ಬಹುಭಾಷ ನಟ ಸುಮುಖ 
ಸಿನಿಮಾ ಸುದ್ದಿ

ಹೊಸ ಚಿತ್ರದಲ್ಲಿ ಚಾಕೊಲೇಟ್ ಬಾಯ್ ಆಗಿ ಕಾಣಿಸಿಕೊಳ್ಳಲಿದ್ದಾರೆ 'ಫಿಜಿಕ್ಸ್ ಟೀಚರ್' ಖ್ಯಾತಿಯ ನಟ ಸುಮುಖ

ಫಿಸಿಕ್ಸ್ ಟೀಚರ್ ಚಿತ್ರದಲ್ಲಿನ ಅಭಿನಯದ ಮೂಲಕ ಬಹುಭಾಷಾ ನಟ ಸುಮುಖ ತಮ್ಮ ಮುಂದಿನ ಚಿತ್ರಕ್ಕೆ ಸಿದ್ಧವಾಗಿದ್ದಾರೆ. ಸ್ನೇಹ ಮತ್ತು ಭ್ರಾತೃತ್ವದ ಸಂದೇಶವನ್ನು ಹೊಂದಿರುವ ಈ ಚಿತ್ರದಲ್ಲಿ ಸುಮುಖ ಅವರು ಶೈನ್ ಶೆಟ್ಟಿ ಮತ್ತು ನಿಧಿ ಹೆಗ್ಡೆ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

ಫಿಸಿಕ್ಸ್ ಟೀಚರ್ ಚಿತ್ರದಲ್ಲಿನ ಅಭಿನಯದ ಮೂಲಕ ಹೆಸರು ಗಳಿಸಿದ್ದ ಬಹುಭಾಷಾ ನಟ ಸುಮುಖ ತಮ್ಮ ಮುಂದಿನ ಚಿತ್ರಕ್ಕೆ ಸಿದ್ಧವಾಗಿದ್ದಾರೆ. ಸ್ನೇಹ ಮತ್ತು ಭ್ರಾತೃತ್ವದ ಸಂದೇಶವನ್ನು ಹೊಂದಿರುವ ಈ ಚಿತ್ರದಲ್ಲಿ ಸುಮುಖ ಅವರು ಶೈನ್ ಶೆಟ್ಟಿ ಮತ್ತು ನಿಧಿ ಹೆಗ್ಡೆ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

ಚಿತ್ರದ ಮೊದಲ ಹಂತದ ಚಿತ್ರೀಕರಣ ಸಕಲೇಶಪುರದಲ್ಲಿ ಪೂರ್ಣಗೊಂಡಿದ್ದು, ಮುಂದಿನ ಭಾಗಗಳ ಚಿತ್ರೀಕರಣವನ್ನು ಚಿತ್ರತಂಡ ಶೀಘ್ರದಲ್ಲೇ ಪ್ರಾರಂಭಿಸಲಿದೆ. 

ಚಿತ್ರದ ತಮ್ಮ ಫಸ್ಟ್ ಲುಕ್ ಅನ್ನು ಹಂಚಿಕೊಂಡಿರುವ ಸುಮುಖ, 'ಫಿಜಿಕ್ಸ್ ಟೀಚರ್ ಗಂಭೀರವಾದ ಕಥಾವಸ್ತುವನ್ನು ಹೊಂದಿರುವ ಚಿತ್ರವಾಗಿದೆ ಮತ್ತು ಇದಕ್ಕೆ ವಿರುದ್ಧವಾಗಿ, ಉದಯ್ ಶೆಟ್ಟಿ ನಿರ್ದೇಶನದ ಇನ್ನೂ ಹೆಸರಿಸದ ಈ ಚಿತ್ರದಲ್ಲಿ ನಾನು ಚಾಕೊಲೇಟ್ ಬಾಯ್ ಆಗಿ ಕಾಣಿಸಿಕೊಳ್ಳುತ್ತೇನೆ' ಎಂದಿದ್ದಾರೆ.

ಇದಲ್ಲದೆ, ಸುಮುಖ ಅವರು ಕನ್ನಡ ಮತ್ತು ಮರಾಠಿಯಲ್ಲಿ ತಯಾರಾದ ರಾಜಸ್ಥಾನ್ ಡೈರೀಸ್ ಎಂಬ ದ್ವಿಭಾಷಾ ಚಲನಚಿತ್ರವನ್ನು ಹೊಂದಿದ್ದು, ಅದು ತೆರೆಗೆ ಬರಲು ಸಿದ್ಧವಾಗುತ್ತಿದೆ. ಚಿತ್ರದಲ್ಲಿ ಅವರು ಮಾನ್ವಿತಾ ಕಾಮತ್‌ಗೆ ಜೋಡಿಯಾಗಿದ್ದಾರೆ.

ರಾಜಸ್ಥಾನ್ ಡೈರೀಸ್ ಒಂದು ಪೂರ್ಣ ಪ್ರಮಾಣದ ಪ್ರೇಮಕಥೆ, ನನಗೆ ಮತ್ತೊಂದು ಹೊಸ ಪ್ರಕಾರವಾಗಿದೆ. ಸುಂದರ ಮರುಭೂಮಿಯ ನಡುವೆ ಅನಾವರಣಗೊಳ್ಳುವ ಪ್ರೇಮಕಥೆಗೆ ಅರ್ಜುನ ಜನ್ಯ ಸಂಗೀತ ಸಂಯೋಜಿಸಿದ್ದಾರೆ ಎನ್ನುತ್ತಾರೆ ನಟ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!