ಖ್ಯಾತ ನಿರ್ಮಾಪಕ, ನಿರ್ದೇಶಕ ಎಂಎಂ ಬೇಗ್ 
ಬಾಲಿವುಡ್

ಬಾಲಿವುಡ್ ಖ್ಯಾತ ನಿರ್ಮಾಪಕ, ನಿರ್ದೇಶಕ MM Baig ನಿಗೂಢ ಸಾವು: ಮನೆಯಲ್ಲೇ ಶವ ಪತ್ತೆ!

ನಿರ್ಮಾಪಕ ಬೇಗ್ ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಒಬ್ಬಂಟಿಯಾಗಿ ವಾಸಿಸುತ್ತಿದ್ದರು ಎಂದು ಖ್ಯಾತ ಪ್ರಚಾರಕ ಹನೀಫ್ ಜವೇರಿ ಹೇಳಿದ್ದಾರೆ.

ಮುಂಬೈ: ಬಾಲಿವುಡ್ ನ ಖ್ಯಾತ ನಿರ್ಮಾಪಕ, ನಿರ್ದೇಶಕ ಎಂಎಂ ಬೇಗ್ ನಿಗೂಢವಾಗಿ ಸಾವನ್ನಪ್ಪಿದ್ದು, ಅವರ ಮನೆಯಲ್ಲೇ ಅವರ ಹೀನಾಯ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.

ನಿರ್ಮಾಪಕ ಬೇಗ್ ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಒಬ್ಬಂಟಿಯಾಗಿ ವಾಸಿಸುತ್ತಿದ್ದರು ಎಂದು ಖ್ಯಾತ ಪ್ರಚಾರಕ ಹನೀಫ್ ಜವೇರಿ ಹೇಳಿದ್ದಾರೆ.

ಬೇಗ್ ಅವರು 4 ರಿಂದ 5 ದಿನಗಳಿಂದ ಮನೆಯಿಂದ ಹೊರಗೆ ಬಾರದ ಕಾರಣ, ನೆರೆಹೊರೆಯವರು ಅವರ ಮನೆಯಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದರು. ಇದರ ಬೆನ್ನಲ್ಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬಲವಂತವಾಗಿ ಬಾಗಿಲು ತೆರೆದಾಗ ಅಲ್ಲಿ ಬೇಗ್ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

"ಪೊಲೀಸರು ಬಾಗಿಲು ತೆರೆದಾಗ ಬೇಗ್ ಸಾಹಬ್ ಅವರ ಮೃತ ದೇಹ ಪತ್ತೆಯಾಗಿದ್ದು, ಕೂಡಲೇ ಅವರ ಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದರು. ನಂತರ ಅವರು ಅವರ ಮೃತ ದೇಹವನ್ನು ಕೂಪರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ದರು. ಅವರು ಪ್ರೀತಿಯ ವ್ಯಕ್ತಿಯಾಗಿದ್ದರು. ಅವರ ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ" ಎಂದು ಹನೀಫ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಜನಪ್ರಿಯ ಬಾಲ ಕಲಾವಿದೆ ಬೇಬಿ ಗುಡ್ಡು ಅವರ ತಂದೆ ಮತ್ತು ರಜಿಯಾ ಸುಲ್ತಾನ್ ಮತ್ತು ನಿರ್ದೇಶನದ ಛೋಟಿ ಬಹು ಮುಂತಾದ ಚಿತ್ರಗಳಲ್ಲಿ ಎಂ ಎಂ ಬೇಗ್ ತೊಡಗಿಸಿಕೊಂಡಿದ್ದರು.

ಬೇಗ್ ತಮ್ಮ ವೃತ್ತಿಜೀವನವನ್ನು ಜೆ ಓಂ ಪ್ರಕಾಶ್, ವಿಮಲ್ ಕುಮಾರ್ ಮತ್ತು ರಾಕೇಶ್ ರೋಷನ್ ಅವರಿಗೆ ಗೋವಿಂದ ಕೆ ಆದ್ಮಿ ಖಿಲೋನಾ ಹೈ, ಜೈಸಿ ಕರ್ನಿ ವೈಸಿ ಭರ್ನಿ, ಮತ್ತು ಕರ್ಜ್ ಚುಕಾನಾ ಹೈ, ಅನಿಲ್ ಕಪೂರ್-ನಟನೆಯ ಕಾಲಾ ಬಜಾರ್ ಮತ್ತು ಕಿಶನ್ ಕನ್ಹಯ್ಯಾ ಮುಂತಾದ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ವೃತ್ತಿ ಜೀವನ ಪ್ರಾರಂಭಿಸಿದ್ದರು.

ಸ್ವತಂತ್ರ ನಿರ್ದೇಶಕರಾಗಿ, ಅವರು ನಾಸಿರುದ್ದೀನ್ ಶಾ ಅವರ ಮಾಸೋಮ್ ಗವಾಹ್ (1990) ಸೇರಿದಂತೆ ಎರಡು ಚಲನಚಿತ್ರಗಳನ್ನು ನಿರ್ದೇಶಿಸಿದ್ದರು. ಅದು ಬಿಡುಗಡೆಯಾಗದೆ ಉಳಿದಿದೆ. ಬಳಿಕ ಶಿಲ್ಪಾ ಶಿರೋಡ್ಕರ್ ನಟಿಸಿದ ಛೋಟಿ ಬಹು (1994) ಚಿತ್ರವನ್ನು ನಿರ್ದೇಶಿಸಿದ್ದರು.

"ಬೇಗ್ ಸಾಹಬ್ ಅವರು ರಾಕೇಶ್ ರೋಷನ್ ಸಾಹಬ್ ಅವರೊಂದಿಗೂ ಉತ್ತಮ ಸಂಬಂಧ ಹೊಂದಿದ್ದರು. ಅವರು ಹೃತಿಕ್ ರೋಷನ್ ಅವರಿಗೆ ವಾಕ್ಚಾತುರ್ಯ, ಧ್ವನಿ ಮಾಡ್ಯುಲೇಷನ್ ಮತ್ತು ಸಂಭಾಷಣೆಗಳಲ್ಲಿ ಸಹಾಯ ಮಾಡಿದ್ದರು. ಏಕೆಂದರೆ ಅವರು ಈ ವಿಷಯಗಳನ್ನು ಚೆನ್ನಾಗಿ ತಿಳಿದಿದ್ದರು. ಬೇಗ್ ಸಾಹಬ್ ಹೃತಿಕ್‌ ರೋಷನ್ ಗೆ ಸಂಭಾಷಣೆಗಳನ್ನು ಹೇಳಲು ಸಹಾಯ ಮಾಡಿದ್ದರು. ಬಳಿಕ ತಮ್ಮ ಚೊಚ್ಚಲ ಚಿತ್ರ ಕಹೋ ನಾ ಪ್ಯಾರ್ ಹೈ ನಿರ್ದೇಶಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ದೆಹಲಿ ಚಲೋ’ ಪ್ರತಿಭಟನೆಗೆ ಬ್ರೇಕ್: ಯುವಕರಿಗೆ ಹೆದರುವುದಾದರೆ ಇಡೀ ದೇಶವನ್ನೇ ಬಂದ್ ಮಾಡಿ; ಕೇಂದ್ರ ಸರ್ಕಾರದ ವಿರುದ್ಧ ಅಭಿಜಿತ್ ದೀಪ್ಕೆ ಆಕ್ರೋಶ

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಮತದಾರರ ಪಟ್ಟಿ ಪರಿಷ್ಕರಣೆ: ಕರ್ನಾಟಕದಲ್ಲಿ 1.10 ಲಕ್ಷ ಫಾರಂ-7 ಅರ್ಜಿ ಸ್ವೀಕೃತಿ, 40.88 ಲಕ್ಷ ನೋಟಿಸ್ ವಿಚಾರಣೆ ಪೂರ್ಣ: ಅ.27ಕ್ಕೆ ಅಂತಿಮ ಪಟ್ಟಿ ಪ್ರಕಟ

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video