ವಿಕ್ರಮ್ ರವಿಚಂದ್ರನ್ - ಅದಿತಿ ಪ್ರಭುದೇವ 
ಸಿನಿಮಾ ಸುದ್ದಿ

ಕನ್ನಡ ವೆಬ್‌ ಸರಣಿ 'ಲವ್ ಯು ಅಭಿ'ಯಲ್ಲಿ ವಿಕ್ರಮ್ ರವಿಚಂದ್ರನ್, ನಟಿ ಅದಿತಿ ಪ್ರಭುದೇವ

ಕನ್ನಡದ ಪಾಲಿಗೆ ವೆಬ್ ಸೀರೀಸ್‌ಗಳು ಇನ್ನು ಅಷ್ಟಾಗಿ ಪ್ರಚಲಿತಗೊಂಡಿಲ್ಲ. ಆದರೆ, ಇತ್ತೀಚೆಗೆ ತಾಲೆಗಳು ತಮ್ಮನ್ನು ತಾವು ವೆಬ್ ಸೀರೀಸ್‌ಗಳತ್ತ ತೆರೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಕನ್ನಡದಲ್ಲಿ ವೆಬ್ ಸೀರೀಸ್‌ಗಳು ಕಡಿಮೆ ಇದ್ದವು ಮತ್ತು ಈಗ ಪರಿಸ್ಥಿತಿ ಸುಧಾರಿಸುತ್ತಿದೆ.

ಕನ್ನಡದ ಪಾಲಿಗೆ ವೆಬ್ ಸರಣಿಗಳು ಇನ್ನು ಅಷ್ಟಾಗಿ ಪ್ರಚಲಿತಗೊಂಡಿಲ್ಲ. ಆದರೆ, ಇತ್ತೀಚೆಗೆ ತಾಲೆಗಳು ತಮ್ಮನ್ನು ತಾವು ವೆಬ್ ಸೀರೀಸ್‌ಗಳತ್ತ ತೆರೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಕನ್ನಡದಲ್ಲಿ ವೆಬ್ ಸಿರೀಸ್‌ಗಳು ಕಡಿಮೆ ಇದ್ದವು ಮತ್ತು ಈಗ ಪರಿಸ್ಥಿತಿ ಸುಧಾರಿಸುತ್ತಿದೆ.

ಮನರಂಜನಾ ಉದ್ಯಮದಲ್ಲಿ ಚಾಲನಾ ಶಕ್ತಿಯಾಗಿರುವ ಜಿಯೋ ಸಿನಿಮಾ, 'ಲವ್ ಯು ಅಭಿ' ಮೂಲಕ ಕನ್ನಡ ವೆಬ್ ಸಿರೀಸ್ ಕ್ಷೇತ್ರಕ್ಕೆ ಕಾಲಿಟ್ಟಿದೆ. ಈ ಸರಣಿಯಲ್ಲಿ ನಟ ರವಿಚಂದ್ರನ್ ಅವರ ಪುತ್ರ ವಿಕ್ರಮ್ ರವಿಚಂದ್ರನ್ ಮತ್ತು ನಟಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಮೇ 19 ರಿಂದ ಈ ಸಿರೀಸ್ ಜಿಯೋ ಸಿನಿಮಾ ಅಪ್ಲಿಕೇಷನ್‌ನಲ್ಲಿ ಪ್ರಸಾರವಾಗುತ್ತಿದೆ. ಇದು ಏಳು ಎಪಿಸೋಡ್‌ಗಳನ್ನು ಹೊಂದಿದೆ.

ಕಾಳಿ ವೇಲಾಯುಧಂ ನಿರ್ಮಿಸಿ ನಿರ್ದೇಶಿಸಿರುವ ಲವ್ ಯು ಅಭಿ ಸಸ್ಪೆನ್ಸ್ ಥ್ರಿಲ್ಲರ್ ಎಂದು ಬಿಂಬಿಸಲಾಗಿದೆ ಮತ್ತು ಶಿವನ ಪಾತ್ರದಲ್ಲಿ ವಿಕ್ರಮ್ ಮತ್ತು ಅಭಿ ಪಾತ್ರದಲ್ಲಿ ಅದಿತಿ ಕಾಣಿಸಿಕೊಂಡಿದ್ದಾರೆ.

ಈ ಸರಣಿಯು ಅನುಭವಿ ಕಲಾವಿದರಾದ ವಿನಯಾ ಪ್ರಸಾದ್, ರಚಿತಾ ಮಹಾಲಕ್ಷ್ಮಿ, ಅಶೋಕ್ ಶರ್ಮಾ, ಶ್ರೀನಾಥ್, ಅಂಬಿಕಾ ಮತ್ತು ಶ್ರೀನಿವಾಸ ಮೂರ್ತಿ ಅವರ ಜೊತೆಗೆ ಉತ್ಸಾಹಿ ಹೊಸ ನಟರನ್ನು ಸಹ ಹೊಂದಿದೆ. ಅರುಣ್ ಬ್ರಹ್ಮ ಛಾಯಾಗ್ರಹಣ, ಪ್ರದೀಪ್ ರಾಘವ್ ಸಂಕಲನ ಮತ್ತು ನಿಝಿಲ್ ದಿನಕರ್ ಸಂಗೀತ ನಿರ್ದೇಶನ ಮತ್ತು ಧ್ವನಿ ವಿನ್ಯಾಸವನ್ನು ನಿರ್ವಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಶಿವಕುಮಾರ್ ಪತ್ರ!

ಕನಸು ಕೊನೆಗೂ ನನಸು: ಲಿಂಗ ಬದಲಿಸಿಕೊಂಡಿದ್ದ Anaya Bangarಗೆ ಕ್ರಿಕೆಟ್‌ಗೆ ಮರಳಲು ಗ್ರೀನ್ ಸಿಗ್ನಲ್!