ರಾಜವರ್ಧನ್ 
ಸಿನಿಮಾ ಸುದ್ದಿ

'ಪ್ರಣಯಂ' ಸೆಟ್ ನಲ್ಲಿ ರಾಜವರ್ಧನ್ ಮತ್ತು ನೈನಾ ಗಂಗೂಲಿ ಹೊಸ ವರ್ಷಾಚರಣೆ!

ದತ್ತಾತ್ರೇಯ ನಿರ್ದೇಶನದ ಮುಂದಿನ ಪ್ರಣಯಂ ಸಿನಿಮಾದಲ್ಲಿ ರಾಜವರ್ಧನ್ ನಟಿಸಿದ್ದಾರೆ. ರಾಜವರ್ಧನ್ ಜೊತೆಯಾಗಿ ನೈನಾ ಗಂಗೂಲಿ ನಾಯಕಿಯಾಗಿ ನಟಿಸಿದ್ದಾರೆ.

ದತ್ತಾತ್ರೇಯ ನಿರ್ದೇಶನದ ಮುಂದಿನ ಪ್ರಣಯಂ ಸಿನಿಮಾದಲ್ಲಿ ರಾಜವರ್ಧನ್ ನಟಿಸಿದ್ದಾರೆ. ರಾಜವರ್ಧನ್ ಜೊತೆಯಾಗಿ ನೈನಾ ಗಂಗೂಲಿ ನಾಯಕಿಯಾಗಿ ನಟಿಸಿದ್ದಾರೆ.

ಬೆಂಗಾಲಿ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಕೆಲಸ ಮಾಡಿರುವ ನೈನಾ ಗಂಗೂಲಿ ಪ್ರಣಯಂ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಸಂಗೀತ ನಿರ್ದೇಶಕ ಮನೋಮೂರ್ತಿ ರೋಮ್ಯಾಂಟಿಕ್ ಹಾಡಿಗೆ ಮದನ್ ಹರಿಣಿ ನೃತ್ಯ ಸಂಯೋಜನೆಯಿದೆ.  ನನ್ನ ಹಿಂದಿನ ಸಿನಿಮಾ ಬಿಚ್ಚುಗತ್ತಿ ಐತಿಹಾಸಿಕ ಸಿನಿಮಾವಾಗಿತ್ತು, ಹಾಗಾಗಿ ಹಾಡುಗಳಲ್ಲಿ ಸಾಕಷ್ಟು ಮಿತಿಯಿತ್ತು, ಪ್ರಣಯಂ ಸಿನಿಮಾ ಹಾಡು ನನಗೆ ತುಂಬಾ ಬದಲಾಗಿ ಕಾಣಿಸಿತು, ಈ ರೋಮ್ಯಾಂಟಿಕ್ ಹಾಡು ನನ್ನಲ್ಲಿ ಮತ್ತಷ್ಟು ಅಭಿರುಚಿ ತುಂಬಿಸಿತ್ತು, ಹಾಡನ್ನು ತುಂಬಾ ಕಲಾತ್ಮಕವಾಗಿ ಚಿತ್ರೀಕರಿಸಲಾಗಿದೆ ಎಂದು ರಾಜವರ್ಧನ್ ತಿಳಿಸಿದ್ದಾರೆ.

ಸಿನಿಮಾ  ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, 15 ದಿನಗಳ ಶೂಟಿಂಗ್ ಗಾಗಿ ಚಿತ್ರತಂಡಮ ಮೂಡಿಗೆರೆಗೆ ತೆರಳಿದೆ. ಮಾನ್ಸಿ ವೆಂಚರ್ಸ್ ಸಹಯೋಗದಲ್ಲಿ ಪಿ2 ಪ್ರೊಡಕ್ಷನ್ಸ್‌ನ ಪರಮೇಶ್ ಅವರು ನಿರ್ಮಾಣ ಮಾಡಿದ್ದಾರೆ. ನಾಗೇಶ್ ಆಚಾರ್ಯ  ಪ್ರಣಯಂಗೆ ಛಾಯಾಗ್ರಾಹಕರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ