ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

ಬಲವಂತವಾಗಿ 7 ಬಾರಿ ಗರ್ಭಪಾತ: ರಾಜಕಾರಣಿ ಸೀಮನ್ ವಿರುದ್ಧ ವಿಜಯಲಕ್ಷ್ಮಿಆರೋಪ; ಸ್ತ್ರೀರೋಗ ತಜ್ಞರಿಂದ ಪರೀಕ್ಷೆ

ನಟಿ ವಿಜಯಲಕ್ಷ್ಮೀ ನೀಡಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ನಾಮ್​ ತಮಿಳರ್​ ಕಟ್ಚಿ (ಎನ್​ಟಿಕೆ), ನಟ ಮತ್ತು ನಿರ್ದೇಶಕ ಸೀಮನ್​ ಅವರನ್ನು ಚೆನ್ನೈ ಪೊಲೀಸರು ಮಂಗಳವಾರ ವಿಚಾರಣೆ ನಡೆಸಲಿದ್ದಾರೆ.

ವಿಜಯಲಕ್ಷ್ಮಿ
Shilpa D
Updated On : 11 Sept 2023, 8:28 pm

ಚೆನ್ನೈ: ನಟಿ ವಿಜಯಲಕ್ಷ್ಮೀ ನೀಡಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ನಾಮ್​ ತಮಿಳರ್​ ಕಟ್ಚಿ (ಎನ್​ಟಿಕೆ), ನಟ ಮತ್ತು ನಿರ್ದೇಶಕ ಸೀಮನ್​ ಅವರನ್ನು ಚೆನ್ನೈ ಪೊಲೀಸರು ಮಂಗಳವಾರ ವಿಚಾರಣೆ ನಡೆಸಲಿದ್ದಾರೆ.

ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ತನಗೆ ಮೋಸ ಮಾಡಿದ್ದಾನೆ ಎಂದು ಚೆನ್ನೈ ನಗರ ಪೊಲೀಸ್ ಆಯುಕ್ತರಿಗೆ ವಿಜಯಲಕ್ಷ್ಮೀ ದೂರು ನೀಡಿದ್ದಾರೆ. ನಿನ್ನೆ ವಿಚಾರಣೆಗೆ ಹಾಜರಾಗುವಂತೆ ಸೀಮನ್ ಅವರಿಗೆ ಸೂಚಿಸಲಾಗಿದ್ದರೂ, ಕಾರಣಾಂತರಗಳಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ.

ಇದನ್ನೂ ಓದಿ: ತಾಯಿಯ ಸಾವಿನ ಬೆನ್ನಲ್ಲೇ ಕರ್ನಾಟಕ ಬಿಟ್ಟು ಹೋಗುವುದಾಗಿ ಹೇಳಿದ ನಟಿ ವಿಜಯಲಕ್ಷ್ಮಿ!

Advertisement

Advertisement

ಸೀಮಾನ್‌ ನನ್ನನ್ನು ಮದುವೆ ಆಗುವುದಾಗಿ ನಂಬಿಸಿದ್ದ, ಪ್ರೀತಿಸುತ್ತಿರುವಂತೆ ನಾಟಕ ಆಡಿ ನನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ. ಬಲವಂತವಾಗಿ 7 ಬಾರಿ ಗರ್ಭಪಾತ ಮಾಡಿಸಿದ್ಧಾನೆ ಎಂದು ವಿಜಯಲಕ್ಷ್ಮೀ ದೂರು ನೀಡಿದ್ದಾರೆ.

ವಂಚನೆ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ ನಿಷೇಧ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಸೀಮನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಿಜಯಲಕ್ಷ್ಮಿ ಕೂಡ ಇತ್ತೀಚೆಗೆ ತಿರುವಳ್ಳೂರಿನಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದರು.

ಇದನ್ನೂ ಓದಿ: ನಾನು ಬದುಕುಳಿಯುವ ಹಾಗೆ ಕಾಣುತ್ತಿಲ್ಲ, ತುಂಬಾ ನರಳುತ್ತಿದ್ದೇನೆ; ನಾನು ಸತ್ತರೆ ಕಲಾವಿದರೇ ಕಾರಣ: ನಟಿ ವಿಜಯಲಕ್ಷ್ಮಿ

ಚೆನ್ನೈ ಪೊಲೀಸರು ವಿಜಯಲಕ್ಷ್ಮೀ ನೀಡಿದ ದೂರಿನ ಆಧಾರದ ಮೇರೆಗೆ ತನಿಖೆ ಆರಂಭಿಸಿದ್ದಾರೆ. ಸೀಮನ್‌ ವಿಚಾರಣೆಗೆ ಸೂಚಿಸಿರುವುದಲ್ಲದೆ ವಿಜಯಲಕ್ಷ್ಮೀಗೆ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ. ತಮಗೆ 7 ಬಾರಿ ಗರ್ಭಪಾತವಾಗಿದೆ ಎಂದು ವಿಜಯಲಕ್ಷ್ಮೀ ಅರೋಪಿಸಿರುವುದರಿಂದ ಶನಿವಾರ 4 ಮಂದಿ ಸ್ತ್ರೀ ರೋಗ ತಜ್ಞರು ವಿಜಯಲಕ್ಷ್ಮೀ ಗರ್ಭಕೋಶಕ್ಕೆ ಅಲ್ಟ್ರಾಸೌಂಡ್ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ. ತನಿಖೆ ಮುಂದುವರಿದಿದ್ದು, ಸೀಮನ್​ ಹೇಳಿಕೆ ಪಡೆಯಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement