ಸಿನಿಮಾ ಸುದ್ದಿ

ನವೆಂಬರ್ 24ಕ್ಕೆ 'ಸ್ವಾತಿ ಮುತ್ತಿನ ಮಳೆ ಹನಿಯೇ' ತೆರೆಗೆ

Srinivasamurthy VN

ಬೆಂಗಳೂರು: ನಟ ರಾಜ್ ಬಿ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಚಿತ್ರ ಸ್ವಾತಿಮುತ್ತಿನ ಮಳೆ ಹನಿಯೇ ಚಿತ್ರದ ಬಿಡುಗಡೆ ದಿನಾಂಕ ಕೊನೆಗೂ ರಿವೀಲ್ ಆಗಿದ್ದು, ಇದೇ ನವೆಂಬರ್ 24ರಂದು ಚಿತ್ರ ತೆರೆಗೆ ಬರಲಿದೆ ಎಂದು ಚಿತ್ರತಂಡದ ಘೋಷಣೆ ಮಾಡಿದೆ.

ಸಿನಿಮಾ ರಿಲೀಸ್ ಬಗ್ಗೆ ಆ್ಯಪಲ್ ಬಾಕ್ಸ್ ಸೋಶಿಯಲ್ ಮೀಡಿಯಾ ತಾಣದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದ್ದು, ರಾಜ್ ಬಿ ಶೆಟ್ಟಿ ಹಾಗೂ ಸಿರಿ ರವಿಕುಮಾರ್ ಒಟ್ಟಾಗಿ ಇರುವ ಪೋಸ್ಟರ್ ಹಂಚಿಕೊಳ್ಳಲಾಗಿದ್ದು ಮಾತ್ರವಲ್ಲದೇ ಇದರಲ್ಲಿ ಬಿಡುಗಡೆ ದಿನಾಂಕ ತಿಳಿಸಲಾಗಿದೆ. 

ನಟಿ ರಮ್ಯಾ (Ramya) ಅವರು ನಟನೆಗೆ ಕಂಬ್ಯಾಕ್ ಮಾಡಿದ್ದು, ಇದರ ಜೊತೆಗೆ ಅವರು ಸಿನಿಮಾ ನಿರ್ಮಾಣದಲ್ಲೂ ತೊಡಗಿಕೊಂಡಿದ್ದಾರೆ. ಅವರ ನಿರ್ಮಾಣದ ಮೊದಲ ಚಿತ್ರ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಶೂಟಿಂಗ್ ಮುಗಿದು ಬಹಳ ಸಮಯ ಕಳೆದಿದೆ. ಈಗ ಸಿನಿಮಾದ ರಿಲೀಸ್ ದಿನಾಂಕದ ಬಗ್ಗೆ ಮಾಹಿತಿ ಸಿಕ್ಕಿದೆ. ನವೆಂಬರ್ 24ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.

ಆರಂಭದಲ್ಲಿ  ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾನ ನಿರ್ಮಾಣ ಮಾಡುವುದರ ಜೊತೆಗೆ  ಈ ಚಿತ್ರದಲ್ಲಿ ನಟಿಸುವುದಾಗಿ ರಮ್ಯಾ ಅವರು ಮೊದಲು ಹೇಳಿದ್ದರು. ಆದರೆ, ಬಳಿಕ ಮನಸ್ಸು ಬದಲಿಸಿ ನಾಯಕಿ ಸ್ಥಾನದಿಂದ ಹಿಂದೆ ಸರಿದಿದ್ದರು. ಈ ಚಿತ್ರದಲ್ಲಿ ರಾಜ್​ ಬಿ ಶೆಟ್ಟಿಗೆ ಜೊತೆಯಾಗಿ ಸಿರಿ ರವಿಕುಮಾರ್ ನಟಿಸಿದ್ದಾರೆ.

SCROLL FOR NEXT