ಅಲ್ಲು ಅರ್ಜುನ್ 
ಸಿನಿಮಾ ಸುದ್ದಿ

'ಅಲಾ ವೈಕುಂಠಪುರಮುಲೊ' ಖ್ಯಾತಿಯ ನಿರ್ದೇಶಕ ತ್ರಿವಿಕ್ರಮ್ ಜೊತೆ ಅಲ್ಲು ಅರ್ಜುನ್ ನಾಲ್ಕನೇ ಸಿನಿಮಾ!

ನಟ ಅಲ್ಲು ಅರ್ಜುನ್ ಮತ್ತು ಚಲನಚಿತ್ರ ನಿರ್ದೇಶಕ ತ್ರಿವಿಕ್ರಮ್ ತಮ್ಮ ನಾಲ್ಕನೇ ಸಿನಿಮಾಗಾಗಿ ಒಟ್ಟಿಗೆ ಕೆಲಸ ಮಾಡಲು ಸಿದ್ಧರಾಗಿದ್ದಾರೆ ಎಂದು ಚಿತ್ರತಂಡ ಸೋಮವಾರ ಘೋಷಿಸಿದೆ.

ಹೈದರಾಬಾದ್: ನಟ ಅಲ್ಲು ಅರ್ಜುನ್ ಮತ್ತು ಚಲನಚಿತ್ರ ನಿರ್ದೇಶಕ ತ್ರಿವಿಕ್ರಮ್ ತಮ್ಮ ನಾಲ್ಕನೇ ಸಿನಿಮಾಗಾಗಿ ಒಟ್ಟಿಗೆ ಕೆಲಸ ಮಾಡಲು ಸಿದ್ಧರಾಗಿದ್ದಾರೆ ಎಂದು ಚಿತ್ರತಂಡ ಸೋಮವಾರ ಘೋಷಿಸಿದೆ.

ಸದ್ಯ ಹೆಸರಿಸದ ಸಿನಿಮಾವನ್ನು ಗೀತಾ ಆರ್ಟ್ಸ್ ಮತ್ತು ಹರಿಕಾ & ಹಾಸನ್ ಕ್ರಿಯೇಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ಕ್ರಮವಾಗಿ ಅಲ್ಲು ಅರವಿಂದ್ ಮತ್ತು ಎಸ್ ರಾಧಾ ಕೃಷ್ಣ ನಿರ್ಮಿಸುತ್ತಿದ್ದಾರೆ.

ಗೀತಾ ಆರ್ಟ್ಸ್ ತನ್ನ ಅಧಿಕೃತ ಟ್ವಿಟ್ಟರ್ ಪೇಜ್‌ನಲ್ಲಿ ಈ ಕುರಿತು ಪ್ರಕಟಣೆ ಹೊರಡಿಸಿದೆ.

'ದಿ ಡೈನಾಮಿಕ್ ಜೋಡಿ ಹಿಂತಿರುಗಿದೆ! ಐಕಾನ್ ಸ್ಟಾರ್ ಅಲ್ಲುಅರ್ಜುನ್ ಮತ್ತು ಬ್ಲಾಕ್‌ಬಸ್ಟರ್ ನಿರ್ದೇಶಕ ತ್ರಿವಿಕ್ರಮ್ ತಮ್ಮ 4ನೇ ಚಿತ್ರಕ್ಕಾಗಿ ಮತ್ತೆ ಒಂದಾಗುತ್ತಿದ್ದಾರೆ! ಹೆಚ್ಚಿನ ವಿವರಗಳು ಶೀಘ್ರದಲ್ಲೇ!' ಎಂದು ಬ್ಯಾನರ್ ಟ್ವೀಟ್‌ನಲ್ಲಿ ತಿಳಿಸಿದೆ.

ಅರ್ಜುನ್ ಮತ್ತು ತ್ರಿವಿಕ್ರಮ್ ಮೊದಲು 2012 ರಲ್ಲಿ 'ಜುಲಾಯಿ' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ನಂತರ, 2015 ರಲ್ಲಿ 'S/O ಸತ್ಯಮೂರ್ತಿ' ಮತ್ತು 'ಆಲ ವೈಕುಂಠಪುರಮುಲೊ' (2020) ಸಿನಿಮಾದಲ್ಲಿ ಕೆಲಸ ಮಾಡಿದರು.

ಈ ಜೋಡಿಯ ನಾಲ್ಕನೇ ಚಿತ್ರವು ದೃಶ್ಯ ಚಮತ್ಕಾರವನ್ನು ಹೊಂದಿರುತ್ತದೆ ಎಂದು ಚಿತ್ರತಂಡ ಹೇಳಿದೆ.

ಅಲ್ಲು ಅರ್ಜುನ್ ಮುಂಬರುವ 'ಪುಷ್ಪ: ದಿ ರೂಲ್'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಅವರ 2021ರ ಚಲನಚಿತ್ರ 'ಪುಷ್ಪ: ದಿ ರೈಸ್' ಸಿನಿಮಾದ ಬಹುನಿರೀಕ್ಷಿತ ಸೀಕ್ವೆಲ್ ಆಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT