ನಟ ಸುದೀಪ್ ಹಾಗೂ ಪ್ರಿಯಾ ಸುದೀಪ್ 
ಸಿನಿಮಾ ಸುದ್ದಿ

'ಮೈ ಡಿಯರ್ ಹೀರೋ'; ದಿ ವಿಲನ್ ಬಿಡುಗಡೆ ಬಳಿಕ ಗಮನ ಸೆಳೆದ ಸುದೀಪ್ ಪತ್ನಿ ಪ್ರಿಯಾ ಟ್ವೀಟ್!

ಇಂದು ತೆರೆಕಂಡ ಬಹು ನಿರೀಕ್ಷಿತ ಚಿತ್ರ ದಿ ವಿಲನ್ ಚಿತ್ರಕ್ಕೆ ಸಿಕ್ಕ ಪ್ರೇಕ್ಷಕರ ಅಭೂತ ಪೂರ್ವ ಬೆಂಬಲದಿಂದಾಗಿ ಪುಳಕಗೊಂಡಿರುವ ಸುದೀಪ್ ಅವರ ಪತ್ನಿ ಪ್ರಿಯಾ ಚಿತ್ರ ತಂಡಕ್ಕೆ ಟ್ವೀಟ್ ಮಾಡಿ ಶುಭಕೋರಿದ್ದಾರೆ.

ಬೆಂಗಳೂರು: ಇಂದು ತೆರೆಕಂಡ ಬಹು ನಿರೀಕ್ಷಿತ ಚಿತ್ರ ದಿ ವಿಲನ್ ಚಿತ್ರಕ್ಕೆ ಸಿಕ್ಕ ಪ್ರೇಕ್ಷಕರ ಅಭೂತ ಪೂರ್ವ ಬೆಂಬಲದಿಂದಾಗಿ ಪುಳಕಗೊಂಡಿರುವ ಸುದೀಪ್ ಅವರ ಪತ್ನಿ ಪ್ರಿಯಾ ಚಿತ್ರ ತಂಡಕ್ಕೆ ಟ್ವೀಟ್ ಮಾಡಿ ಶುಭಕೋರಿದ್ದಾರೆ.
ಚಿತ್ರ ಬಿಡುಗಡೆಗೂ ಮೊದಲೇ ಚಿತ್ರಕ್ಕೆ ಸಿಕ್ಕ ಅಭೂತ ಪೂರ್ವ ಬೆಂಬಲದಿಂದಾಗಿ ಖುಷಿಯಾಗಿರುವ ಪ್ರಿಯಾ ಅವರು, 'ನಾನು ಈವೆರೆಗೂ ಈ ರೀತಿಯ ಕ್ರೇಜ್ ಅನ್ನು ಈ ಹಿಂದೆ ನೋಡಿಯೇ ಇರಲಿಲ್ಲ. ರಾಜ್ಯಾದ್ಯಂತ ಇದು ಹಬ್ಬದ ರೀತಿ ಆಗಿದೆ. ಎನರ್ಜಿಟಿಕ್ ಶಿವಣ್ಣ, ನಿರ್ದೇಶಕ ಪ್ರೇಮ್ ಹಾಗೂ ನನ್ನ ಪ್ರೀತಿಯ ಹೀರೋ ಸುದೀಪ್ ಸೇರಿದಂತೆ ಇಡೀ ‘ದಿ ವಿಲನ್’ ಚಿತ್ರತಂಡಕ್ಕೆ ನನ್ನ ಶುಭಾಶಯಗಳು' ಎಂದು  ಟ್ವೀಟ್ ಮಾಡಿದ್ದಾರೆ.
ಇನ್ನು ನಿರ್ದೇಶಕ ಪ್ರೇಮ್ ನಿರ್ದೇಶನದ, ನಟ ಶಿವರಾಜ್ ಕುಮಾರ್ ಮತ್ತು ಸುದೀಪ್ ಇದೇ ಮೊದಲ ಬಾರಿಗೆ ಜೊತೆಯಾಗಿ ಅಭಿನಯಿಸಿರುವ ಬಹು ನಿರೀಕ್ಷಿತ ಚಿತ್ರ ದಿ ವಿಲನ್ ಇಂದು ತೆರೆಕಂಡಿದ್ದು, ದೇಶಾದ್ಯಂತ ಸುಮಾರು 600 ಚಿತ್ರ ಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಮುಂಗಡ ಬುಕ್ಕಿಂಗ್ ಆರಂಭವಾಗಿದ್ದರಿಂದ ಇಂದು ಮುಂಜಾನೆಯಿಂದಲೇ ಚಿತ್ರ ಪ್ರದರ್ಶನ ಆರಂಭ ಮಾಡಲಾಗಿದ್ದು, ಚಿತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia conflict: ದುಬೈ ಏರ್‌ಪೋರ್ಟ್‌ ಬಳಿ ಡ್ರೋನ್‌ ದಾಳಿ; ವಿಮಾನ ಸಂಚಾರ ತಾತ್ಕಾಲಿಕ ಸ್ಥಗಿತ, 'Hormuz' ರಕ್ಷಣೆಗೆ NATO ನೆರವು ಕೋರಿದ ಟ್ರಂಪ್

ಹಾರ್ಮುಜ್ ನಿಂದ ದೇಶಕ್ಕೆ ತೈಲ ಹಡಗುಗಳ ಸುಗಮ ಸಂಚಾರ: ಇರಾನ್ ನ ಭಾರತ ಒಪ್ಪಿಸಿದ್ದು ಹೇಗೆ?: ಜೈಶಂಕರ್ ಬಿಚ್ಚಿಟ್ಟ ಮಾಹಿತಿ ಇದು...

ಒಡಿಶಾದ SCB ವೈದ್ಯಕೀಯ ಕಾಲೇಜಿನಲ್ಲಿ ಭಾರೀ ಅಗ್ನಿ ಅವಘಡ: ಕನಿಷ್ಠ 10 ಮಂದಿ ಸಾವು, ಮೃತರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ಘೋಷಣೆ

ಗಡುವು ಮೀರಿ 5 ತಿಂಗಳಾದರೂ ಮುಕ್ತಾಯಗೊಳ್ಳದ ಯಶವಂತಪುರ, ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳ ನವೀಕರಣ ಕಾಮಗಾರಿ!

ರಾಜ್ಯಸಭೆಗೆ 26 ಮಂದಿ ಅವಿರೋಧ ಆಯ್ಕೆ: 3ರಾಜ್ಯಗಳಲ್ಲಿ ಬಿಗ್ ಫೈಟ್; ಮೇಲ್ಮನೆಯಲ್ಲಿ ಬಿಜೆಪಿಗೆ ಮತ್ತಷ್ಟು ಬಲ!

SCROLL FOR NEXT