ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರದ 'ಹೇಳು ಗೆಳತಿ' ಹಾಡಿಗೆ ಚರಣ್ ರಾಜ್ ಹಿನ್ನೆಲೆ ಗಾಯನ

ಸ್ಯಾಂಡಲ್​​​​ವುಡ್‌ನ ಖ್ಯಾತ ನಟ-ನಿರ್ಮಾಪಕ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿರುವ ಈ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದ್ದು, ಪ್ರಚಾರ ಕಾರ್ಯ ನಡೆಯುತ್ತಿದೆ. ಸಿನಿಮಾ ಪ್ರಮೋಶನ್​ ಭಾಗವಾಗಿ 'ಹೇಳು ಗೆಳತಿ' ಎಂಬ ಹಾಡು ಅನಾವರಣಗೊಂಡಿದೆ.

ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ಸ್ಟಿಲ್
Shilpa D
Updated On : 31 Jul 2024, 1:20 pm

ಇಬ್ಬನಿ ತಬ್ಬಿದ ಇಳೆಯಲಿ' ಬಿಡುಗಡೆಗೆ ಸಜ್ಜಾಗಿರುವ ಹೊಸ ಸಿನಿಮಾ. ಸುಂದರ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿರುವ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ವಾಗಿದೆ.

ಸ್ಯಾಂಡಲ್​​​​ವುಡ್‌ನ ಖ್ಯಾತ ನಟ-ನಿರ್ಮಾಪಕ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿರುವ ಈ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದ್ದು, ಪ್ರಚಾರ ಕಾರ್ಯ ನಡೆಯುತ್ತಿದೆ. ಸಿನಿಮಾ ಪ್ರಮೋಶನ್​ ಭಾಗವಾಗಿ 'ಹೇಳು ಗೆಳತಿ' ಎಂಬ ಹಾಡು ಅನಾವರಣಗೊಂಡಿದೆ. ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶಿಸಿದ ಈ ರೊಮ್ಯಾಂಟಿಕ್ ಚಿತ್ರದಲ್ಲಿ ವಿಹಾನ್ ಮತ್ತು ಅಂಕಿತಾ ಅಮರ್ ನಟಿಸಿದ್ದಾರೆ. ಹೇಳು ಗೆಳತಿ ಹಾಡಿಗೆ ಚರಣ್ ರಾಜ್ ಸಂಗೀತ ಸಂಯೋಜನೆ ಜೊತೆಗೆ ಹಿನ್ನೆಲೆ ಧ್ವನಿ ಕೂಡ ನೀಡಿದ್ದಾರೆ.

ಕಿರಿಕ್ ಪಾರ್ಟಿ ಮತ್ತು ಶ್ರೀಮನ್ನಾರಾಯಣದಂತಹ ಹಿಟ್ ಚಿತ್ರಗಳಿಗೆ ಬರಹಗಾರರಾಗಿ ಕೊಡುಗೆ ನೀಡಿರುವ ಚಂದ್ರಜಿತ್, ಇಬ್ಬನಿ ತಬ್ಬಿದ ಇಳೆಯಲಿ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದಾರೆ, ಇದರಲ್ಲಿ ಮಯೂರಿ ನಟರಾಜ್, ಅನಿರುದ್ಧ್ ಭಟ್ ಮತ್ತು ದಾಮಿನಿ ಧನರಾಜ್ ಮುಂತಾದವರು ನಟಿಸಿದ್ದಾರೆ.

Advertisement

Advertisement

Also Read

ರಕ್ಷಿತ್ ಶೆಟ್ಟಿ ನಿರ್ಮಾಣದ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ರೊಮ್ಯಾಂಟಿಕ್ ಸಾಂಗ್ ರಿಲೀಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement