ಕಾಂತಾರ- ಚಾಪ್ಟರ್ 1 ಸ್ಟಿಲ್ 
ಸಿನಿಮಾ ಸುದ್ದಿ

ಬಾಕ್ಸ್ ಆಫೀಸ್‌ನಲ್ಲಿ ನಿಲ್ಲದ ಕಾಂತಾರ: ಚಾಪ್ಟರ್ 1 ಓಟ; ವಿಶ್ವದಾದ್ಯಂತ 400 ಕೋಟಿ ರೂ ಗೂ ಅಧಿಕ ಗಳಿಕೆ

2022ರ ಬ್ಲಾಕ್‌ಬಸ್ಟರ್ ಚಿತ್ರ 'ಕಾಂತಾರ'ದ ಪ್ರೀಕ್ವೆಲ್ ಆಗಿರುವ ಈ ಚಿತ್ರಕ್ಕೆ ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ ಮತ್ತು ಅಜನೀಶ್ ಲೋಕನಾಥ್ ಅವರ ಶಕ್ತಿಯುತ ಸಂಗೀತವಿದೆ.

ರಿಷಭ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಕಾಂತಾರ: ಚಾಪ್ಟರ್ 1' ಬಾಕ್ಸ್ ಆಫೀಸ್‌ನಲ್ಲಿ ದಿನೇ ದಿನೇ ದಾಖಲೆಗಳನ್ನು ಮುರಿಯುತ್ತಾ ಸಾಗುತ್ತಿದೆ. ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ ಈ ಬಹುಭಾಷಾ ಚಿತ್ರವು ಅಕ್ಟೋಬರ್ 2ರಂದು ಬಿಡುಗಡೆಯಾಯಿತು. ಅಂದಿನಿಂದ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಬಿಡುಗಡೆಯಾದ ಮೊದಲ ವಾರದಲ್ಲೇ ಚಿತ್ರವು ಭರ್ಜರಿ ಕಲೆಕ್ಷನ್ ಮಾಡಿದ್ದು, ಮಂಗಳವಾರ ಭಾರತದಾದ್ಯಂತ ₹33.5 ಕೋಟಿಗೂ ಹೆಚ್ಚು ಗಳಿಸಿದೆ. ದೇಶೀಯವಾಗಿ ಒಟ್ಟು ₹300 ಕೋಟಿಯನ್ನು ಮೀರಿದೆ. ಹಿಂದಿ ಆವೃತ್ತಿಯೊಂದರಲ್ಲೇ ಬಿಡುಗಡೆಯಾದ ಆರನೇ ದಿನ ₹10.5–11.5 ಕೋಟಿ ಗಳಿಸಿದೆ. ಇದು ಶೇ 20 ರಷ್ಟು ಜಿಗಿತ ಕಂಡಿದೆ ಮತ್ತು ಆರು ದಿನಗಳ ಒಟ್ಟು ಗಳಿಕೆ ₹93 ಕೋಟಿಗಿಂತ ಹೆಚ್ಚಾಗಿದೆ. ಶೀಘ್ರದಲ್ಲೇ ಹಿಂದಿಯಲ್ಲಿ ₹100 ಕೋಟಿ ಗಡಿ ದಾಟುವ ನಿರೀಕ್ಷೆಯಿದೆ. 2025ರ ಈ ಮೈಲಿಗಲ್ಲು ಸಾಧಿಸಿದ ಮೊದಲ ದಕ್ಷಿಣ ಭಾರತೀಯ ಚಿತ್ರ ಇದಾಗಿದೆ.

ಎಲ್ಲ ಆವೃತ್ತಿಗಳಲ್ಲಿ, ಕಾಂತಾರ: ಚಾಪ್ಟರ್ 1 ಕೇವಲ ಆರು ದಿನಗಳಲ್ಲಿ ವಿಶ್ವದಾದ್ಯಂತ ₹400 ಕೋಟಿ ಗಳಿಸಿ ಅಚ್ಚರಿ ಮೂಡಿಸಿದೆ. ಈ ಮೈಲಿಗಲ್ಲನ್ನು ತಲುಪಿದ ವರ್ಷದ ಮೊದಲ ಕನ್ನಡ ಚಿತ್ರವಾಗಿದೆ. ಇದು ಈಗ 2025ರಲ್ಲಿ ಜಾಗತಿಕ ಬಾಕ್ಸ್ ಆಫೀಸ್ ಅನ್ನು ಆಳಿರುವ ಆಯ್ದ ಕೆಲವು ಭಾರತೀಯ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿದೆ. ಈ ಸಾಲಿನಲ್ಲಿ ಛಾವಾ, ಕೂಲಿ ಮತ್ತು ಸೈಯಾರಾ ಚಿತ್ರಗಳಿವೆ.

2022ರ ಬ್ಲಾಕ್‌ಬಸ್ಟರ್ ಚಿತ್ರ 'ಕಾಂತಾರ'ದ ಪ್ರೀಕ್ವೆಲ್ ಆಗಿರುವ ಈ ಚಿತ್ರಕ್ಕೆ ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ ಮತ್ತು ಅಜನೀಶ್ ಲೋಕನಾಥ್ ಅವರ ಶಕ್ತಿಯುತ ಸಂಗೀತವಿದೆ. ಕಾಂತಾರ: ಚಾಪ್ಟರ್ 1 ಕೇವಲ ದಾಖಲೆಗಳನ್ನು ಮುರಿಯುವುದಷ್ಟೇ ಅಲ್ಲದೆ, ಸಿನಿಮೀಯ ಭಕ್ತಿಯನ್ನು ಪುನಃ ಬರೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ, 1 ವರ್ಷ ಶಾಂತಿ ಕಾಪಾಡುವಂತೆ ಷರತ್ತು..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ