ಸಖತ್ ಚಿತ್ರೀಕರಣ ವೇಳೆ ನಿರ್ದೇಶಕ ಸಿಂಪಲ್ ಸುನಿ ಮತ್ತು ಗಣೇಶ್ 
ಸಿನಿಮಾ ಸುದ್ದಿ

ಸಖತ್ ನಲ್ಲಿ ಪ್ರೇಕ್ಷಕರಿಗೆ ಮನರಂಜನೆ ಗ್ಯಾರಂಟಿ: ಗೋಲ್ಡನ್ ಸ್ಟಾರ್ ಗಣೇಶ್

ಲವಲವಿಕೆಯಿಂದ ಕೂಡಿದ್ದ ನ್ಯೂ ಏಜ್ ಕಾಮಿಡಿ ಸಿನಿಮಾ ಚಮಕ್ ಪ್ರೇಕ್ಷಕರನ್ನು ನಗಿಸುವುವುದರ ಜೊತೆಗೆ ಸಾಮಾಜಿಕ ಸಂದೇಶವನ್ನೂ ಹೊಂದಿತ್ತು. ಇದೀಗ ಮತ್ತೆ ಗಣೇಶ್ ಮತ್ತು ನಿರ್ದೇಶಕ ಸುನಿ 'ಸಖತ್' ಗಾಗಿ ಒಂದಾಗಿರುವುದು ಅಭಿಮಾನಿಗಳ ನಿರೀಕ್ಷೆಯನ್ನು ದುಪ್ಪಟ್ಟಾಗಿಸಿದೆ. 

ನವೆಂಬರ್ 26ರಂದು ಬಿಡುಗಡೆಯಾಗುತ್ತಿರುವ ಸಿಂಪಲ್ ಸುನಿ ನಿರ್ದೇಶಿಸಿ, ತಾವು ನಾಯಕರಾಗಿ ನಟಿಸಿರುವ 'ಸಖತ್' ಸಿನಿಮಾ ಬಗ್ಗೆ ಗೋಲ್ಡನ್ ಸ್ಟಾರ್ ಗಣೇಶ್ ಭರವಸೆಯ ಮಾತುಗಳನ್ನಾಡಿದ್ದಾರೆ. 

ಈ ಹಿಂದೆ ಸಿಂಪಲ್ ಸುನಿ ಮತ್ತು ಗಣೇಶ್ ಕಾಂಬಿನೇಷನ್ ನಲ್ಲಿ ಚಮಕ್ ಸಿನಿಮಾ ತೆರೆಕಂಡಿತ್ತು. ಲವಲವಿಕೆಯಿಂದ ಕೂಡಿದ್ದ ನ್ಯೂ ಏಜ್ ಕಾಮಿಡಿ ಸಿನಿಮಾ ಚಮಕ್  ಪ್ರೇಕ್ಷಕರನ್ನು ನಗಿಸುವುವುದರ ಜೊತೆಗೆ ಸಾಮಾಜಿಕ ಸಂದೇಶವನ್ನೂ ಹೊಂದಿತ್ತು. ಇದೀಗ ಮತ್ತೆ ಗಣೇಶ್ ಮತ್ತು ಸುನಿ 'ಸಖತ್' ಗಾಗಿ ಒಂದಾಗಿರುವುದು ಅಭಿಮಾನಿಗಳ ನಿರೀಕ್ಷೆಯನ್ನು ದುಪ್ಪಟ್ಟಾಗಿಸಿದೆ. 

ಸಖತ್ ಸಿನಿಮಾದಲ್ಲಿ ತಾವು ಈವರೆಗೆ ಟ್ರೈ ಮಾಡದ ಹೊಸ ಹೊಸ ಪ್ರಯೋಗಕ್ಕೆ ಒಳಗಾಗಿರುವುದಾಗಿ ಗಣೇಶ್ ಹೇಳಿದ್ದಾರೆ. ಈ ಸಿನಿಮಾ ಮೇಲ್ನೋಟಕ್ಕೆ ಕೋರ್ಟ್ ರೂಮ್ ಡ್ರಾಮಾ ಸಿನಿಮಾದಂತೆ ತೋರಿದರೂ ಇದೂ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಕೂಡಾ ಆಗಿರಲಿದೆ.

ನ್ಯಾಯಾಲಯ ವಿಚಾರಣೆ ವೇಳೆ ಒಬ್ಬ ಅಂಧ ಸಾಕ್ಷಿಯಾಗಬೇಕಾದ ಪರಿಸ್ಥಿತಿ ಬಂದರೆ ಏನಾಗುತ್ತದೆ ಎನ್ನುವುದೇ ಸಿನಿಮಾದ ಕಥಾವಸ್ತು. ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು, ಸುರ್ಭಿ ನಟಿಸಿದ್ದಾರೆ. ಅಲ್ಲದೆ 12 ಮಂದಿ ಕಾಮಿಡಿ ನಟರು ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ವಿಶೇಷ.

Related Article

'ಅಪ್ಪು ಅವರ ಕನಸೊಂದನ್ನು ಸಾಕಾರಗೊಳಿಸಲು ಮುಂದಾಗಿದ್ದೇವೆ, ನಿಮ್ಮ ಸಹಕಾರ ಎಂದಿನಂತಿರಲಿ': ಅಶ್ವಿನಿ ಪುನೀತ್ ರಾಜ್ ಕುಮಾರ್

ಕಿರುತೆರೆಯಿಂದ ಬೆಳ್ಳಿತೆರೆಗೆ ಅಮೃತವರ್ಷಿಣಿ ಧಾರಾವಾಹಿ ನಟಿ ರಜಿನಿ ಹೈಜಂಪ್: 'ಅಂಬುಜಾ' ಹಾರರ್ ಥ್ರಿಲ್ಲರ್ ಸಿನಿಮಾದಲ್ಲಿ ನಟನೆ

ಸಿನಿಮಾ ನೋಡಿ ರಾಜ್ ಶೆಟ್ಟಿಗೆ ಕರೆ ಮಾಡಿದ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್: ಮುಂಬೈಗೆ ಆಹ್ವಾನ

ರಂಗಿತರಂಗ ಹಿಂದಿ ರಿಮೇಕ್ ಹಕ್ಕುಗಳ ಮಾರಾಟ ಸುದ್ದಿ ಅಲ್ಲಗಳೆದ ನಿರ್ಮಾಪಕ

'ಅಪ್ಪುಗೆ ಕರ್ನಾಟಕ ರತ್ನ ಸಿಕ್ಕಿದೆ ಅಂದರೆ ಅಂಬರೀಷ್ ಗೂ ಸಿಕ್ಕಿದಂತೆ, ಅಷ್ಟೇ ಸಂತೋಷವಾಗಿದೆ': ಸುಮಲತಾ ಅಂಬರೀಷ್

'ನಾನು ಆರೋಗ್ಯವಾಗಿದ್ದೇನೆ, ಅಭಿಮಾನ ಆವೇಶವಾಗುವುದು ಬೇಡ, ನಾನು ಕೇಳದೆಯೆ ಸರ್ಕಾರ ನನ್ನ ಮನೆಗೆ ಭದ್ರತೆ ಕೊಟ್ಟಿದೆ': ಡಾ. ಹಂಸಲೇಖ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT