ಕೌಸಲ್ಯಾ ಸುಪ್ರಜಾ ರಾಮ ಚಿತ್ರದ ಸ್ಟಿಲ್. 
ಸಿನಿಮಾ ಸುದ್ದಿ

'ಕೌಸಲ್ಯಾ ಸುಪ್ರಜಾ ರಾಮ' ಯಶಸ್ವಿ ಪ್ರದರ್ಶನ; ವಿದೇಶಗಳಲ್ಲೂ ಚಿತ್ರ ಬಿಡುಗಡೆಗೆ ಸಿದ್ಧತೆ

ಜುಲೈ 28 ರಂದು ಬಿಡುಗಡೆಯಾದ ಕೌಸಲ್ಯ ಸುಪ್ರಜಾ ರಾಮ (ಕೆಎಸ್‌ಆರ್) ಚಿತ್ರ ರಾಜ್ಯಾದ್ಯಂತ 2ನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಚಿತ್ರದ ಬಗ್ಗೆ ಸಿನಿರಸಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಜುಲೈ 28 ರಂದು ಬಿಡುಗಡೆಯಾದ ಕೌಸಲ್ಯ ಸುಪ್ರಜಾ ರಾಮ (ಕೆಎಸ್‌ಆರ್) ಚಿತ್ರ ರಾಜ್ಯಾದ್ಯಂತ 2ನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಚಿತ್ರದ ಬಗ್ಗೆ ಸಿನಿರಸಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಚಿತ್ರ ಯಶಸ್ವಿ ಪ್ರದರ್ಶ ಕಾಣುತ್ತಿರು ಬೆನ್ನಲ್ಲೇ ನಿರ್ದೇಶಕ ಶಶಾಂಕ್ ಮತ್ತು ಚಿತ್ರತಂಡ ಬಹಳಷ್ಟು ಸಂತಸದಲ್ಲಿದೆ. ಇದೀಗ ಚಿತ್ರತಂಡ ವಿದೇಶದಲ್ಲಿಯೂ ಚಿತ್ರ ಬಿಡುಗಡೆ ಮಾಡಲು ಸಿದ್ಧತೆಗಳ ನಡೆಸುತ್ತಿದೆ.

ಚಿತ್ರವು ಕೇವಲ ರಾಜ್ಯದಲ್ಲಿ ಅಷ್ಟೇ ಅಲ್ಲದೆ, ಚೆನ್ನೈ, ಹೈದರಾಬಾದ್ ಮತ್ತು ಮುಂಬೈನಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಈ ನಡುವೆ ಚಿತ್ರದ ನಿರ್ದೇಶಕರು, ನಟ ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್, ಬೃಂದಾ ಆಚಾರ್ಯ ಮತ್ತು ನಾಗಭೂಷಣ್ ಸೇರಿದಂತೆ ಚಿತ್ರತಂಡದೊಂದಿಗೆ ರಾಜ್ಯ ವಿವಿಧ ಜಿಲ್ಲೆಗಳಾದ ಮಂಡ್ಯ, ಮೈಸೂರು ಮತ್ತು ತುಮಕೂರು ಸೇರಿದಂತೆ ಇತರೆ ಸ್ಥಳಗಳಿಗೆ ಭೇಟಿ, ಸಿನಿರಸಿಕರ ಪ್ರತಿಕ್ರಿಯೆ, ಅಭಿಪ್ರಾಯಗಳ ಸಂಗ್ರಹಿಸುತ್ತಿದ್ದಾರೆ.

ಇದೀಗ ಚಿತ್ರತಂಡ ಆಗಸ್ಟ್ 4 ರಂದು ಅಮೆರಿಕಾ ಹಾಗೂ ಕೆನಡಾದಲ್ಲಿಯೂ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.

ಕೌರವ ಪ್ರೊಡಕ್ಷನ್ ಹೌಸ್ ಮತ್ತು ಶಶಾಂಕ್ ಸಿನಿಮಾಸ್ ಜಂಟಿಯಾಗಿ ಕೌಸಲ್ಯ ಸುಪ್ರಜಾ ರಾಮ ನಿರ್ಮಿಸಿದ್ದು,  ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಸುಗ್ನನ್ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT