Indian Coast Guard Recruitment 2026: ಕರಾವಳಿ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸಿ ದೇಶ ಕಾಯುವ ಕನಸು ಹೊತ್ತಿರುವ ಯುವ ಸಮುದಾಯಕ್ಕೆ ಇಲ್ಲಿದೆ ಒಂದು ಮಹತ್ವದ ಮತ್ತು ಸುವರ್ಣಾವಕಾಶ. ಭಾರತೀಯ ಕರಾವಳಿ ರಕ್ಷಣಾ ಪಡೆಯು 365 ಹುದ್ದೆಗಳ ಬೃಹತ್ ನೇಮಕಾತಿಗಾಗಿ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ವಿಶೇಷವೆಂದರೆ ಈ ನೇಮಕಾತಿ ಪ್ರಕ್ರಿಯೆಯನ್ನು ಸಿಬ್ಬಂದಿ ಆಯ್ಕೆ ಆಯೋಗದ ಅಧಿಕೃತ ಪೋರ್ಟಲ್ ಮೂಲಕ ನಡೆಸಲಾಗುತ್ತಿದೆ. ಆ ಕುರಿತ ವರದಿ ಇಲ್ಲಿದೆ:
ಹುದ್ದೆಗಳ ವಿವರ:
ಸಂಸ್ಥೆ: ಭಾರತೀಯ ಕೋಸ್ಟ್ ಗಾರ್ಡ್
ಹುದ್ದೆಗಳ ಹೆಸರು: ಕೋಸ್ಟ್ ಗಾರ್ಡ್ ನಾವಿಕ್ ಜಿಡಿ, ನಾವಿಕ್ ಡಿಬಿ, ಯಾಂತ್ರಿಕ್ ಮತ್ತು ನೈರ್ಮಲ್ಯ ತಜ್ಞ-I
ಒಟ್ಟು ಹುದ್ದೆಗಳು: 365 ಹುದ್ದೆಗಳು
ನಾವಿಕ್ - ಜನರಲ್ ಡ್ಯೂಟಿ: 260 ಹುದ್ದೆಗಳು
ನಾವಿಕ್ - ಡೊಮೆಸ್ಟಿಕ್ ಬ್ರಾಂಚ್: 35 ಹುದ್ದೆಗಳು
ಯಾಂತ್ರಿಕ್: 40 ಹುದ್ದೆಗಳು
ಹೈಜಿನಿಸ್ಟ್-I: 30 ಹುದ್ದೆಗಳು
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ: ಅಕ್ಟೋಬರ್ 06, 2026 (ಈಗಾಗಲೇ ಪ್ರಾರಂಭವಾಗಿದೆ)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 21, 2026 (ಸಂಜೆ 5:30 ರವರೆಗೆ)
ಮೊದಲ ಹಂತದ ಪರೀಕ್ಷೆ: ನವೆಂಬರ್ 2026ರ ಆರಂಭ ಅಥವಾ ಮಧ್ಯಭಾಗದಲ್ಲಿ ನಡೆಯುವ ಸಾಧ್ಯತೆಯಿದೆ.
ಅರ್ಹತೆ:
ಶೈಕ್ಷಣಿಕ ಅರ್ಹತೆ:
ನಾವಿಕ್ (ಜನರಲ್ ಡ್ಯೂಟಿ - GD): 12ನೇ ತರಗತಿ (ಪಿಯುಸಿ) ತೇರ್ಗಡೆಯಾಗಿರಬೇಕು (ಗಣಿತ ಮತ್ತು ಭೌತಶಾಸ್ತ್ರ ವಿಷಯಗಳನ್ನು ಕಡ್ಡಾಯವಾಗಿ ಓದಿರಬೇಕು).
ನಾವಿಕ್ (ಡೊಮೆಸ್ಟಿಕ್ ಬ್ರಾಂಚ್ - DB): 10ನೇ ತರಗತಿ (ಎಸ್‌ಎಸ್‌ಎಲ್‌ಸಿ) ತೇರ್ಗಡೆಯಾಗಿರಬೇಕು.
ಯಾಂತ್ರಿಕ್: 10ನೇ ಅಥವಾ 12ನೇ ತರಗತಿಯೊಂದಿಗೆ ಮಾನ್ಯತೆ ಪಡೆದ ಸಂಸ್ಥೆಯಿಂದ ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್ ಅಥವಾ ಟೆಲಿಕಮ್ಯೂನಿಕೇಶನ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮುಗಿಸಿರಬೇಕು.
ಹೈಜಿನಿಸ್ಟ್-I: ಮೆಟ್ರಿಕ್ಯುಲೇಷನ್ (10ನೇ ತರಗತಿ) ಅಥವಾ ಐಟಿಐ (ITI) ಮುಗಿಸಿರಬೇಕು.
ವಯೋಮಿತಿ:
ಕನಿಷ್ಠ ವಯಸ್ಸು: 18 ವರ್ಷಗಳು
ಗರಿಷ್ಠ ವಯಸ್ಸು: 22 ವರ್ಷಗಳು
(ಸರ್ಕಾರದ ನಿಯಮಗಳ ಪ್ರಕಾರ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇರಲಿದೆ).
ಕೆಲಸದ ಸ್ವರೂಪ
ನಾವಿಕ್: ಇವರು ಕರಾವಳಿ ಭದ್ರತೆ, ಸಮುದ್ರದಲ್ಲಿ ಗಸ್ತು ತಿರುಗುವುದು ಮತ್ತು ಹಡಗುಗಳ ಕಾರ್ಯಾಚರಣೆಯ ಪ್ರಮುಖ ಜವಾಬ್ದಾರಿಗಳನ್ನು ಹೊಂದಿರುತ್ತಾರೆ.
ನಾವಿಕ್: ಇವರು ಮುಖ್ಯವಾಗಿ ಹಡಗು ಅಥವಾ ಕಚೇರಿಗಳಲ್ಲಿ ಸ್ಟೆವಾರ್ಡ್ (ಅಡುಗೆ ಮತ್ತು ಆಹಾರ ಸರಬರಾಜು) ಹಾಗೂ ಕುಕ್ (ಬಾಣಸಿಗ) ಕೆಲಸಗಳನ್ನು ನಿರ್ವಹಿಸಬೇಕಾಗುತ್ತದೆ.
ಯಾಂತ್ರಿಕ್: ಇವರು ಕೋಸ್ಟ್ ಗಾರ್ಡ್ ಹಡಗುಗಳು, ವಿಮಾನಗಳು ಮತ್ತು ತಾಂತ್ರಿಕ ಉಪಕರಣಗಳ ನಿರ್ವಹಣೆ ಹಾಗೂ ದುರಸ್ತಿ ಕೆಲಸಗಳನ್ನು ನೋಡಿಕೊಳ್ಳುತ್ತಾರೆ.
ಹೈಜಿನಿಸ್ಟ್-I: ಇವರು ಹಡಗುಗಳು ಮತ್ತು ಆಡಳಿತ ಕಚೇರಿಗಳಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯದ ಮೇಲ್ವಿಚಾರಣೆ ನಡೆಸುತ್ತಾರೆ.
ಸಂಬಳ:
ನಾವಿಕ್ - ಜನರಲ್ ಡ್ಯೂಟಿ: ₹21,700/- (ಇದರೊಂದಿಗೆ ತುಟ್ಟಿಭತ್ಯೆ (DA) ಮತ್ತು ಇತರೆ ಭತ್ಯೆಗಳು ಸೇರಿ ಆರಂಭಿಕ ಒಟ್ಟು ವೇತನ ಸುಮಾರು ₹35,000 ವರೆಗೆ ಇರಲಿದೆ).
ನಾವಿಕ್ - ಡೊಮೆಸ್ಟಿಕ್ ಬ್ರಾಂಚ್: ₹21,700/- (ಇದರೊಂದಿಗೆ ನಿಯಮಾನುಸಾರ ಭತ್ಯೆಗಳು ಲಭ್ಯವಿರುತ್ತವೆ).
ಯಾಂತ್ರಿಕ್: ₹29,200/- (ಯಾಂತ್ರಿಕ್ ಹುದ್ದೆಗಳಿಗೆ ಹೆಚ್ಚುವರಿಯಾಗಿ ಪ್ರತಿ ತಿಂಗಳು ₹6,200/- ಯಾಂತ್ರಿಕ್ ಪೇ ಸಿಗುತ್ತದೆ. ಹೀಗಾಗಿ ಇವರ ಆರಂಭಿಕ ವೇತನ ಇತರೆ ಹುದ್ದೆಗಳಿಗಿಂತ ಹೆಚ್ಚಿರುತ್ತದೆ.)
ಹೈಜಿನಿಸ್ಟ್-I: ₹21,700/- (ಇದರೊಂದಿಗೆ ಇತರೆ ಭತ್ಯೆಗಳು ಅನ್ವಯಿಸುತ್ತವೆ).
ಆಯ್ಕೆ ವಿಧಾನ ಹೇಗೆ?
ಅಭ್ಯರ್ಥಿಗಳನ್ನು ಒಟ್ಟು ನಾಲ್ಕು ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:
ಹಂತ-1: ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ (CBT - ಇದರಲ್ಲಿ ನೆಗೆಟಿವ್ ಮಾರ್ಕಿಂಗ್ ಇರುವುದಿಲ್ಲ).
ಹಂತ-2: ದೈಹಿಕ ದಾರ್ಢ್ಯತೆ ಪರೀಕ್ಷೆ (PFT - 1.6 ಕಿಮೀ ಓಟ, ಉಟಕ್-ಬೈಠಕ್ ಮತ್ತು ಪುಶ್-ಅಪ್ಸ್), ಬಯೋಮೆಟ್ರಿಕ್ ಮತ್ತು ದಾಖಲಾತಿ ಪರಿಶೀಲನೆ.
ಹಂತ-3: ವೈದ್ಯಕೀಯ ತಪಾಸಣೆ
ಹಂತ-4: ಮೂಲ ದಾಖಲೆಗಳ ಅಂತಿಮ ಪರಿಶೀಲನೆ.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ಸಿಬ್ಬಂದಿ ಆಯ್ಕೆ ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಒನ್-ಟೈಮ್ ರಿಜಿಸ್ಟ್ರೇಶನ್ ಪ್ರಕ್ರಿಯೆ ಪೂರ್ಣಗೊಳಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
ಅರ್ಜಿ ಶುಲ್ಕ
ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ: ₹550
ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ (ವಿನಾಯಿತಿ ನೀಡಲಾಗಿದೆ)