ಸೌರಭ್ ಕುಲಕರ್ಣಿ 
ಸಿನಿಮಾ ಸುದ್ದಿ

ಪಾಪಾ ಪಾಂಡು ನಟ ಸೌರಭ್ ಕುಲಕರ್ಣಿ ನಿರ್ದೇಶನದಲ್ಲಿ 'ಸಿರಿ ಲಂಬೋದರ ವಿವಾಹ' ಸಿನಿಮಾ

ಪಾಪಾ ಪಾಂಡು ಖ್ಯಾತಿಯ ನಟ, ನಿರೂಪಕ ಸೌರಭ್ ಕುಲಕರ್ಣಿ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿರಿ ಲಂಬೋದರ ವಿವಾಹ (ಎಸ್ ಎಲ್ ವಿ) ಎನ್ನುವ ಸಿನಿಮಾವನ್ನು ಅವರು ನಿರ್ದೇಶಿಸುತ್ತಿದ್ದಾರೆ. ಸೌರಭ್ ಅವರು ಕನ್ನಡದ ಹೆಸರಾಂತ ನಿರೂಪಕ ದಿ.ಸಂಜೀವ್ ಕುಲಕರ್ಣಿ ಅವರ ಪುತ್ರ.

ಬೆಂಗಳೂರು: ಪಾಪಾ ಪಾಂಡು ಖ್ಯಾತಿಯ ನಟ, ನಿರೂಪಕ ಸೌರಭ್ ಕುಲಕರ್ಣಿ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿರಿ ಲಂಬೋದರ ವಿವಾಹ (ಎಸ್ ಎಲ್ ವಿ) ಎನ್ನುವ ಸಿನಿಮಾವನ್ನು ಅವರು ನಿರ್ದೇಶಿಸುತ್ತಿದ್ದಾರೆ. ಸೌರಭ್ ಅವರು ಕನ್ನಡದ ಹೆಸರಾಂತ ನಿರೂಪಕ ದಿ.ಸಂಜೀವ್ ಕುಲಕರ್ಣಿ ಅವರ ಪುತ್ರ.

ಟ್ವಿಸ್ಟ್ ವಿತ್ ಫ್ಯಾಮಿಲಿ ಡ್ರಾಮ

ನಮ್ಮನೆ ಪ್ರೊಡಕ್ಷನ್ ಟೀಮ್ ತಂಡ ಈ ಚಿತ್ರ ನಿರ್ಮಾಣದಲ್ಲಿ ಕೈಜೋಡಿಸಿದೆ. ನಿರ್ಮಾಣ ಮಾತ್ರವಲ್ಲದೆ ಕಥೆ, ಚಿತ್ರಕಥೆ ಸಂಭಾಷಣೆ ಜವಾಬ್ದಾರಿಯಲ್ಲೂ ನಮ್ಮನೆ ತಂಡ ಭಾಗಿಯಾಗಿದೆ.
ಸಿನಿಮಾ ಕಥೆಯ ಕುರಿತು ಹೆಚ್ಚಿನ ವಿವರ ಬಿಟ್ಟುಕೊಡದ ಸೌರಭ್, ಟ್ವಿಸ್ಟ್ ಒಳಗೊಂಡ ಫ್ಯಾಮಿಲಿ ಡ್ರಾಮ ಎಂದಷ್ಟೇ ಹೇಳಿ ನಿರೀಕ್ಷೆ ಹುಟ್ಟುಹಾಕಿದ್ದಾರೆ. ಈ ಹಿಂದೆ ನಟನೆಯನ್ನು ಹೊರತು ಪಡಿಸಿ ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ದಿಶಾ ರಮೇಶ್

ಅಂಜನ್ ಭಾರದ್ವಾಜ್ ಮತ್ತು ದಿಶಾ ರಮೇಶ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ನಾಯಕಿ ದಿಶಾ ರಮೇಶ್ ಹಾಸ್ಯ ನಟ ಮಂಡ್ಯ ರಮೇಶ್ ಅವರ ಪುತ್ರಿ. 

ಕ್ರೌಡ್ ಫಂಡಿಂಗ್ ನೆರವು

ಕಳೆದೊಂದು ವರ್ಷಗಳಿಂದ ಸೌರಭ್ ಈ ಚಿತ್ರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ಕ್ರೌಡ್ ಫಂಡ್ ನೆರವಿನೊಂದಿಗೆ ಮೂಡಿ ಬರುತ್ತಿರುವುದಾಗಿ ಅವರು ತಿಳಿಸಿದ್ದಾರೆ. ತಂತ್ರಜ್ನರು, ಸ್ನೇಹಿತರು, ನೆಂಟರಿಷ್ತರು ಈ ಸಿನಿಮಾಗೆ ಹಣ ಹೂಡಿದ್ದಾರೆ. 

ತಾರಾಗಣದಲ್ಲಿ ರಾಜೇಶ್ ನಟರಂಗ, ಸುಂದರ್ ವೀಣಾ, ರೋಹಿತ್ ನಾಗೇಶ್, ಬಾಲ ರ್ರಾಜ್ವಾಡಿ, ಶಬರಿ ಮಂಜು, ಶಿವಕುಮಾರ್, ಪಿ.ಡಿ ಸತೀಶ್ ಚಂದ್ರ, ಸಂತೋಷ್ ಕರ್ಕಿ, ಗಿರೀಶ್ ಜತ್ತಿ ಮತ್ತು ಅಶೋಕ್ ಬಿ.ಎ ಮುಂತಾದವರಿದ್ದಾರೆ.
ಇದನ್ನೂ ಓದಿ: ಹಾಸ್ಯನಟ ರಾಜು ತಾಳಿಕೋಟೆ ವಿರುದ್ಧ ಸೋದರ ಅಳಿಯನ ಪತ್ನಿ ಮೇಲೆ ಹಲ್ಲೆ, ಬಲವಂತವಾಗಿ ವಿಷ ಕುಡಿಸಿದ ಆರೋಪ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT