ಕಬ್ಜ ಟೀಸರ್ 
ಸಿನಿಮಾ ಸುದ್ದಿ

'ಉಪ್ಪಿ' ಜನ್ಮದಿನಕ್ಕೆ ಕಬ್ಜ ಟೀಸರ್ ಔಟ್; ಕೇಕ್ ಕಟ್ಟಿಂಗ್ ಇಲ್ಲ, ಫೋಟೋಗೆ ಮಾತ್ರ ಅವಕಾಶ ಎಂದ ರಿಯಲ್ ಸ್ಟಾರ್!

ನಾಳೆ ಅಂದರೆ ಭಾನುವಾರ (18-09-2022)ನಟ ಉಪೇಂದ್ರ ಅವರ ಬರ್ತ್ ಡೇ. ಅವರ ಹುಟ್ಟುಹಬ್ಬದ ಒಂದು ದಿನ ಮುಂಚೆಯೇ ಅವರ ಅಭಿಮಾನಿಗಳಿಗೆ ಕಜ್ಬ ಚಿತ್ರತಂಡ ಗಿಫ್ಟ್ ನೀಡಿದೆ. 

ಬೆಂಗಳೂರು: ನಾಳೆ ಅಂದರೆ ಭಾನುವಾರ (18-09-2022)ನಟ ಉಪೇಂದ್ರ ಅವರ ಬರ್ತ್ ಡೇ. ಅವರ ಹುಟ್ಟುಹಬ್ಬದ ಒಂದು ದಿನ ಮುಂಚೆಯೇ ಅವರ ಅಭಿಮಾನಿಗಳಿಗೆ ಕಜ್ಬ ಚಿತ್ರತಂಡ ಗಿಫ್ಟ್ ನೀಡಿದೆ. 

ನಟ ಉಪೇಂದ್ರ ಮತ್ತು ಸುದೀಪ್ ನಟನೆಯ ಕಬ್ಜ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನಲ್ಲಿ ಸುದೀಪ್ ಅವರ ಲುಕ್ ಕೂಡ ರಿವೀಲ್ ಆಗಿದೆ. ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತಿದೆ. ಆರ್ ಚಂದ್ರ ನಿರ್ದೇಶನದ ಸಿನಿಮಾದಲ್ಲಿ ಶ್ರೀಯಾ ಶರಣ್ ನಟಿಸಿದ್ದಾರೆ.  ಸಿನಿಮಾ ಬಿಗ್ ಬಜೆಟ್ ನಲ್ಲಿ ನಿರ್ಮಾಣವಾಗಿದ್ದು ಟೀಸರ್ ನಲ್ಲಿ ಅದ್ಧೂರಿತನ ಕಾಣುತ್ತಿದೆ.  ಕನ್ನಡದ ಜೊತೆಗೆ ತೆಲುಗು, ಮಲಯಾಳಂ, ತಮಿಳು ಹಾಗೂ ಹಿಂದಿ ವರ್ಷನ್​ನ ಟೀಸರ್​ ರಿಲೀಸ್​ ಮಾಡಲಾಗಿದೆ.

ಕೇಕ್ ಕಟ್ಟಿಂಗ್ ಇಲ್ಲ, ಫೋಟೋಗೆ ಮಾತ್ರ ಅವಕಾಶ
ಇದೇ ವೇಳೆ ಜನ್ಮ ದಿನಾಚರಣೆ ಕುರಿತು ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ನಟ ಉಪೇಂದ್ರ ತಮ್ಮ  ಅಭಿಮಾವಿಗಳ ಬಳಿ ವಿಶೇಷ ಮನವಿ ಮಾಡಿದ್ದಾರೆ. ಕೇಕ್ ಕಟ್ಟಿಂಗ್ ಬೇಡ.. ಫೋಟೋಗೆ ಮಾತ್ರ ಅವಕಾಶವಿರುತ್ತದೆ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 'ನಾಳೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ಉಪೇಂದ್ರ ಅಭಿಮಾವಿಗಳ ಬಳಿ ವಿಶೇಷ ಮನವಿ ಮಾಡಿದ್ದಾರೆ.  ಅಭಿಮಾನಿಗಳ ದಿನದಂದು ಕೇಕ್ ಕಟಿಂಗ್, ಹಾರ, ಬೊಕ್ಕೆ ಗಿಫ್ಟ್ ಇತ್ಯಾದಿಗಳಿಗೆ ಅವಕಾಶವಿರುವುದಿಲ್ಲ. ಫೋಟೋಗೆ ಮಾತ್ರ ಅವಕಾಶವಿರುತ್ತದೆ. ದಯವಿಟ್ಟು ಸಹಕರಿಸಿ ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?