂಧನಕ್ಕೆ ಮಾತ್ರ ಹಣ ಕೊಡ್ತೀವಿ. ಆದ್ರೆ ನಿಮಗೆ ಗೊತ್ತಾ, ಪೆಟ್ರೋಲ್ ಪಂಪ್‌ನಲ್ಲಿ ಇನ್ನೂ ಕೆಲವೊಂದು ಮುಖ್ಯವಾದ ಸೇವೆಗಳು ಸಂಪೂರ್ಣ ಫ್ರೀ-ಫ್ರೀ-ಫ್ರೀ ಆಗಿ ಸಿಗುತ್ತೆ ಅಂತಾ?

Petrol Pump Free Services: ಪೆಟ್ರೋಲ್ (Petrol) ಹಾಕಿಸೋಕೆ ಪಂಪ್‌ಗೆ (Petrol Pump) ಹೋದಾಗ ನಾವು ಕೇವಲ ಇಂಧನಕ್ಕೆ (Fuel) ಮಾತ್ರ ಹಣ ಕೊಡ್ತೀವಿ. ಆದ್ರೆ ನಿಮಗೆ ಗೊತ್ತಾ, ಪೆಟ್ರೋಲ್ ಪಂಪ್‌ನಲ್ಲಿ ಇನ್ನೂ ಕೆಲವೊಂದು ಮುಖ್ಯವಾದ ಸೇವೆಗಳು ಸಂಪೂರ್ಣ ಫ್ರೀ-ಫ್ರೀ-ಫ್ರೀ ಆಗಿ ಸಿಗುತ್ತೆ ಅಂತಾ?

ಹೌದು, ನಾವು ವಾಹನಕ್ಕೆ ಪೆಟ್ರೋಲ್ ಅಥವಾ ಡೀಸೆಲ್ (Diesel) ಹಾಕಿಸಲು ಪೆಟ್ರೋಲ್ ಪಂಪ್ ಗೆ ಹೋದಾಗ ಹಲವು ಸೇವೆಗಳನ್ನು ಉಚಿತವಾಗಿ (Free Services) ಪಡೆಯುವ ಹಕ್ಕು ನಮಗಿದೆ. ಆದರೆ ಹೆಚ್ಚಿನ ಜನರಿಗೆ ಈ ಬಗ್ಗೆ ಮಾಹಿತಿ ಇರುವುದಿಲ್ಲ. ಪೆಟ್ರೋಲ್ ಪಂಪ್ ನವರು ಕೆಲವೊಮ್ಮೆ ಈ ಸೇವೆಗಳಿಗೆ ಹಣ ಕೇಳುತ್ತಾರೆ. ಆದರೆ ಕೇಂದ್ರ ಸರ್ಕಾರದ (Central Government) ನಿಯಮದ ಪ್ರಕಾರ ಈ ಎಲ್ಲಾ ಸೇವೆಗಳು ಸಂಪೂರ್ಣ ಫ್ರೀ ಆಗಿವೆ. ಆ ಕುರಿತ ವರದಿ ಇಲ್ಲಿದೆ.

ಏನೆಲ್ಲ ಸೇವೆಗಳು ಫ್ರೀ ಫ್ರೀ ಫ್ರೀ?

ಉಚಿತ ಗಾಳಿ:

ನಿಮ್ಮ ವಾಹನದ ಟೈರ್‌ಗಳಿಗೆ ಉಚಿತವಾಗಿ ಗಾಳಿ ತುಂಬಿಸಿಕೊಳ್ಳಬಹುದು. ಹೌದು, ಪ್ರತಿ ಬಂಕ್‌ನಲ್ಲೂ ಡಿಜಿಟಲ್ ಏರ್ ಫಿಲ್ಲರ್ ಯಂತ್ರ ಮತ್ತು ಅದಕೊಬ್ಬ ಸಿಬ್ಬಂದಿ ಇರುವುದು ಕಡ್ಡಾಯ. ಇದಕ್ಕೆ ಯಾವುದೇ ಟಿಪ್ಸ್ ಅಥವಾ ಹಣ ನೀಡುವ ಅಗತ್ಯವಿಲ್ಲ.

ಸ್ವಚ್ಛವಾದ ಶೌಚಾಲಯ:

ತುರ್ತು ಸಂದರ್ಭಗಳಲ್ಲಿ ಅಥವಾ ಪ್ರಯಾಣದ ವೇಳೆಯಲ್ಲಿ ಬಂಕ್‌ನಲ್ಲಿರುವ ಶೌಚಾಲಯವನ್ನು ಉಚಿತವಾಗಿ ಬಳಸಬಹುದು. ಅದರಂತೆ ಶೌಚಾಲಯವು ಸ್ವಚ್ಛವಾಗಿರಬೇಕು, ಜೊತೆಗೆ ಅದರಲ್ಲಿ ಸರಿಯಾದ ಲೈಟಿಂಗ್ ಮತ್ತು ನೀರಿನ ವ್ಯವಸ್ಥೆ ಇರಬೇಕು.

ಶುದ್ಧ ಕುಡಿಯುವ ನೀರು:

ಬಂಕ್‌ಗೆ ಬರುವ ಗ್ರಾಹಕರಿಗೆ ಕುಡಿಯಲು ಶುದ್ಧ ಹಾಗೂ ತಂಪಾದ ನೀರಿನ ವ್ಯವಸ್ಥೆ ಇರಬೇಕು. ಹೌದು, ಬಂಕ್‌ಗಳಲ್ಲಿ RO ವಾಟರ್ ಪ್ಯೂರಿಫೈರ್ ಅಳವಡಿಸುವುದು ಕಡ್ಡಾಯವಾಗಿದೆ. ನೀವು ಅಲ್ಲಿ ನೀರು ಕುಡಿಯಬಹುದು ಅಥವಾ ನಿಮ್ಮ ಬಾಟಲಿಗಳಿಗೂ ತುಂಬಿಸಿಕೊಳ್ಳಬಹುದು.

ಇಂಧನದ ಗುಣಮಟ್ಟ:

ನೀವು ಖರೀದಿಸುವ ಪೆಟ್ರೋಲ್ ಅಥವಾ ಡೀಸೆಲ್‌ನಲ್ಲಿ ಕಲಬೆರಕೆ ಇದೆ ಎಂಬ ಸಂಶಯ ಬಂದರೆ, ಅದನ್ನು ಉಚಿತವಾಗಿ ಪರೀಕ್ಷಿಸಬಹುದು. ಅದರಂತೆ ಇಂಧನದ ಶುದ್ಧತೆ ತಿಳಿಯಲು ಫಿಲ್ಟರ್ ಪೇಪರ್ ಟೆಸ್ಟ್ ಮತ್ತು ಪ್ರಮಾಣದ ನಿಖರತೆ ತಿಳಿಯಲು 5 ಲೀಟರ್ ಪ್ರಮಾಣೀಕೃತ ಜಾರ್ ಕೇಳುವ ಹಕ್ಕು ನಿಮಗಿದೆ. ಇದನ್ನು ಯಾವುದೇ ಕಾರಣಕ್ಕೂ ಸಿಬ್ಬಂದಿ ನಿರಾಕರಿಸುವಂತಿಲ್ಲ.

ಪ್ರಥಮ ಚಿಕಿತ್ಸಾ ಪೆಟ್ಟಿಗೆ:

ರಸ್ತೆಯಲ್ಲಿ ಹೋಗುವಾಗ ಸಣ್ಣಪುಟ್ಟ ಅಪಘಾತ ಸಂಭವಿಸಿದರೆ ಅಥವಾ ಯಾರಿಗಾದರೂ ಗಾಯಗಳಾದರೆ ಪ್ರಥಮ ಚಿಕಿತ್ಸೆ ಪಡೆಯಬಹುದು. ಹಾಗಾಗಿ, ಪ್ರತಿ ಪೆಟ್ರೋಲ್ ಪಂಪ್‌ನಲ್ಲೂ ಬ್ಯಾಂಡೇಜ್, ಆಂಟಿಸೆಪ್ಟಿಕ್ ಮತ್ತು ಔಷಧಿಗಳಿರುವ ಫಸ್ಟ್ ಏಡ್ ಬಾಕ್ಸ್ ಇರಲೇಬೇಕು.

ಈ ಸೇವೆಗಳನ್ನು ನಿರಾಕರಿಸಿದರೆ ಏನು ಮಾಡಬೇಕು?

ಒಂದು ವೇಳೆ ಯಾವುದೇ ಪೆಟ್ರೋಲ್ ಪಂಪ್‌ನಲ್ಲಿ ಈ ಮೇಲಿನ ಉಚಿತ ಸೌಲಭ್ಯಗಳನ್ನು ನೀಡಲು ನಿರಾಕರಿಸಿದರೆ ಅಥವಾ ಹಣ ಕೇಳಿದರೆ, ನೀವು ಅವರ ವಿರುದ್ಧ PG Portal ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ದೂರು ದಾಖಲಿಸಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿಯಿಂದ ಸಿಟಿ ರೌಂಡ್ಸ್

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಮುಹೂರ್ತ ಫಿಕ್ಸ್; ಹೀಗಿದೆ ನಾಡಹಬ್ಬದ ವೇಳಾಪಟ್ಟಿ...

ಆರ್ ಎಸ್ಎಸ್ ಸಭೆ ನಡೆದಾಗಲೆಲ್ಲಾ ಅನೇಕ ಅನಾಹುತಗಳಾಗಿವೆ- ಬಿಕೆ ಹರಿಪ್ರಸಾದ್

ದೀದಿಗೆ ಮತ್ತೊಂದು ಶಾಕ್; ಮಮತಾ ನೇತೃತ್ವದ TMC ಬಣದ 12 ಬ್ಯಾಂಕ್ ಖಾತೆ ಫ್ರೀಜ್ ಮಾಡಿದ ಪೋಲೀಸರು!

2029ರ ಲೋಕಸಭೆ ಚುನಾವಣೆಯಿಂದಲೇ 'ಒಂದು ರಾಷ್ಟ್ರ–ಒಂದು ಚುನಾವಣೆ' ಜಾರಿ ಸಾಧ್ಯತೆ: JPC ಮುಖ್ಯಸ್ಥ ಪಿ.ಪಿ ಚೌಧರಿ