ವಿದೇಶದಲ್ಲಿ ಮತ್ತೋರ್ವ ಕನ್ನಡಿಗ ನಿಗೂಢ ಸಾವು?; ಐರ್ಲೆಂಡ್ ನಲ್ಲಿ ಕಡಬ ಮೂಲದ ಯುವಕ ಆತ್ಮಹತ್ಯೆ?

ಉದ್ಯೋಗಕ್ಕಾಗಿ ಐರ್ಲೆಂಡ್‌ಗೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಮೂಲದ ಯುವಕರೊಬ್ಬರು ತಮ್ಮ ನಿವಾಸದಲ್ಲೇ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
Karnataka Man mysteriously dies in Ireland
ಮೃತ ಸ್ಯಾಂಜೋ ಸುನಿಲ್
Updated on

ಡಬ್ಲಿನ್: ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಸಾಕೇತ್ ಶ್ರೀನಿವಾಸಯ್ಯ ಬಳಿಕ ಮತ್ತೋರ್ವ ಕನ್ನಡಿಗ ವಿದೇಶದಲ್ಲಿ ಸಾವನ್ನಪ್ಪಿದ್ದು, ಕಡಬ ಮೂಲದ ಯುವಕ ನಿಗೂಢವಾಗಿ ನಿಧನರಾಗಿರುವುದು ವರದಿಯಾಗಿದೆ.

ಹೌದು.. ಉದ್ಯೋಗಕ್ಕಾಗಿ ಐರ್ಲೆಂಡ್‌ಗೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಬಳಿಯ ಕುಟ್ರುಪಾಡಿ ಮೂಲದ ಯುವಕನೊಬ್ಬ ತಮ್ಮ ನಿವಾಸದಲ್ಲೇ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಅವರು ಕೇವಲ 28 ದಿನಗಳ ಹಿಂದೆ ಐರ್ಲೆಂಡ್‌ಗೆ ಪ್ರಯಾಣ ಬೆಳೆಸಿದ್ದ ಸುನಿಲ್ ಅಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಅವರ ಪತ್ನಿ ಲಿಷ್ಮಾ ಅವರೊಂದಿಗೆ ವಾಸಿಸುತ್ತಿದ್ದರು.

ಮೂಲಗಳ ಪ್ರಕಾರ ಡಬ್ಲಿನ್ ನಗರದ ಫಿಂಗ್ಲಾಸ್‌ನ ಚಾರ್ಲ್ಸ್‌ ಟೌನ್ ಪ್ರದೇಶದ ಮನೆಯಲ್ಲಿ ಸಾಂಜೋ ಸುನಿಲ್ ವಾಸವಾಗಿದ್ದರು.

ಐರ್ಲೆಂಡ್‌ನ ಡಬ್ಲಿನ್​ನ ನಿವಾಸದಲ್ಲಿ ಸಾಂಜೋ ಸುನಿಲ್ (31) ಶವ ಪತ್ತೆಯಾಗಿದ್ದು, ಕಡಬದ ಕುಟ್ರಪಾಡಿ ಗ್ರಾಮದ ವಿಮಲಗಿರಿ ನಿವಾಸಿ ಸಾಂಜೋ ಸುನಿಲ್ ಸಾವಿನ ಹಿಂದೆ ಮೇಲ್ನೋಟಕ್ಕೆ ಆತ್ಮಹತ್ಯೆ ಶಂಕೆ ವ್ಯಕ್ತವಾಗುತ್ತಿದ್ದು, ಆದಾಗ್ಯೂ ಈ ಸಾವಿನ ಹಿಂದಿನ ಕಾರಣಗಳ ಕುರಿತು ಐರಿಶ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Karnataka Man mysteriously dies in Ireland
ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ: 6 ದಿನಗಳ ನಂತರ ಶವ ಪತ್ತೆ

ಪ್ರಸ್ತುತ ಐರಿಶ್ ಪೊಲೀಸರು ಮರಣೋತ್ತರ ಪರೀಕ್ಷೆ ಹಾಗೂ ಮುಂದಿನ ಕಾನೂನು ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ. ಮೃತದೇಹವನ್ನು ಭಾರತಕ್ಕೆ ತರುವ ಕುರಿತು ಕುಟುಂಬಸ್ಥರು ಅಧಿಕಾರಿಗಳ ನೆರವು ಕೋರುವ ಸಾಧ್ಯತೆ ಇದೆ.

ಪತ್ನಿ ಅಸ್ವಸ್ಥ

ಪತಿಯ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಸಾಂಜೋ ಅವರ ಪತ್ನಿ ತೀವ್ರ ಆಘಾತಕ್ಕೊಳಗಾಗಿ ಅಸ್ವಸ್ಥಗೊಂಡಿದ್ದಾರೆ. ಘಟನೆಯ ನಂತರ ಪತ್ನಿ ಲಿಷ್ಮಾ ಅವರನ್ನು ಪ್ರಸ್ತುತ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಸಾವಿನ ಹಿಂದಿನ ಕಾರಣವನ್ನು ಕಂಡುಹಿಡಿಯಲು ಕುಟುಂಬವು ಮರಣೋತ್ತರ ಪರೀಕ್ಷೆಗಾಗಿ ಆತಂಕದಿಂದ ಕಾಯುತ್ತಿದೆ ಎಂದು ಮೃತರ ಆಪ್ತ ಸಂಬಂಧಿಯೊಬ್ಬರು ತಿಳಿಸಿದ್ದಾರೆ.

ಕಾನೂನು ವಿಧಿವಿಧಾನಗಳು ಪೂರ್ಣಗೊಂಡ ನಂತರ ಸಂಜೋ ಅವರ ಶವವನ್ನು ಕಡಬದಲ್ಲಿರುವ ಅವರ ಗ್ರಾಮಕ್ಕೆ ವಾಪಸ್ ಕಳುಹಿಸಲು ಕುಟುಂಬ ನಿರ್ಧರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com