ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

ಪ್ರೀತಿ ಹೆಸರಲ್ಲಿ ವಂಚನೆ: ಆರೋಪ ತಳ್ಳಿ ಹಾಕಿದ ಕನ್ನಡದ ನಟಿ

ಕಿರುತೆರೆಯ ಖ್ಯಾತ ನಟಿಯೊಬ್ಬರ ವಿರುದ್ಧ ಪ್ರೀತಿ ಹೆಸರಲ್ಲಿ ವಂಚನೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.

ಬೆಂಗಳೂರು: ಕಿರುತೆರೆಯ ಖ್ಯಾತ ನಟಿಯೊಬ್ಬರ ವಿರುದ್ಧ ಪ್ರೀತಿ ಹೆಸರಲ್ಲಿ ವಂಚನೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.
ಮಾಧ್ಯಮವೊಂದರ ವರದಿಯನ್ವಯ ಕನ್ನಡ ಕಿರುತೆರೆ ನಾಯಕ ನಟಿ ಪ್ರಿಯಾಂಕ ಚಿಂಚೋಳಿ ಅವರ ವಿರುದ್ಧ ಇಂತಹ ಆರೋಪ ಕೇಳಿ ಬಂದಿದ್ದು, ಸಾಯಿರಾಂ ಎಂಬ ಮಾಡೆಲ್ ವೊಬ್ಬರನ್ನು ವಂಚಿಸಿದ್ದಾರೆ ಎನ್ನಲಾಗಿದೆ. ಪ್ರೀತಿ ಹೆಸರಲ್ಲಿ ನಟಿ ಪ್ರಿಯಾಂಕ ಮೋಸ ಮಾಡಿದ್ದು, ಹಣ ವಂಚನೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ ನಟಿ ಪ್ರಿಯಾಂಕ ಜೊತೆಗಿನ ಒಂದಿಷ್ಟು ಫೋಟೋ ಮತ್ತು ಮೆಸೇಂಜರ್ ಸಂಭಾಷಣೆ ನನ್ನ ಬಳಿ ಇದೆ ಎಂದು ಸಾಯಿರಾಂ ಹೇಳಿಕೊಂಡಿದ್ದಾರಂತೆ. 
ಇನ್ನು ಸಾಯಿರಾಂ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ನಟಿ ಪ್ರಿಯಾಂಕ ಸಾಯಿರಾಮ್ ಕೇವಲ ನನಗೆ ಸ್ನೇಹಿತ, ಆತ ನನ್ನ ಮೇಲೆ ದುರುದ್ದೇಶ ಇಟ್ಟುಕೊಂಡು ಈ ರೀತಿ ಮಾಡಿದ್ದಾನೆ. ಆತನ ಆರೋಪಗಳೆಲ್ಲಾ ಸುಳ್ಳು ಎಂದು ಹೇಳಿದ್ದಾರೆ. ಅಲ್ಲದೆ ಈ ಸಂಬಂಧ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸ್ಟೇಟಸ್ ಕೂಡ ಹಾಕಿರುವ ನಟಿ ಪ್ರಿಯಾಂಕ, ಓರ್ವ ವ್ಯಕ್ತಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ನನ್ನನ್ನು ಪ್ರೀತಿಸುವವರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಇಂತಹ ಸುಳ್ಳು ಆರೋಪಗಳನ್ನು ಅವರು ನಂಬುವುದಿಲ್ಲ. ನಿಮ್ಮ 'ಪಾರ್ವತಿ'ಯನ್ನು ಹೀಗೆ ಬೆಂಬಲಿಸುತ್ತಿರಿ ಎಂದು ನಟಿ ಮನವಿ ಮಾಡಿಕೊಂಡಿದ್ದಾರೆ.
ಇನ್ನು ನಟಿ ಪ್ರಿಯಾಂಕ ಬಿಲ್ ಗೇಟ್ಸ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದು, ಇದಲ್ಲದೆ ಹರಹರ ಮಹಾದೇವ ಧಾರಾವಾಹಿಯಲ್ಲಿ ಪಾರ್ವತಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್