ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಾಲಿವುಡ್

ಬರುತ್ತಿದೆ ಭಾರತದ ಮೊದಲ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಬಯೋಪಿಕ್ ಸಿನಿಮಾ

ಈ ಬಯೋಪಿಕ್ ಸಿನಿಮಾವನ್ನು ನಿಖಿಲ್ ದ್ವಿವೇದಿ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಗೌತಮ್ ಚಿಂತಾಮಣಿ ಅವರ ಪುಸ್ತಕವನ್ನು ಆಧರಿಸಿದೆ.

ರಾಜೇಶ್ ಖನ್ನಾ
Harshavardhan M
Updated On : 29 Dec 2021, 12:45 pm

ಮುಂಬೈ: ಭಾರತದ ಮೊದಲ ಸೂಪರ್ ಸ್ಟಾರ್ ಎನ್ನುವ ಖ್ಯಾತಿ ಪಡೆದ ಬಾಲಿವುಡ್ ನಟ ರಾಜೇಶ್ ಖನ್ನಾರ 79ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ರಾಜೇಶ್ ಖನ್ನಾ ಬದುಕನ್ನು ಆಧರಿಸಿ ಸಿನಿಮಾ ತಯಾರಿಗೆ ಸಿದ್ಧತೆ ನಡೆದಿದೆ.

ಇದನ್ನೂ ಓದಿ:  ಮ್ಯಾಟ್ರಿಕ್ಸ್ ಹಾಲಿವುಡ್ ಸಿನಿಮಾದಲ್ಲಿ ಅಲ್ಪ ಅವಧಿಯ ಪಾತ್ರಕ್ಕೆ ಟ್ರೋಲ್: ಕಿಡಿ ಕಾರಿದ ಪ್ರಿಯಾಂಕ ಚೋಪ್ರಾ

ಈ ಬಯೋಪಿಕ್ ಸಿನಿಮಾವನ್ನು ನಿಖಿಲ್ ದ್ವಿವೇದಿ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಗೌತಮ್ ಚಿಂತಾಮಣಿ ಅವರ ಪುಸ್ತಕವನ್ನು ಆಧರಿಸಿದೆ. ಬಾಲಿವುಡ್ ನ ಖ್ಯಾತ ನಿರ್ದೇಶಕಿ ಫರಾ ಖಾನ್ ಈ ಬಯೋಪಿಕ್ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. 

Advertisement

Advertisement

ಇದನ್ನೂ ಓದಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಕಚ್ಚಿದ ಹಾವು: ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ!

ಜತಿನ್ ಖನ್ನಾ ಎನ್ನುವುದು ರಾಜೇಶ್ ಖನ್ನಾ ಅವರ ಮೂಲ ಹೆಸರು. 1966ರಲ್ಲಿ 'ಆಖ್ರೀ ರಾತ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು ರಾಜೇಶ್ ಖನ್ನಾ. ಸತತವಾಗಿ 17 ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತಿ ರಾಜೇಶ್ ಖನ್ನಾ ಅವರದು. ಏಳುಬೀಳಿನ ಕಥೆ ಅವರ ಬದುಕಿನದ್ದು. 2012ರಲ್ಲಿ ಅವರು ನಿಧನರಾಗಿದ್ದರು.

ಇದನ್ನೂ ಓದಿ: ಬಾಲಿವುಡ್ ನಟಿ ಆಲಿಯಾ ಭಟ್ ವಿರುದ್ಧ ಎಫ್ ಐ ಆರ್!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement