ನಟ ಮುಕುಲ್ ದೇವ್ 
ಸಿನಿಮಾ ಸುದ್ದಿ

ಸನ್ ಆಫ್ ಸರ್ದಾರ್ ಖ್ಯಾತಿಯ ಬಾಲಿವುಡ್ ನಟ Mukul Dev ನಿಧನ

ಮುಕುಲ್ ದೇವ್ ಅವರ ಸ್ನೇಹಿತೆ ನಟಿ ದೀಪ್ಶಿಕಾ ನಾಗ್ಪಾಲ್ ಸಾಮಾಜಿಕ ಮಾಧ್ಯಮದ ಮೂಲಕ ಈ ಸುದ್ದಿಯನ್ನು ದೃಢಪಡಿಸಿದ್ದಾರೆ.

ಮುಂಬೈ: ಖ್ಯಾತ ಬಾಲಿವುಡ್ ನಟ ಹಾಗೂ ನಟ ರಾಹುಲ್ ದೇವ್ ಅವರ ಸಹೋದರ ಮುಕುಲ್ ದೇವ್ ನಿಧನರಾಗಿದ್ದು ಅವರಿಗೆ 54 ವರ್ಷ ವಯಸ್ಸಾಗಿತ್ತು.

ನಟ ಮುಕುಲ್ ದೇವ್ ಶುಕ್ರವಾರ ರಾತ್ರಿ ನಿಧನರಾಗಿದ್ದು, ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮುಕುಲ್ ದೇವ್ ಅವರ ಸ್ನೇಹಿತೆ ನಟಿ ದೀಪ್ಶಿಕಾ ನಾಗ್ಪಾಲ್ ಸಾಮಾಜಿಕ ಮಾಧ್ಯಮದ ಮೂಲಕ ಈ ಸುದ್ದಿಯನ್ನು ದೃಢಪಡಿಸಿದ್ದಾರೆ.

ಅವರು ಮುಕುಲ್ ದೇವ್ ಅವರೊಂದಿಗಿನ ಹಳೆಯ ಛಾಯಾಚಿತ್ರವನ್ನು ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಹಂಚಿಕೊಂಡಿದ್ದು, "ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. RIP" ಎಂದು ಬರೆದಿದ್ದಾರೆ.

ಬಾಲಿವುಡ್, ಟಾಲಿವುಡ್, ಕಾಲಿವುಡ್, ಬೆಂಗಾಲಿ, ಮಲಯಾಳಿ ಸೇರಿದಂತೆ ಹಲವು ಭಾಷಾ ಸಿನಿಮಾಗಳಲ್ಲಿ ನಟಿಸಿದ್ದ ನಟ ಮುಕುಲ್ ದೇವ್ ಹಿಂದಿಯ ಸನ್ ಆಫ್ ಸರ್ದಾರ್ ಚಿತ್ರದ ಮೂಲಕ ಖ್ಯಾತಗಳಿಸಿದ್ದರು.

ಬಾಲಿವುಡ್ ನಲ್ಲಿ ಆರ್… ರಾಜ್‌ಕುಮಾರ್, ಜೈ ಹೋ ಸೇರಿದಂತೆ ಹತ್ತಾರು ಸಿನಿಮಾಗಳಲ್ಲಿ ನಟಿಸಿದ್ದ ಮುಕುಲ್ ದೇವ್ ಪ್ರಭಾಸ್ ಅಭಿನಯದ ಏಕ್ ನಿರಂಜನ್, ರವಿತೇಜ ನಟನೆಯ ಕೃಷ್ಣ, ನಿಪ್ಪು, ನಾಗಾರ್ಜುನ ಅಭಿನಯದ ಕೆಡಿ ಸೇರಿದಂತೆ ಕನ್ನಡದ ರಜನಿ, ನಾಗರಹಾವು, ಚಿತ್ರದಲ್ಲೂ ಮುಕುಲ್ ದೇವ್ ಅಭಿನಯಿಸಿದ್ದರು.

ದೆಹಲಿಯಲ್ಲಿ ಪಂಜಾಬಿ ಕುಟುಂಬದಲ್ಲಿ ಜನಿಸಿದ ಮುಕುಲ್ ದೇವ್ ಜಲಂಧರ್ ಬಳಿಯ ಹಳ್ಳಿಯಲ್ಲಿ ಜನಿಸಿದ್ದರು. ಅವರ ತಂದೆ ಹರಿ ದೇವ್, ಸಹಾಯಕ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel