ಬ್ಯಾಂಕ್ ಆಫ್ ಬರೋಡಾ Online Desk
ವೃತ್ತಿ & ಉದ್ಯೋಗ ಅವಕಾಶಗಳು

ಪದವೀಧರರಿಗೆ ಸುವರ್ಣಾವಕಾಶ: Bank of Barodaದಲ್ಲಿ 1,100 ಹುದ್ದೆಗಳಿಗೆ ಅರ್ಜಿ ಆಹ್ವಾನ, ವೇತನ ಎಷ್ಟು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?

ಬ್ಯಾಂಕ್ ಆಫ್ ಬರೋಡಾ ಸಂಸ್ಥೆಯು ವೆಲ್ತ್ ಎಕ್ಸಿಕ್ಯೂಟಿವ್ ಮತ್ತು ಕ್ರೆಡಿಟ್ ಅನಲಿಸ್ಟ್ ಹುದ್ದೆಗಳ ಭರ್ತಿಗಾಗಿ ಒಟ್ಟು 1,100 ಸ್ಪೆಷಲಿಸ್ಟ್ ಆಫೀಸರ್ (SO) ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:

Bank of Baroda SO Recruitment 2026: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಶಾಶ್ವತ ಹುದ್ದೆಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಅತ್ಯುತ್ತಮ ಸುದ್ದಿ. ದೇಶದ ಪ್ರಮುಖ ಸಾರ್ವಜನಿಕ ರಂಗದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ ಬರೋಬ್ಬರಿ 1,100 ಹುದ್ದೆಗಳ ಬೃಹತ್ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಆಕರ್ಷಕ ವೇತನ, ಉತ್ತಮ ಭವಿಷ್ಯದೊಂದಿಗೆ ದೇಶಾದ್ಯಂತ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿರುವ ಈ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಆ ಕುರಿತ ವಿವರ ಇಲ್ಲಿದೆ:

ಹುದ್ದೆ ವಿವರ:

ಒಟ್ಟು 1,100 ಹುದ್ದೆ

  • ವೆಲ್ತ್ ಎಕ್ಸಿಕ್ಯೂಟಿವ್ (Wealth Executive - JMG/S-I): 1,000 ಹುದ್ದೆಗಳು

  • ಕ್ರೆಡಿಟ್ ಅನಲಿಸ್ಟ್ (Credit Analyst - MMG/S-II): 100 ಹುದ್ದೆಗಳು

ಅರ್ಹತೆ:

  • ವಿದ್ಯಾರ್ಹತೆ:

    • ವೆಲ್ತ್ ಎಕ್ಸಿಕ್ಯೂಟಿವ್: ಯಾವುದೇ ಪದವಿ + ಮಾನ್ಯತೆ ಪಡೆದ ಹಣಕಾಸು ಪ್ರಮಾಣಪತ್ರ ಮತ್ತು ವೆಲ್ತ್ ಉತ್ಪನ್ನಗಳ ಮಾರಾಟದಲ್ಲಿ ಕನಿಷ್ಠ 2 ವರ್ಷಗಳ ಅನುಭವ.

    • ಕ್ರೆಡಿಟ್ ಅನಲಿಸ್ಟ್: ಪದವಿ + ಚಾರ್ಟರ್ಡ್ ಅಕೌಂಟೆಂಟ್ ಪದವಿ ಮತ್ತು ಯಾವುದೇ ವಾಣಿಜ್ಯ ಬ್ಯಾಂಕ್‌ನಲ್ಲಿ ಕನಿಷ್ಠ 1 ವರ್ಷದ ಕೆಲಸದ ಅನುಭವ.

  • ವಯೋಮಿತಿ: 22 ರಿಂದ 32 ವರ್ಷಗಳು.

ಪ್ರಮುಖ ದಿನಾಂಕ:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: ಸೆಪ್ಟೆಂಬರ್ 4, 2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 24, 2026

  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಸೆಪ್ಟೆಂಬರ್ 24, 2026

ಅರ್ಜಿ ಶುಲ್ಕ:

  • ಸಾಮಾನ್ಯ / ಒಬಿಸಿ / ಇಡಬ್ಲ್ಯೂಎಸ್: ₹850

  • ಎಸ್‌ಸಿ / ಎಸ್‌ಟಿ / ಅಂಗವಿಕಲರು / ಮಹಿಳಾ ಅಭ್ಯರ್ಥಿಗಳು: ₹175

ಅರ್ಜಿ ಸಲ್ಲಿಸುವ ವಿಧಾನ:

  • ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ Careers → Current Opportunities ವಿಭಾಗಕ್ಕೆ ತೆರಳಿ.

  • Bank of Baroda SO Recruitment 2026 ಲಿಂಕ್ ಆಯ್ಕೆ ಮಾಡಿ ಮೂಲ ವಿವರಗಳೊಂದಿಗೆ ನೋಂದಣಿ (Registration) ಪೂರ್ಣಗೊಳಿಸಿ.

  • ವೈಯಕ್ತಿಕ, ಶೈಕ್ಷಣಿಕ ಹಾಗೂ ವೃತ್ತಿ ಅನುಭವದ ವಿವರಗಳನ್ನು ಭರ್ತಿ ಮಾಡಿ.

  • ಭಾವಚಿತ್ರ, ಸಹಿ, ಎಡಗೈ ಹೆಬ್ಬೆರಳಿನ ಗುರುತು (Left Thumb Impression) ಮತ್ತು ಕೈಬರಹದ ಘೋಷಣಾಪತ್ರವನ್ನು (Handwritten Declaration) ಅಪ್‌ಲೋಡ್ ಮಾಡಿ.

  • ನಿಗದಿತ ಅರ್ಜಿ ಶುಲ್ಕವನ್ನು (General/EWS/OBC: ₹850, SC/ST/PwBD/ಮಹಿಳೆಯರು: ₹175) ಆನ್‌ಲೈನ್ ಮೂಲಕ ಪಾವತಿಸಿ ಅರ್ಜಿ ಸಲ್ಲಿಕೆ ಅಂತಿಮಗೊಳಿಸಿ.

ಅರ್ಜಿ ಸಲ್ಲಿಸಲು ಲಿಂಕ್: https://ibpsreg.ibps.in/bonwejul26/

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Hormuz ಜಲಸಂಧಿಯಲ್ಲಿ ಮಹಾ ಸಂಘರ್ಷ: Iran 3 ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕಾ ದಾಳಿ; 'ಕಠಿಣ ಪ್ರತೀಕಾರ'ದ ಶಪಥ ಮಾಡಿದ ಟೆಹ್ರಾನ್!

100 ದಿನಗಳ ಹೊಸ್ತಿಲಲ್ಲಿ ಡಿಕೆಶಿ ಸರ್ಕಾರ: ಸಾಧನೆಗಳ ಪಟ್ಟಿ ಹಿಡಿದು ಕಾಂಗ್ರೆಸ್ ಅಖಾಡಕ್ಕೆ, ‘ಯು-ಟರ್ನ್’ ಅಸ್ತ್ರದೊಂದಿಗೆ ವಿಪಕ್ಷಗಳ ಕೌಂಟರ್‌..!

ಬ್ಯಾಂಕ್ ಉದ್ಯೋಗಾಕಾಂಕ್ಷಿಗಳಿಗೆ SBI Good News : 12,000 ಸಿಬ್ಬಂದಿ ನೇಮಕ, 250 ಶಾಖೆ ತೆರೆಯುವುದಾಗಿ ಘೋಷಣೆ

ಭಾರತದಲ್ಲಿ ಯೂಟ್ಯೂಬರ್, ಕಂಟೆಂಟ್‌ ಕ್ರಿಯೇಟರ್ಸ್‌ ಹಾವಳಿ: ದೊಡ್ಡ ಪ್ರಮಾಣದಲ್ಲಿ ಆದಾಯ ಬರ್ತಿದೆಯಾ? ಹೇಗೆಲ್ಲಾ ದುಡ್ಡು ಮಾಡಬಹುದು ಗೊತ್ತಾ?

ಡಿಕೆಶಿಗೆ ಟಕ್ಕರ್ ಕೊಡಲು ಹೊಸ ತಂತ್ರ: AHINDA ಮುರಿದು ‘HINDA’ ಕಟ್ಟಲು ಸಿದ್ದು ಮಾಸ್ಟರ್ ಪ್ಲ್ಯಾನ್, ಮಗನ ಭವಿಷ್ಯಕ್ಕಾಗಿ ಹಳೆಯ ಮಿತ್ರರಿಗೆ ಗೇಟ್‌ಪಾಸ್?