ರಾಮಾಯಣ ಪೋಸ್ಟರ್ 
ಬಾಲಿವುಡ್

ವಿದೇಶಗಳಲ್ಲಿ ‘ರಾಮಾಯಣ’ ರಾಕಿಂಗ್; ಅಮೆರಿಕದಲ್ಲಿ ಶಾರುಖ್ ದಾಖಲೆ ಉಡೀಸ್: 2027ರಲ್ಲಿ ಚೀನಾ, ಜಪಾನ್, ರಷ್ಯಾದಲ್ಲಿ ಬಿಡುಗಡೆ!

ರಣಬೀರ್ ಕಪೂರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ರಾಮಾಯಣ' 2027ರ ಮೊದಲ ತ್ರೈಮಾಸಿಕದಲ್ಲಿ ನಾಲ್ಕು ಪ್ರಮುಖ ವಿದೇಶಿ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ.

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ: ರೈಸ್ ಆಫ್ ಎ ಲೆಜೆಂಡ್' ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಗಳಿಕೆ ಕಂಡಿದ್ದು, ಇದೀಗ ತನ್ನ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಲು ಸಜ್ಜಾಗಿದೆ.

ರಣಬೀರ್ ಕಪೂರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ರಾಮಾಯಣ' 2027ರ ಮೊದಲ ತ್ರೈಮಾಸಿಕದಲ್ಲಿ ನಾಲ್ಕು ಪ್ರಮುಖ ವಿದೇಶಿ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ.

ಚೀನಾ, ರಷ್ಯಾ, ಜಪಾನ್ ಮತ್ತು ದಕ್ಷಿಣ ಕೊರಿಯಾಗಳಲ್ಲಿ ಈ ಚಿತ್ರವು ಬಿಡುಗಡೆಯಾಗಲಿದ್ದು, ಜಾಗತಿಕ ಮಟ್ಟದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ.

ಕುತೂಹಲಕಾರಿ ಸಂಗತಿಯೆಂದರೆ, ಈ ಸಿನಿಮಾ ತಂಡ ಈಗಾಗಲೇ ಚೀನಾದಲ್ಲಿ ಸೆನ್ಸಾರ್ ಅನುಮತಿಗಾಗಿ ಅರ್ಜಿ ಸಲ್ಲಿಸಿದೆ. ಇದು ಪ್ರಮುಖ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆಗಳು ನಡೆಯುತ್ತಿವೆ ಎಂಬುದನ್ನು ಸೂಚಿಸುತ್ತದೆ.

ವಿಶೇಷವಾಗಿ ಚೀನಾ, ಹಿಂದೆ ಭಾರತೀಯ ಚಲನಚಿತ್ರಗಳಿಗೆ ಒಂದು ಪ್ರಮುಖ ಮಾರುಕಟ್ಟೆಯಾಗಿ ಹೊರಹೊಮ್ಮಿತ್ತು. ಅಲ್ಲಿ ಹಲವು ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆಯನ್ನು ಕಂಡಿವೆ. ಆಮಿರ್ ಖಾನ್ ನಟನೆಯ ‘ದಂಗಲ್’ ಚಿತ್ರವು ಚೀನಾದಲ್ಲಿ ಸುಮಾರು 1,305 ಕೋಟಿ ರೂಪಾಯಿ ಗಳಿಸಿ ಐತಿಹಾಸಿಕ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಚೀನಾದ ಕಲೆಕ್ಷನ್‌ನಿಂದ ದಂಗಲ್‌ ಅತಿ ಹೆಚ್ಚು ಕಲೆಕ್ಷನ್‌( 2,070 ಕೋಟಿ ರೂ.) ಮಾಡಿದ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಈ ಕುರಿತು ಸಿನಿ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, “2027ರ ಮೊದಲ ತ್ರೈಮಾಸಿಕದಲ್ಲಿ ಚೀನಾ, ರಷ್ಯಾ, ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ‘ರಾಮಾಯಣ’ ಬಿಡುಗಡೆಯಾಗಲಿದೆ. ಈಗಾಗಲೇ ಚೀನಾದಲ್ಲಿ ಸೆನ್ಸಾರ್ ಅನುಮತಿಗಾಗಿ ಚಿತ್ರವನ್ನು ಸಲ್ಲಿಸಲಾಗಿದೆ” ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರವು, ವಿದೇಶಗಳಲ್ಲಿ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ (Ramayana: Rise of a Legend) ಎಂಬ ಶೀರ್ಷಿಕೆಯಡಿ ಸಂಕ್ಷಿಪ್ತ ಇಂಗ್ಲಿಷ್ ಆವೃತ್ತಿಯಲ್ಲೂ ತೆರೆಕಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಿದೆ.

ಶಾರುಖ್ ದಾಖಲೆ ಉಡೀಸ್

ನವೆಂಬರ್ 5ರಂದೇ ಯುಕೆ, ಉತ್ತರ ಅಮೆರಿಕ, ಥೈಲ್ಯಾಂಡ್, ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ಬಿಡುಗಡೆಯಾಗಿರುವ ‘ರಾಮಾಯಣ’ ಭರ್ಜರಿ ಪ್ರದರ್ಶನ ಕಾಣುತ್ತಿದೆ.

‘ಬಾಕ್ಸ್ ಆಫೀಸ್ ಗುರು’ ಗಿತೇಶ್ ಪಾಂಡ್ಯ ಅವರ ಮಾಹಿತಿಯಂತೆ, ಉತ್ತರ ಅಮೆರಿಕದ ಬಾಕ್ಸ್ ಆಫೀಸ್‌ನಲ್ಲಿ 20 ಮಿಲಿಯನ್ ಡಾಲರ್ ಗಡಿ ದಾಟಿರುವ ಈ ಚಿತ್ರ, ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ಯಾವುದೇ ಸಿನಿಮಾದ ಗಳಿಕೆಯನ್ನು ಹಿಂದಿಕ್ಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಿಮಗೆ ಅಧಿಕಾರ ಬೇಕಿದ್ದರೆ ಮೊದಲು ವಿದೇಶ ಪ್ರವಾಸ ನಿಲ್ಲಸಿ: ರಾಹುಲ್ ಗಾಂಧಿಗೆ ಅಮಿತ್ ಶಾ ಶಾಕಿಂಗ್ ಸಲಹೆ!

2035ರವರೆಗಿನ ಕ್ರಿಕೆಟ್ ಪಂದ್ಯಾವಳಿ ಅಂತಿಮಗೊಳಿಸಿದ ICC: 2029ರ ಚಾಂಪಿಯನ್ಸ್ ಟ್ರೋಫಿ, 2031ರ ODI ವಿಶ್ವಕಪ್‌‌ಗೆ ಭಾರತ ಆತಿಥ್ಯ!

2050ರ ವೇಳೆಗೆ Pak ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆ ಆಗಲಿದೆ: PM ಶಹಬಾಜ್ ಷರೀಫ್

ಎಲೆಕ್ಷನ್ ಮಾದರಿ ಬಿಗಿ ಭದ್ರತೆಯಲ್ಲಿ KAS ಪೂರ್ವಭಾವಿ ಪರೀಕ್ಷೆ; ಬನಿಯನ್‌ನಲ್ಲೇ ಎಕ್ಸಾಂ ಬರೆದ ಯುವಕ!

ಗುರುಗ್ರಾಮ: ಮತಾಂತರಕ್ಕೆ ಯತ್ನಿಸಿದ ನಾಲ್ವರು ಮಹಿಳೆಯರ ಬಂಧನ!