ನಟಿ ಹನ್ಸಿಕಾ ಮೋಟ್ವಾನಿ 
ಸಿನಿಮಾ ಸುದ್ದಿ

ಭಾವಿ ಪತಿಯ ಫೋಟೊವನ್ನು ರಿವೀಲ್ ಮಾಡಿದ ನಟಿ ಹನ್ಸಿಕಾ ಮೋಟ್ವಾನಿ, ಇವರೇ ನೋಡಿ ಸೋಹೆಲ್ ಖತುರಿಯಾ!

ಇದೀಗ ಹನ್ಸಿಕಾ ಅವರೇ ತಾವು ಮದುವೆಯಾಗುತ್ತಿರುವ ಹುಡುಗನನ್ನು ಪರಿಚಯಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಹಾಕಿರುವ ನಟಿ, ಉದ್ಯಮಿ ಸೋಹೆಲ್ ಖತುರಿಯಾರನ್ನು ವಿವಾಹವಾಗಲಿದ್ದಾರೆ.

ಚೆನ್ನೈ: ಬಾಲನಟಿಯಾಗಿ ವೃತ್ತಿಜೀವನವನ್ನು ಆರಂಭಿಸಿದ್ದ ನಟಿ ಹನ್ಸಿಕಾ ಮೋಟ್ವಾನಿ ತಮಿಳು ಮತ್ತು ತೆಲುಗಿನಲ್ಲಿ ಹಲವಾರು ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದಾರೆ. 31 ವರ್ಷದ ನಟಿ ಹನ್ಸಿಕಾ ಮೋಟ್ವಾನಿ ಶೀಘ್ರದಲ್ಲೇ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು.

ಇದೀಗ ಹನ್ಸಿಕಾ ಅವರೇ ತಾವು ಮದುವೆಯಾಗುತ್ತಿರುವ ಹುಡುಗನನ್ನು ಪರಿಚಯಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಹಾಕಿರುವ ನಟಿ, ಉದ್ಯಮಿ ಸೋಹೆಲ್ ಖತುರಿಯಾರನ್ನು ವಿವಾಹವಾಗಲಿದ್ದಾರೆ.

ಸೋಹೆಲ್ ಖತುರಿಯಾ ಅವರು ಜನಪ್ರಿಯ ಗಾರ್ಮೆಂಟ್ ಬ್ರ್ಯಾಂಡ್ ಅವಂತ್ ಅನ್ನು ಹೊಂದಿದ್ದಾರೆ.
ಪ್ಯಾರಿಸ್‌ನ ಐಫೆಲ್ ಟವರ್‌ನ ಮುಂದೆ ತನಗೆ ಪ್ರಪೋಸ್ ಮಾಡಲು ಮೊಣಕಾಲೂರಿ ಕುಳಿತಿರುವ ತನ್ನ ಭಾವಿ ಪತಿಯ ಫೋಟೊ ಸೇರಿದಂತೆ ಹಲವು ಫೋಟೊಗಳನ್ನು ಬುಧವಾರ ನಟಿ ಪೋಸ್ಟ್ ಮಾಡಿದ್ದಾರೆ.

ಪ್ರಸ್ತಾಪದ ಸಂದರ್ಭದಲ್ಲಿನ ಫೋಟೊದಲ್ಲಿ ಕಂಡುಬರುವ ಹಿನ್ನೆಲೆಯಲ್ಲಿ ಹೂವುಗಳನ್ನು ಬಳಸಿ ಮಾಡಿದ 'ನನ್ನನ್ನು ಮದುವೆಯಾಗು' ಎಂಬ ಪದಗಳು ಇವೆ. ಈ ಸಂದರ್ಭದ ಐದು ಚಿತ್ರಗಳನ್ನು ಪೋಸ್ಟ್ ಮಾಡಿರುವ ಹನ್ಸಿಕಾ, 'ಈಗ ಮತ್ತು ಎಂದೆಂದಿಗೂ' ಎಂದು ಬರೆದಿದ್ದಾರೆ.

ಈ ಪೋಸ್ಟ್‌ಗೆ ಕಮೆಂಟ್ ಮಾಡಿರುವ ಸೋಹೆಲ್, 'ಐ ಲವ್ ಯೂ ಮೈ ಲೈಫ್ (ಕೆಂಪು ಹೃದಯದ ಎಮೋಜಿ) #NowAndForever' ಎಂದು ಬರೆದಿದ್ದಾರೆ.

ಹನ್ಸಿಕಾ ಪೋಸ್ಟ್ ಹಾಕಿದಾಗಿನಿಂದ ಹಲವಾರು ಟಾಪ್ ಸೆಲೆಬ್ರಿಟಿಗಳು ಅವರನ್ನು ಅಭಿನಂದಿಸುತ್ತಿದ್ದಾರೆ. ನಟಿಯರಾದ ಅನುಷ್ಕಾ ಶೆಟ್ಟಿ, ಖುಷ್ಬು ಮತ್ತು ಶ್ರೀಯಾ ರೆಡ್ಡಿ ಸೇರಿದಂತೆ ಹಲವರು ನಟಿಗೆ ಶುಭಾಶಯ ಕೋರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯ ಸರ್ಕಾರದ 'ದ್ವೇಷ ಭಾಷಣ' ಮಸೂದೆಗೆ ಅಮಿತ್ ಶಾ ಅಡ್ಡಗಾಲು; ಅಸ್ತಿತ್ವದಲ್ಲಿರುವ ಕಾನೂನೇ ಸಾಕು: ಕೇಂದ್ರ

Mekedatu row: ಕರ್ನಾಟಕದ DPR ತಿರಸ್ಕರಿಸಿ; ಪ್ರಧಾನಿ ಮೋದಿಗೆ ತಮಿಳುನಾಡು ಸಿಎಂ ವಿಜಯ್ ಮನವಿ

ಬೆಂಗಳೂರು: ಕೆಲಸ ಮಾಡುತ್ತಿದ್ದ ಕಂಪನಿಗೆ ಕನ್ನ! ಚಿನ್ನದ ಗಟ್ಟಿ, ಆಭರಣಗಳನ್ನು ಕದ್ದ 9 ಕಾರ್ಮಿಕರ ಬಂಧನ

IPL 2026: ನಾವೇನು ಸಿನಿಮಾ ಸ್ಟಾರ್‌ಗಳಲ್ಲ: ವಿಮಾನ ನಿಲ್ಗಾಣದಲ್ಲಿ Riyan Parag ಗರಂ, ವೈಭವ್ ಸೂರ್ಯವಂಶಿ ಶಾಕ್! Video

Video: 'ಕಾಂತಾರ' ಕೆಂಗಣ್ಣಿಗೆ ಗುರಿ, ಬಾಲಿವುಡ್​ನಿಂದ ಬ್ಯಾನ್; ಚಾಮುಂಡೇಶ್ವರಿಗೆ ತಲೆಬಾಗಿ ಕ್ಷಮೆಯಾಚಿಸಿದ ರಣವೀರ್ ಸಿಂಗ್!

SCROLL FOR NEXT