ಸಿನಿಮಾ ಸುದ್ದಿ

ರಮೇಶ್ ಅರವಿಂದ್ ಇಂದಿಗೂ ಚಾರ್ಮ್ ಉಳಿಸಿಕೊಂಡಿದ್ದಾರೆ: ನಟಿ ಪೂರ್ಣ ಕಾಂಪ್ಲಿಮೆಂಟ್

Harshavardhan M

ಬೆಂಗಳೂರು: ನಟ ರಮೇಶ್ ಅರವಿಂದ್ ಅವರು ನಾಯಕ ನಟನಾಗಿ ನಟಿಸಿರುವ ಸೈಬರ್ ಕ್ರೈಮ್ ಆಧಾರಿತ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ 100 ಭಾಗಿಯಾಗಿರುವ ಬಗ್ಗೆ ನಟಿ ಪೂರ್ಣ ಎಕ್ಸೈಟ್ ಆಗಿದ್ದಾರೆ. ಸಿನಿಮಾ ನವೆಂಬರ್ 19ರಂದು ತೆರೆ ಕಾಣುತ್ತಿದೆ. 

ಸಿನಿಮಾದಲ್ಲಿ ನಟಿಸುವ ಸಂದರ್ಭದಲ್ಲಿ ರಮೇಶ್ ಅರವಿಂದ್ ಮತ್ತು ರಚಿತಾ ರಾಮ್ ಅವರು ನೀಡಿದ ಸಹಕಾರವನ್ನು ಕೇರಳ ಮೂಲದ  ನಟಿ ಪೂರ್ಣ ತುಂಬು ಹೃದಯದಿಂದ ಸ್ಮರಿಸಿಕೊಳ್ಳುತ್ತಾರೆ. ಸಂಭಾಷಣೆಗಳನ್ನು ಒಪ್ಪಿಸುವ ಸಮಯದಲ್ಲಿ ರಮೇಶ್ ಅವರು ಟಿಪ್ಸ್ ನೀಡಿದ್ದನ್ನು ಮರೆಯಲು ಸಾಧ್ಯವಿಲ್ಲ ಎನ್ನುತ್ತಾರವರು. 

ಅವರು ಕನ್ನಡದಲ್ಲಿ ಈ ಹಿಂದೆ ಜೋಶ್ ಸಿನಿಮಾದಲ್ಲಿ ನಟಿಸಿದ್ದರು. ಆಗ ಅವರು ೧೧ನೇ ತರಗತಿ ವಿದ್ಯಾರ್ಥಿನಿ ಎನ್ನುವುದು ವಿಶೇಷ. ಅವರು 100 ಸಿನಿಮಾದ ಸಂಭಾಷಣೆಗಳನ್ನು ಮೊದಲು ತಮ್ಮ ಭಾಷೆಯಲ್ಲಿ ಬರೆದುಕೊಂಡು ಅಭ್ಯಾಸ ಮಾಡಿದ್ದಾಗಿ ಮುಕ್ತವಾಗಿ ಹೇಳಿಕೊಳ್ಳುತ್ತಾರೆ ಪೂರ್ಣ.

ರಮೇಶ್ ಅರವಿಂದ್ ಅವರ ಈ ಹಿಂದಿನ ಸಿನಿಮಾಗಳನ್ನು ನೋಡಿರುವ ಪೂರ್ಣ ರಮೇಶ್ ಇಂದಿಗೂ ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ ಎಂದು ಕಾಂಪ್ಲಿಮೆಂಟ್ ನೀಡುತ್ತಾರೆ. ಈ ಸಿನಿಮಾ ಮೊಬೈಲ್ ನಿಂದ ಉಂಟಾಗುವ ತೊಂದರೆಗಳನ್ನು, ಅದರ ಬಳಕೆ ಕುರಿತು ಸಂದೇಶವನ್ನು ಹೊಂದಿದೆ.

Related Article

ಅರ್ಜುನ್ ಸರ್ಜಾ- ರಾಧಿಕಾ 'ಒಪ್ಪಂದ': ಹೊಸ ಸಿನಿಮಾ ಹೆಸರು ಬದಲಾವಣೆ

ಅಪ್ಪು ಕಳೆದುಕೊಂಡು ಸಾಕಷ್ಟು ನೊಂದಿದ್ದೇವೆ: ನಿಮ್ಮ ಕುಟುಂಬವನ್ನು ಒಂಟಿಯಾಗಿಸಬೇಡಿ: ಅಭಿಮಾನಿಗಳಿಗೆ ಅಶ್ವಿನಿ ಮನವಿ

ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಎಲ್ಲರೂ ಸಮಾಧಾನದಿಂದ ಬಂದು ಊಟ ಮಾಡಿಕೊಂಡು ಹೋಗಿ: ಶಿವಣ್ಣ, ರಾಘಣ್ಣ ಮನವಿ

ನಂದಮೂರಿ ಬಾಲಕೃಷ್ಣ ಜೊತೆ ತೆಲುಗು ಸಿನಿಮಾ: ಟಾಲಿವುಡ್ ಗೆ ದುನಿಯಾ ವಿಜಯ್ ಪಾದಾರ್ಪಣೆ

ಸಮಾಜ ಸೇವೆ ಮಾಡುವ ಉದಾತ್ತ ಕೆಲಸವನ್ನು ಬಿಟ್ಟು ಹೋಗಿದ್ದೀಯಾ, ಅದನ್ನು ಮುಂದುವರಿಸುವ ಶಕ್ತಿಯನ್ನು ನೀಡು: 'ಅಪ್ಪು' ನೆನೆದು ರಾಘಣ್ಣ ಭಾವುಕ ನುಡಿ

ಕಲಾವಿದನಾಗಿ ನಾನು ನೀರಿನಂತೆ ಇರಬೇಕು, ಪಾತ್ರ ಯಾವುದಾದರೂ ಅದಕ್ಕೆ ಒಗ್ಗಿಕೊಳ್ಳಬೇಕು: ಟಾಮ್ ಅಂಡ್ ಜೆರ್ರಿ ನಾಯಕ ನಿಶ್ಚಿತ್ ಕೊರೊಡಿ

SCROLL FOR NEXT