ತಾಯಿಯೊಂದಿಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ 
ಸಿನಿಮಾ ಸುದ್ದಿ

ಬರ್ಲಿನ್‌ನಲ್ಲಿ ಪ್ರಧಾನಿ ಮೋದಿ ಭೇಟಿ ಕುರಿತು ಟ್ರಾಲ್: ಟ್ವೀಟಿಗರಿಗೆ ಖಡಕ್ ಉತ್ತರ ನೀಡಿದ ಪ್ರಿಯಾಂಕಾ

ಬರ್ಲಿನ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ವೇಳೆ ಪ್ರಿಯಾಂಕಾ ತೊಟ್ಟಿದ್ದ ವಸ್ತ್ರ ಕುರಿತಂತೆ ಟ್ವಿಟರ್ ನಲ್ಲಿ ಟ್ರಾಲ್ ಮಾಡುತ್ತಿದ್ದ ಟ್ವೀಟಿಗರಿಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ...

ನವದೆಹಲಿ: ಬರ್ಲಿನ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ವೇಳೆ ಪ್ರಿಯಾಂಕಾ ತೊಟ್ಟಿದ್ದ ವಸ್ತ್ರ ಕುರಿತಂತೆ  ಟ್ವಿಟರ್ ನಲ್ಲಿ ಟ್ರಾಲ್ ಮಾಡುತ್ತಿದ್ದ ಟ್ವೀಟಿಗರಿಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಖಡಕ್ ಉತ್ತರ ನೀಡಿದ್ದಾರೆ. 
ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿರುವ ನಟಿ ಪ್ರೀಯಾಂಕಾ ಚೋಪ್ರಾ ಅವರು ಬರ್ಲಿನ್'ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ನಿನ್ನೆಯಷ್ಟೇ ಭೇಟಿಯಾಗಿದ್ದರು. ಮೋದಿ ಜತೆಗೆ ಕುಶಲೋಪರಿ ನಡೆಸುತ್ತಿರುವ ತಮ್ಮ ಫೋಟೋವನ್ನು ಇನ್'ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಸಂಭ್ರಮಿಸಿದ್ದರು. 
ನಿಮ್ಮನ್ನು ಭೇಟಿಯಾಗುವುದಕ್ಕೆ ನನಗೆ ಸಮಯಾವಕಾಶ ನೀಡಿದ್ದಕ್ಕೆ ಧನ್ಯವಾದಗಳು. ನಾನೂ ನೀವು ಬರ್ಲಿನ್ ನಲ್ಲಿ ಏಕಕಾಲದಲ್ಲಿದ್ದುಕೊಂಡು ಪರಸ್ಪರರನ್ನು ಭೇಟಿಯಾಗಿರುವುದು ನಿಜಕ್ಕೂ ಸಂತಸದ, ಕಾಕತಾಳೀಯ ಘಟನೆಯಾಗಿರೆ ಎಂದು ಬರೆದುಕೊಂಡಿದ್ದರು. 
ಪ್ರಿಯಾಂಕಾ ಹಂಚಿಕೊಂಡಿದ್ದ ಈ ಫೋಟೋಗೆ ಕೆಲವರು ಟೀಕೆಗಳನ್ನು ವ್ಯಕ್ತಪಡಿಸಲು ಪ್ರಾರಂಭಿಸಿದ್ದರು. ತುಂಡುಡುಗೆ ಧರಿಸಿವ ಮೂಲ ಮೂಲ ಪ್ರಿಯಾಂಕಾ ಪ್ರಧಾನಮಂತ್ರಿಗಳಿಗೆ ಅವಮಾನ ಮಾಡಿದ್ದಾರೆ. ಪ್ರಧಾನಮಂತ್ರಿಗಳನ್ನು ಭೇಟಿಯಾಗುವ ವೇಳೆ ಪ್ರಿಯಾಂಕಾ ಸರಿಯಾದ ರೀತಿಯಲ್ಲಿ ಬಟ್ಟೆಯನ್ನು ತೊಟ್ಟಿಲ್ಲ. ಇದು ಮೋದಿಯವರಿಗೆ ಅವಮಾನ ಮಾಡಿದಂತೆ ಎಂದೆಲ್ಲಾ ಟೀಕೆಗಳನ್ನು ಮಾಡಿದ್ದರು. 
ಈ ಹಿನ್ನಲೆಯಲ್ಲಿ ಟ್ವೀಟಿಗರಿಗೆ ಖಡಕ್ ಉತ್ತರ ನೀಡಿರುವ ಪ್ರಿಯಾಂಕಾ, ತುಂಡುಡುಗೆ ಧರಿಸಿರುವ ಮತ್ತಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಾಲಿಗಿಂತ ಮೇಲಿರುವ ಬಟ್ಟೆಯನ್ನು ಧರಿಸಿ ತಮ್ಮ ತಾಯಿಯನ್ನು ಅಪ್ಪಿಕೊಂಡಿರುವ ಫೋಟೋಗಳನ್ನು ಪ್ರಿಯಾಂಕಾ ಹಂಚಿಕೊಂಡಿದ್ದು, ಫೋಟೋಗೆ 'ಲೆಗ್ಸ್ ಫಾರ್ ಡೇಸ್' ಎಂದು ಶೀರ್ಷಿಕೆ ನೀಡಿದ್ದಾರೆ. 
ಬಾಲಿವುಡ್ ನಲ್ಲಿ ಸಾಕಷ್ಟು ಖ್ಯಾತಿ ಗಳಿಸಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರು ಹಾಲಿವುಡ್ ನಲ್ಲೂ ತಮ್ಮ ಚೊಚ್ಚಲ ಚಿತ್ರ 'ಬೇವಾಚ್' ಚಿತ್ರದ ಮೂಲಕ ಸುದ್ದಿ ಮಾಡುತ್ತಿದ್ದಾರೆ. ತಮ್ಮ ಹೊಸ ಚಿತ್ರದ ಪ್ರಚಾರಾರ್ಥವಾಗಿ ಪ್ರಿಯಾಂಕಾ ಪ್ರಸ್ತುತ ಬರ್ಲಿನ್ ನಲ್ಲಿದ್ದಾರೆ. ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಕೂಡ 6 ದಿನಗಳ ನಾಲ್ಕು ರಾಷ್ಟ್ರಗಳ (ಜರ್ಮನಿ, ಸ್ಪೇನ್, ರಷ್ಯಾ ಮತ್ತು ಫ್ರಾನ್ಸ್)ಭೇಟಿಯಲ್ಲಿದ್ದ ಬರ್ಲಿನಲ್ಲಿರುವ ಪ್ರಿಯಾಂಕಾ ಅವರನ್ನು ಭೇಟಿಯಾಗಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವೇನ್ ಮುಚ್ಚೋದು ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ- ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ; Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ, Turkey ಬೇಸ್ತು!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್, KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

IPL 2026: ಬಟ್ಲರ್ 14,000 ರನ್ ದಾಖಲೆ; ಮಿಂಚಿದ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ; LSG ವಿರುದ್ಧ GT ಗೆಲುವು!

US-Iran ಶಾಂತಿ ಮಾತುಕತೆ ವಿಫಲ ಬೆನ್ನಲ್ಲೇ Pakistanಗೆ ಜಾಕ್‌ಪಾಟ್‌: ಕತಾರ್, ಸೌದಿಯಿಂದ 5 ಬಿಲಿಯನ್ ಡಾಲರ್ ಆರ್ಥಿಕ ನೆರವು!

SCROLL FOR NEXT