ಹೆಡ್‌ ಬುಷ್ ಸಿನಿಮಾ ಪೋಸ್ಟರ್ 
ಸಿನಿಮಾ ಸುದ್ದಿ

ಸ್ಟೈಲಿಶ್ ಗ್ಯಾಂಗ್‌ಸ್ಟರ್ ಸಿನಿಮಾದಲ್ಲಿ ಹೆಡ್ ಬುಷ್ ಖ್ಯಾತಿಯ ನಿರ್ದೇಶಕ ಶೂನ್ಯಾ- ಲೂಸ್ ಮಾದ ಯೋಗಿ ನಟನೆ

ನಟ ಯೋಗಿ ಹೆಡ್ ಬುಷ್ ನಿರ್ದೇಶಕ ಶೂನ್ಯಾ ಅವರೊಂದಿಗೆ ಗ್ಯಾಂಗ್‌ಸ್ಟರ್ ಸಿನಿಮಾದಲ್ಲಿ ನಟಿಸಲು ಸಿದ್ಧರಾಗಿದ್ದಾರೆ. ಧನಂಜಯ್ ಅಭಿನಯದ ಶೂನ್ಯಾ ಅವರ ಚೊಚ್ಚಲ ಚಿತ್ರ ಹೆಡ್‌ ಬುಷ್‌ನಲ್ಲಿ ಚಿತ್ರದ ಪ್ರಮುಖ ಅಂಶಗಳಲ್ಲಿ ಒಂದಾದ ಯೋಗಿ 'ಗಂಗ' ಪಾತ್ರವನ್ನು ನಿರ್ವಹಿಸಿದ್ದರು.

ನಟ ಯೋಗಿ ಹೆಡ್ ಬುಷ್ ನಿರ್ದೇಶಕ ಶೂನ್ಯಾ ಅವರೊಂದಿಗೆ ಗ್ಯಾಂಗ್‌ಸ್ಟರ್ ಸಿನಿಮಾದಲ್ಲಿ ನಟಿಸಲು ಸಿದ್ಧರಾಗಿದ್ದಾರೆ. ಧನಂಜಯ್ ಅಭಿನಯದ ಶೂನ್ಯಾ ಅವರ ಚೊಚ್ಚಲ ಚಿತ್ರ ಹೆಡ್‌ ಬುಷ್‌ನಲ್ಲಿ ಚಿತ್ರದ ಪ್ರಮುಖ ಅಂಶಗಳಲ್ಲಿ ಒಂದಾದ ಯೋಗಿ 'ಗಂಗ' ಪಾತ್ರವನ್ನು ನಿರ್ವಹಿಸಿದ್ದರು.

ಶೂನ್ಯಾ

ಶೂನ್ಯಾ ಪ್ರಕಾರ, ಹೆಡ್ ಬುಷ್ ಜೊತೆಯಲ್ಲೇ ಹೊಸ ಗ್ಯಾಂಗ್‌ಸ್ಟರ್ ಕಥೆಯ ವಿಚಾರವಾಗೂ ಕೆಲಸ ಮಾಡಿದ್ದಾರೆ. 'ಬೆಂಗಳೂರು ಭೂಗತ ಜಗತ್ತನ್ನು ಆಧರಿಸಿದ ಹೆಡ್ ಬುಷ್‌ಗಿಂತ ಭಿನ್ನವಾಗಿ, ಈ ಗ್ಯಾಂಗ್‌ಸ್ಟರ್ ಚಿತ್ರವು ಕಾಲ್ಪನಿಕವಾಗಿದೆ'. ತಮ್ಮ ಹೊಸ ಯೋಜನೆಯನ್ನು ಮುಂದಿನ ವಾರದಲ್ಲಿ ಅಧಿಕೃತವಾಗಿ ಪ್ರಾರಂಭಿಸಲಾಗುವುದು ಎನ್ನುತ್ತಾರೆ.

ಇನ್ನೂ ಹೆಸರಿಡದ ಈ ಯೋಜನೆಯ ಮೂಲಕ ರಾಜೇಶ್ ಅವರು ನಿರ್ಮಾಪಕರಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ನಾಯಕರನ್ನು ಆಯ್ಕೆ ಮಾಡಿರುವ ನಿರ್ದೇಶಕರು, ಉಳಿದ ತಾರಾಗಣವನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದ್ದಾರೆ. ಸಂಗೀತ ನಿರ್ದೇಶಕರನ್ನು ಅಂತಿಮಗೊಳಿಸದಿದ್ದರೂ, ಹೆಡ್ ಬುಷ್‌ನಲ್ಲಿ ಕೆಲಸ ಮಾಡಿದ್ದ ಛಾಯಾಗ್ರಾಹಕ ಸುನೋಜ್ ವೇಲಾಯುಧನ್ ಮತ್ತೊಮ್ಮೆ ನಿರ್ದೇಶಕರೊಂದಿಗೆ ಕೈಜೋಡಿಸಲಿದ್ದಾರೆ. ಇದೀಗ ಸಿದ್ಧತೆಯಲ್ಲಿ ತೊಡಗಿರುವ ಚಿತ್ರತಂಡ ಏಪ್ರಿಲ್ ಅಂತ್ಯದ ವೇಳೆಗೆ ಚಿತ್ರೀಕರಣ ಆರಂಭಿಸಲು ಯೋಜನೆ ರೂಪಿಸಿದೆ.

ಯೋಗಿ ಅವರು ಬಿಡುಗಡೆಗೆ ಸಿದ್ಧವಾಗಿರುವ ವಿನೋದ್ ಪ್ರಭಾಕರ್ ಅವರ ಲಂಕಾಸುರ ಚಿತ್ರದಲ್ಲಿಯೂ ನಟಿಸಿದ್ದಾರೆ. ಅಲ್ಲದೆ, ಅಭಿಜಿತ್ ಮಹೇಶ್ ನಿರ್ದೇಶನದ ಬ್ಯಾಚುಲರ್ ಪಾರ್ಟಿ ಸಿನಿಮಾ ಮೂಲಕ ರಕ್ಷಿತ್ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಯ ಭಾಗವಾಗಿದ್ದಾರೆ. ಈ ಚಿತ್ರ ಕೊನೆಯ ಹಂತದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದೆ. ಇನ್ನುಳಿದಂತೆ, ಪರಿಮಳ ಲಾಡ್ಜ್, ಆಡಿದ್ದೆ ಆಟ, ಕಂಸ ಮತ್ತು ಸಿದ್ದಲಿಂಗು 2 ಅವರ ಇತರ ಕೆಲವು ಸಿನಿಮಾಗಳಾಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ಮೃತರ ಸಂಖ್ಯೆ 165ಕ್ಕೆ ಏರಿಕೆ; ನಾಪತ್ತೆಯಾದವರಲ್ಲಿ 133 ಮಂದಿ ಭಾರತೀಯರು

Iran ಸರ್ವೋಚ್ಚ ನಾಯಕ Mojtaba Khamenei ಸತ್ತಿಲ್ಲ, ಗಂಭೀರವಾಗಿ ಗಾಯಗೊಂಡಿದ್ದಾರೆ: ಹಳೇ Vidoe ಬಿಡುಗಡೆ ಬೆನ್ನಲ್ಲೇ ಅಸಲಿಯತ್ತು ಬಿಚ್ಚಿಟ್ಟ Donald Trump..!

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ