ವಿಹಾನ್ 
ಸಿನಿಮಾ ಸುದ್ದಿ

'ಲೆಟ್ಸ್ ಬ್ರೇಕ್ಅಪ್'ನಲ್ಲಿ ವಿಹಾನ್, ಶ್ರೀಲೀಲಾ

ಲೆಟ್ಸ್ ಬ್ರೇಕ್ಅಪ್ ಫಾರೆವರ್ ನಲ್ಲಿ ನಟ ವಿಹಾನ್ ಹಾಗೂ ನಟಿ ಶ್ರೀಲೀಲಾ ಅವರು ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 

ಲೆಟ್ಸ್ ಬ್ರೇಕ್ಅಪ್ ಫಾರೆವರ್ ನಲ್ಲಿ ನಟ ವಿಹಾನ್ ಹಾಗೂ ನಟಿ ಶ್ರೀಲೀಲಾ ಅವರು ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 

ಕಿಸ್ ಚಿತ್ರದ ಮೂಲಕ ಸ್ಯಾಂಡಲ್ವುಡ್'ಗೆ ಪರಿಚಯವಾಗಿರುವ ಶ್ರೀಲೀಲಾ ಅವರು, ಬಳಿಕ ಭರಾಟೆ ಚಿತ್ರದ ಮೂಲಕ ಸಿನಿಪ್ರಿಯರಿಗೆ ಹತ್ತಿರವಾಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಎರಡು ದೊಡ್ಡ ಚಿತ್ರಗಳಲ್ಲಿ ಅಭಿನಯಿಸಿರುವ ಶ್ರೀಲೀಲಾ ಅವರು ಇದೀಗ ಪಂಚತಂತ್ರ ಖ್ಯಾತಿಯ ವಿಹಾನ್ ಅವರಿಗೆ ಲೆಟ್ಸ್ ಬ್ರೇಕಪ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 

ಜಯಣ್ಣ ಕಂಬೈನ್ಸ್ ಮೂಲಕ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಹೊಸ ನಿರ್ದೇಶಕ ಸ್ವರೂಪ್ ಅವರು ಆ್ಯಕ್ಷನ್ ಕಟ್ ಹೇಳಲಿದ್ದಾರೆ. ರೊಮ್ಯಾಂಟಿಕ್ ಲವ್ ಸ್ಟೋರಿ ಇರುವ ಈ ಚಿತ್ರದಲ್ಲಿ ವಿಹಾನ್ ಹಾಗೂ ಶ್ರೀಲೀಲಾ ಅವರು ಆಕರ್ಷಕವಾಗಿ ಕಾಣಿಸಿಕೊಳ್ಳಲಿದ್ದಾರಂತೆ. 

ಮೇ ತಿಂಗಳಿನಲ್ಲಿ ಚಿತ್ರ ಸೆಟ್ ಏರಲಿದ್ದು, ಚಿತ್ರದ ಮೊದಲನೇ ಪೋಸ್ಟರ್ ನ್ನು ಚಿತ್ರ ತಂಡ ಪ್ರೇಮಿಗಳ ದಿನದಂದು ಬಿಡುಗಡೆ ಮಾಡಲಿದೆ. ಇನ್ನು ಚಿತ್ರ ತಂಡ ಈಗಾಗಲೇ ಸಂಗೀತ ಸಂಯೋಜನೆ ಕಾರ್ಯ ಆರಂಭಿಸಿದ್ದು, ಚಿತ್ರದಲ್ಲಿ ಒಟ್ಟು ಐದು ಹಾಡುಗಳಿರಲಿವೆ. ಚಿತ್ರದ ಬಹುತೇಕ ಚಿತ್ರೀಕರಣ ಬೆಂಗಳೂರಿನಲ್ಲಿಯೇ ನಡೆಯಲಿದೆ. ಮಂಗಳೂರಿನ ಕರಾವಳಿ ತೀರ ಪ್ರದೇಶದಲ್ಲಿಯೂ ಚಿತ್ರೀಕರಣ ನಡೆಯಲಿದೆ. ಚಿತ್ರ 2020ರ ಅಕ್ಟೋಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ತಂಡ ಮಾಹಿತಿ ನೀಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್