ಸಿನಿಮಾ ಸುದ್ದಿ

ದೇಶ ವಿದೇಶದ ಅಂತಾರಾಷ್ತ್ರೀಯ ಚಿತ್ರೋತ್ಸವಗಳಲ್ಲಿ ಸಾಗರ್ ಪುರಾಣಿಕ್ 'ಡೊಳ್ಳು' ಸಿನಿಮಾ ಸದ್ದು

ಇಷ್ಟು ವರ್ಷ ಖ್ಯಾತನಾಮರ ಸಿನಿಮಾಗಳನ್ನು ನೋಡಲು ಪ್ರತಿಷ್ಟಿತ IFFI ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದರು ಸಾಗರ್ ಪುರಾಣಿಕ್. ಅಲ್ಲಿ ತಮ್ಮದೂ ಸಿನಿಮಾ ತೆರೆ ಕಾಣಬೇಕು ಎಂದು ಆಸೆ ಪಡುತ್ತಿದ್ದ ಅಸಂಖ್ಯ ಫಿಲಂ ಮೇಕರ್ ಗಳಲ್ಲಿ ಸಾಗರ್ ಕೂಡಾ ಒಬ್ಬರು. ಈ ಬಾರಿ ಅವರ ಕೋರಿಕೆ ದೇವರನ್ನು ಮುಟ್ಟಿದೆ. 

ಬೆಂಗಳೂರು: ಕನ್ನಡದ ಉದಯೋನ್ಮುಖ ಫಿಲಂ ಮೇಕರ್ ಸಾಗರ್ ಪುರಾಣಿಕ್ ನಿರ್ದೇಶನದ, ಪವನ್ ಒಡೆಯರ್ ನಿರ್ಮಾಣದ ಡೊಳ್ಳು ಸಿನಿಮಾ ದೇಶ ವಿದೇಶದ ಅಂತಾರಾಷ್ಟ್ರೀಯ ಚಿತ್ರೋತ್ಸವಗಳ ಸುತ್ತು ಹಾಕುತ್ತಿದೆ. ಕನ್ನಡ ಚಿತ್ರವೊಂದು ದೇಶವಿದೇಶಗಳಲ್ಲಿ ಸದ್ದು ಮಾಡುತ್ತಿರುವ ಸಂತಸ ಒಂದೆಡೆಯಾದರೆ, ಕನ್ನಡ ನೆಲದ, ಇಲ್ಲಿನ ಸೊಗಡಿನ ಚಿತ್ರವೊಂದಕ್ಕೆ ಅಂತಾರಾಷ್ಟ್ರೀಯ ಮನ್ನಣೆ ದೊರೆಯುತ್ತಿದೆ ಎನ್ನುವ ಸಂತಸ ಮತ್ತೊಂದೆಡೆ. 

ಸಾಗರ್ ಪುರಾಣಿಕ್, ನಿರ್ದೇಶಕ 

ಡೊಳ್ಳು ಸಿನಿಮಾ ಅಮೆರಿಕದ ಬಾಸ್ಟನ್ ನಗರಿಯಲ್ಲಿನ ಕಲೈಡೊಸ್ಕೋಪ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಭಾರತೀಯ ಸಿನಿಮಾ ಪ್ರಶಸ್ತಿ ಮತ್ತು ಅತ್ಯುತ್ತಮ ತಾಂತ್ರಿಕ ಸಿನಿಮಾ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

ಅಮೆರಿಕದ ಡಲ್ಲಾಸ್- ನ್ಯೂಯಾರ್ಕ್ ನಗರದ ದಕ್ಷಿಣ ಏಷ್ಯಾ ಚಿತ್ರೋತ್ಸವಕ್ಕೂ ಅಧಿಕೃತವಾಗಿ ಆಯ್ಕೆಯಾಗಿದೆ. ಈ ಚಿತ್ರೋತ್ಸವ ಕೊರೊನಾ ಹಿನ್ನೆಲೆಯಲ್ಲಿ ವರ್ಚುವಲ್ ಆಗಿ ನಡೆಯುತ್ತಿದೆ. ಡೊಳ್ಳು ಸಿನಿಮಾ ಪ್ರತಿಷ್ಟಿತ ಧಾಕಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೂ ಅಧಿಕೃತವಾಗಿ ಆಯ್ಕೆಯಾಗಿದೆ. 

ಇಷ್ಟೇ ಅಲ್ಲದೆ ಯುರೋಪ್ ನ ಎರಡು ಚಿತ್ರೋತ್ಸವಕ್ಕೂ ಡೊಳ್ಳು ಸಿನಿಮಾವನ್ನು ಕಳುಹಿಸಿಕೊಡಲಾಗಿದ್ದು. ಅಲ್ಲಿಂದಲೂ ಸಿಹಿಸುದ್ದಿ ಬರುವ ನಿರೀಕ್ಷೆಯನ್ನು ಸಾಗರ್ ಹೊಂದಿದ್ದಾರೆ. ಕರುನಾಡಿನ ಜಾನಪದ ಕಲೆಯಾದ ಡೊಳ್ಳು ಕುಣಿತವನ್ನು ಆಧರಿಸಿದ ಈ ಸಿನಿಮಾಗೆ ಅಂತಾರಾಷ್ಟ್ರೀಯ ವೀಕ್ಷಕರು ಲಭ್ಯವಾಗುತ್ತಿರುವುದು ಕನ್ನಡಿಗರು ಹೆಮ್ಮೆ ತರುವ ವಿಚಾರ.   

ಗೋವಾದಲ್ಲಿ ನಡೆಯಲಿರುವ ಪ್ರತಿಷ್ಟಿತ 52ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ(IFFI) 4 ಕನ್ನಡ ಚಿತ್ರಗಳು ಆಯ್ಕೆಯಾಗಿವೆ. ಅದರಲ್ಲಿ ಡೊಳ್ಳು ಸಿನಿಮಾ ಕೂಡಾ ಒಂದು. ಗೋವಾದ IFFI ಚಿತ್ರೋತ್ಸವಕ್ಕೆ ದೇಶದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಹೆಸರಿದೆ. 

ಪವನ್ ಒಡೆಯರ್, ನಿರ್ಮಾಪಕ

IFFI ಅಲ್ಲಿ ತಮ್ಮ ಸಿನಿಮಾ ತೆರೆ ಕಾಣಬೇಕು ಎನ್ನುವುದು ಬಹಳಷ್ಟು ಫಿಲಂ ಮೇಕರ್ ಗಳು ಹಂಬಲಿಸುತ್ತಾರೆ. ಅಂಥವರಲ್ಲಿ ಸಾಗರ್ ಪುರಾಣಿಕ್ ಕೂಡಾ ಒಬ್ಬರಾಗಿದ್ದರು. ಇಷ್ಟು ವರ್ಷ ಸಿನಿಮಾಗಳನ್ನು ಅಲ್ಲಿ ಸೇರುವ ಸಿನಿಮಾಸಕ್ತರ ಕಾಣಲು ಸಾಗರ್ ಪುರಾಣಿಕ್ IFFIಗೆ ಹೋಗುತ್ತಿದ್ದರು. ಅಲ್ಲಿ ತಮ್ಮದು ಸಿನಿಮಾ ತೆರೆಕಾಣಬೇಕೆಂದು ಅವರು ಪಟ್ಟಿದ್ದ ಅಪೇಕ್ಷೆ ಈ ಬಾರಿ ನೆರವೇರುತ್ತಿದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿಕೆಯ ಆಘಾತದಿಂದ ಇನ್ನೂ ಹೊರಬರಲಾಗದೆ ಚಡಪಡಿಸುತ್ತಿರುವ ಸಾಗರ್ ಪುರಾಣಿಕ್ ಅಪ್ಪು ಅವರಿಗೆ ಸಂಬಂಧಿಸಿದಂತೆ ಈಡೇರದೆ ಉಳಿದು ಹೋದ ತಮ್ಮ ತಂಡದ ಆಸೆಯನ್ನು ಕನ್ನಡಪ್ರಭ ಆನ್ ಲೈನ್ ಜೊತೆ ಹಂಚಿಕೊಂಡಿದ್ದಾರೆ. 

ಪುನೀತ್ ರಾಜಕುಮಾರ್ ಅವರ ಜೊತೆ ಎರಡು ಸಿನಿಮಾಗಳನ್ನು ನಿರ್ದೇಶಿಸಿರುವ ಡೊಳ್ಳು ನಿರ್ಮಾಪಕ ಪವನ್ ಒಡೆಯರ್, ಡೊಳ್ಳು ಸಿನಿಮಾದ ಟ್ರೇಲರ್ ಅನ್ನು ಪುನೀತ್ ಅವರಿಗೆ ತೋರಿಸುವ ಇರಾದೆ ಹೊಂದಿದ್ದರು. ಆದರೆ ಅಷ್ಟರೊಳಗೆ ಯಾರೂ ಊಹಿಸಿರದಿದ್ದ ಅನಾಹುತ ನಡೆದುಹೋಗಿದೆ. 

ಯಾವುದೇ ಅಜೆಂಡಾ ಇಲ್ಲದೆ ಹೃದಯದಿಂದ, ಒಲವಿನಿಂದ ತಮ್ಮ ಹಾಗೂ ಪವನ್ ಒಡೆಯರ್  ಸಾರಥ್ಯದಲ್ಲಿ ಮೂಡಿ ಬಂಡಿರುವ ಡೊಳ್ಳು ಸಿನಿಮಾ ಕಂಡು ಪುನೀತ್ ಖಂಡಿತ ಖುಷಿಪಡುತ್ತಿದ್ದರು ಎಂದು ಸಾಗರ್ ಮೌನವಾಗುತ್ತಾರೆ. 

Related Article

'ಬೆಳಕು ಹೋದ ಮೇಲೆ ಕತ್ತಲು ಬರಲೇ ಬೇಕು, ಅದೇ ಜೀವನ, ಅದೇ ಅಲ್ವ ಸರ್ ವೈರಾಗ್ಯ ಅಂದಿದ್ದರು ಅಪ್ಪು': ರಮೇಶ್ ಅರವಿಂದ್

ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ ಸಾರಾ ಅಲಿ ಖಾನ್ ವಿರುದ್ಧ ನೆಟ್ಟಿಗರ ಟ್ರೋಲ್

ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ', 'ಮಿಷನ್ ಮಜ್ನು' ಸದ್ಯದಲ್ಲಿಯೇ ತೆರೆಗೆ: ಕಾತರದಲ್ಲಿ ಅಭಿಮಾನಿಗಳು

ಇನ್ಶೂರೆನ್ಸ್ ಹಣಕ್ಕಾಗಿ ತನ್ನ ಸಾವಿನ ನಾಟಕವಾಡಿದ ಮೋಸ್ಟ್ ವಾಂಟೆಡ್ ಕ್ರಿಮಿನಲ್ 'ಕುರುಪ್' ಸಿನಿಮಾ ಟ್ರೇಲರ್ ಬಿಡುಗಡೆ: ಮಿಂಚಿದ ದುಲ್ಖರ್ ಸಲ್ಮಾನ್

ಶರಣ್-ಸುನಿ ಕಾಂಬಿನೇಷನ್ 'ಅವತಾರ ಪುರುಷ' ಬಿಡುಗಡೆ ದಿನಾಂಕ ಫಿಕ್ಸ್!

ಹಿಂದಿಯಲ್ಲಿ ಮಾತನಾಡಿದ್ದಕ್ಕೆ ಪ್ರಕಾಶ್ ರೈ ಕಪಾಳ ಮೋಕ್ಷ: ದೃಶ್ಯದ ಬಗ್ಗೆ ನೆಟ್ಟಿಗರ ಆಕ್ರೋಶ

ಯೋಗಿ 'ಒಂಭತ್ತನೇ ದಿಕ್ಕು' ಸಿನಿಮಾಗೆ ಸೆನ್ಸಾರ್ ನಿಂದ U/A ಸರ್ಟಿಫಿಕೆಟ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT