ಮುಕೇಶ್ ಅಂಬಾನಿ, ಅದಾನಿ. 
ವಾಣಿಜ್ಯ

India Rich List 2026: ಮುಕೇಶ್ ಅಂಬಾನಿಯನ್ನೇ ಹಿಂದಿಕ್ಕಿದ ಗೌತಮ್ ಅದಾನಿ, ಭಾರತದ ಅತ್ಯಂತ ಶ್ರೀಮಂತ!

9.23 ಲಕ್ಷ ಕೋಟಿ ರೂಪಾಯಿ ನಿವ್ವಳ ಆಸ್ತಿ ಮೌಲ್ಯದೊಂದಿಗೆ, ಅದಾನಿ ಕುಟುಂಬವು, ರಿಲಯನ್ಸ್ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬವನ್ನು ಹಿಂದಿಕ್ಕಿದೆ.

ನವದೆಹಲಿ: ಖ್ಯಾತ ಉದ್ಯಮಿ ಹಾಗೂ ದೇಶದ ಅತ್ಯಂತ ಶ್ರೀಮಂತರಾಗಿದ್ದ ಮುಕೇಶ್ ಅಂಬಾನಿಯನ್ನೇ ಹಿಂದಿಕ್ಕಿದ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಮತ್ತು ಅವರ ಕುಟುಂಬವು 'M3M ಹುರುನ್ ಇಂಡಿಯಾ ರಿಚ್ ಲಿಸ್ಟ್ 2026'ರಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.

9.23 ಲಕ್ಷ ಕೋಟಿ ರೂಪಾಯಿ ನಿವ್ವಳ ಆಸ್ತಿ ಮೌಲ್ಯದೊಂದಿಗೆ, ಅದಾನಿ ಕುಟುಂಬವು, ರಿಲಯನ್ಸ್ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬವನ್ನು ಹಿಂದಿಕ್ಕಿದೆ.

8.64 ಲಕ್ಷ ಕೋಟಿ ರೂಪಾಯಿ ನಿವ್ವಳ ಆಸ್ತಿ ಮೌಲ್ಯದೊಂದಿಗೆ ಅಂಬಾನಿ ಕುಟುಂಬವು ಎರಡನೇ ಸ್ಥಾನದಲ್ಲಿದ್ದರೆ, 3.40 ಲಕ್ಷ ಕೋಟಿ ರೂಪಾಯಿ ನಿವ್ವಳ ಆಸ್ತಿ ಮೌಲ್ಯದೊಂದಿಗೆ ಆರ್ಸೆಲರ್‌ಮಿತ್ತಲ್‌ನ ಎಲ್.ಎನ್. ಮಿತ್ತಲ್ ಮತ್ತು ಅವರ ಕುಟುಂಬ ನಂತರದ ಸ್ಥಾನದಲ್ಲಿದೆ.

ವರದಿಯ ಪ್ರಕಾರ, ಅದಾನಿ ಕುಟುಂಬದ ನಿವ್ವಳ ಆಸ್ತಿ ಮೌಲ್ಯವು ಶೇಕಡಾ 13 ರಷ್ಟು ಹೆಚ್ಚಾಗಿದೆ, ಆದರೆ ಅಂಬಾನಿ ಕುಟುಂಬದ ಸಂಪತ್ತು ಶೇಕಡಾ 10 ರಷ್ಟು ಕಡಿಮೆಯಾಗಿದೆ.

ತಮ್ಮ ಸಂಪತ್ತಿನಲ್ಲಿ ಶೇಕಡಾ 93 ರಷ್ಟು ಏರಿಕೆಯೊಂದಿಗೆ ಎಂಟು ಸ್ಥಾನಗಳಷ್ಟು ಮೇಲೇರಿದ ಮಿತ್ತಲ್ ಕುಟುಂಬವು ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಯುರೋಪ್‌ನಲ್ಲಿ ಉಕ್ಕು ವ್ಯಾಪಾರಕ್ಕೆ ಸಂಬಂಧಿಸಿದ ಕಠಿಣ ಕ್ರಮಗಳು ಮತ್ತು ಬೆಲೆ ನಿಗದಿ ನೀತಿಗಳು ಇದಕ್ಕೆ ಕಾರಣವೆಂದು ಹೇಳಲಾಗಿದೆ.

ಹುರುನ್ ವರದಿಯನ್ನು 1999ರಲ್ಲಿ ಲಂಡನ್‌ನಲ್ಲಿ ಸಂಶೋಧನೆ, ಐಷಾರಾಮಿ ಪ್ರಕಾಶನ ಮತ್ತು ಜಾಗತಿಕವಾಗಿ ಕಾರ್ಯನಿರ್ವಹಿಸುವ ಕಾರ್ಯಕ್ರಮಗಳ ಸಂಸ್ಥೆಯಾಗಿ ಸ್ಥಾಪಿಸಲಾಯಿತು. ಅನಾಸ್ ರಹಮಾನ್ ಜುನೈದ್ ನೇತೃತ್ವದಲ್ಲಿ 2012ರಲ್ಲಿ ಹುರುನ್ ಇಂಡಿಯಾ ಆರಂಭಗೊಂಡಿದ್ದು, ‘ಇಂಡಿಯಾ ರಿಚ್ ಲಿಸ್ಟ್’ ಮತ್ತು ‘ಇಂಡಿಯಾ 500’ ಸೇರಿದಂತೆ ವಿವಿಧ ಪಟ್ಟಿಗಳ ಮೂಲಕ ಸಂಪತ್ತು ಸೃಷ್ಟಿ, ನಾವೀನ್ಯತೆ ಮತ್ತು ಸಮಾಜಸೇವೆಯನ್ನು ಗುರುತಿಸುವ ಉದ್ದೇಶವನ್ನು ಇದು ಹೊಂದಿದೆ.

ಇಂಡಿಯಾ ರಿಚ್ ಲಿಸ್ಟ್ 2026ರಲ್ಲಿ 1,000 ಕೋಟಿಗೂ ಅಧಿಕ ಸಂಪತ್ತು ಹೊಂದಿರುವ 1,810 ಮಂದಿ ಸ್ಥಾನ ಪಡೆದಿದ್ದಾರೆ. ಇವರ ಒಟ್ಟು ಸಂಪತ್ತು ವರ್ಷದಿಂದ ವರ್ಷಕ್ಕೆ 12.8% ಹೆಚ್ಚಳವಾಗಿ 187.5 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೊಲೆ ಆರೋಪಿ ನಟ ದರ್ಶನ್​​ಗೆ ಮತ್ತೊಂದು ಶಾಕ್; ಮಾಫಿ ಸಾಕ್ಷಿ ಆದೇಶ ಪ್ರಶ್ನಿಸಿ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿ ವಜಾ!

ಆಂಧ್ರದಲ್ಲಿ ಭೀಕರ ದುರಂತ; ಹಳಿ ಮೇಲೆ ನಡೆದು ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ರೈಲು ಢಿಕ್ಕಿ, 4 ಸಾವು, ಓರ್ವ ಗಂಭೀರ! Video

'ಪಾಕಿಸ್ತಾನಕ್ಕೆ ಸರಿಯಾದ ಸಲಹೆ ನೀಡಿ': ಜಮ್ಮು- ಕಾಶ್ಮೀರ ಕುರಿತ ಹೇಳಿಕೆ ಬಗ್ಗೆ OIC ಗೆ ಭಾರತದ ತಿರುಗೇಟು!

ಗಂಡನಿಗೆ ಗೊತ್ತಾಗದಂತೆ ಹೆಂಡತಿ ಅಕೌಂಟ್‌ಗೆ 2 ಸಾವಿರ ಹಾಕ್ತೀವಿ ಅಂದಿದ್ದ ಸರ್ಕಾರಕ್ಕೆ ಈಗ ಯಜಮಾನನ ಆಧಾರ್ ಯಾಕೆ ಬೇಕು?

ರಾಜ್ಯ ಬಿಜೆಪಿ ಉಸ್ತುವಾರಿಗಳ ಬದಲಾವಣೆ; ಕರ್ನಾಟಕಕ್ಕೆ ಹೊಸ ಉಸ್ತುವಾರಿ ನೇಮಕ; ರಾಧಾಮೋಹನ್‌ ದಾಸ್‌ಗೆ ಕೊಕ್!