ಸಿನಿಮಾ ಸುದ್ದಿ

ಬಿಗ್ ಬಾಸ್ ಕನ್ನಡ ಸೀಸನ್ 12: ಕಾಗೆ-ನರಿ ಕಥೆ ಹೇಳಿದ ಕಿಚ್ಚ ಸುದೀಪ್, ಆದರೆ ಅದರಲ್ಲೊಂದು ಟ್ವಿಸ್ಟ್....

ಇದೀಗ ಮತ್ತೊಂದು ಪ್ರೋಮೋ ಬಿಡುಗಡೆ ಆಗಿದ್ದು, ಪ್ರೋಮೋನಲ್ಲಿ ಬಿಗ್​​ಬಾಸ್ ಎಪಿಸೋಡ್ ಪ್ರಸಾರವಾಗುವ ಸಮಯ ಘೋಷಣೆ ಮಾಡಲಾಗಿದೆ. ಪ್ರೋಮೋನಲ್ಲಿ ಸುದೀಪ್ ಆಸಕ್ತಿಕರ ಕಾಗೆ-ನರಿಯ ಕಥೆಯೊಂದನ್ನು ಹೇಳಿದ್ದಾರೆ.

ಕನ್ನಡದಲ್ಲಿ ಅತಿದೊಡ್ಡ ರಿಯಾಲಿಟಿ ಶೋ ಬಿಗ್​​ಬಾಸ್ ಸೀಸನ್ 12 ಸೆಪ್ಟೆಂಬರ್ 28ರಂದು ಸಂಜೆ 6.30ಕ್ಕೆ ಆರಂಭವಾಗಲಿದೆ. ಸ್ಪರ್ಧಿಗಳ ಆಯ್ಕೆ ಈಗಾಗಲೇ ಅಂತಿಮಗೊಂಡಿದೆ. ಬಿಗ್​​ಬಾಸ್ 12ಕ್ಕೆ ಸಂಬಂಧಿಸಿದಂತೆ ಪ್ರೋಮೊ ಒಂದು ಈಗಾಗಲೇ ಬಿಡುಗಡೆ ಆಗಿದ್ದು ಕಲರ್ಸ್ ಕನ್ನಡ ಪೇಜ್ ನಲ್ಲಿ ಈಗಾಗಲೇ ಬಿಡುಗಡೆಯಾಗಿದೆ.

ಇದೀಗ ಮತ್ತೊಂದು ಪ್ರೋಮೋ ಬಿಡುಗಡೆ ಆಗಿದ್ದು, ಪ್ರೋಮೋನಲ್ಲಿ ಬಿಗ್​​ಬಾಸ್ ಎಪಿಸೋಡ್ ಪ್ರಸಾರವಾಗುವ ಸಮಯ ಘೋಷಣೆ ಮಾಡಲಾಗಿದೆ. ಪ್ರೋಮೋನಲ್ಲಿ ಸುದೀಪ್ ಆಸಕ್ತಿಕರ ಕಾಗೆ-ನರಿಯ ಕಥೆಯೊಂದನ್ನು ಹೇಳಿದ್ದಾರೆ.

ನಮಗೆಲ್ಲಾ ಗೊತ್ತಿರುವ ಕಾಗೆ-ನರಿ ಕಥೆಯಂತೆ ವಡೆ ನರಿ ಪಾಲಾಗುತ್ತದೆ. ಕಾಗೆ ಅಜ್ಜಿಯಿಂದ ವಡೆಯೊಂದನ್ನು ಪಡೆದು, ಅದನ್ನು ಬಾಯಲ್ಲಿ ಕಚ್ಚಿಕೊಂಡು ಇನ್ನೇನು ತಿನ್ನಬೇಕು ಎಂದಿದ್ದಾಗ ನರಿ ಬಂದು, ಕಾಗೆ, ನೀನು ಚೆನ್ನಾಗಿ ಹಾಡುತ್ತೀಯ, ನನಗಾಗಿ ಹಾಡು ಹಾಡು ಎನ್ನುತ್ತದೆ. ಕಾಗೆ ವಡೆ ಕಚ್ಚಿದ ಬಾಯಿ ತೆರೆದು ಹಾಡಲು ಶುರು ಮಾಡಿದ ಕೂಡಲೇ ವಡೆ ಬಾಯಿಂದ ಜಾರಿ ಬಿದ್ದು ನರಿಯ ಬಾಯಿ ಸೇರುತ್ತದೆ.

ಆದರೆ ಈ ಕತೆಯ ಕ್ಲೈಮ್ಯಾಕ್ಸ್ ನ್ನು ಬದಲಿಸಿ ಹೇಳಿದರು. ಸುದೀಪ್, ನರಿ, ಕಾಗೆಗೆ ಹಾಡು ಎಂದಾಗ, ಆ ಕಾಗೆ ಬಾಯಲ್ಲಿ ಕಚ್ಚಿಕೊಂಡಿದ್ದ ವಡೆಯನ್ನು ಕೆಳಗೆ ಇಟ್ಟು ಅದನ್ನು ಕಾಲಲ್ಲಿ ಹಿಡಿದುಕೊಂಡು ಹಾಡು ಹಾಡುತ್ತದೆಯಂತೆ. ತನ್ನ ಯೋಜನೆ ತಲೆಕೆಳಗಾಗಿದ್ದು ನೋಡಿ ನರಿ ಹೊರಟು ಹೋಗುತ್ತದೆಯಂತೆ. ಹೀಗೆಂದು ಸುದೀಪ್ ಅವರು ಕಾಗೆ-ನರಿಯ ಕತೆಯನ್ನು ಬದಲಾಯಿಸಿ ಹೇಳಿದ್ದಾರೆ.

ಆದರೆ ಹೀಗೆ ಕತೆ ಬದಲಾಯಿಸಲು ಕಾರಣವಿದೆ. ಸುದೀಪ್ ಹೇಳಿರುವಂತೆ, ಈವರೆಗೆ ನಡೆಯದ ರೀತಿಯಲ್ಲಿ ಈ ಬಾರಿ ನಡೆಯಲಿದೆಯಂತೆ. ನಮಗೆ ಗೊತ್ತು ಎಂದುಕೊಂಡಿರುವವರು ಶಾಕ್ ಆಗುವಂತಿರುತ್ತದೆಯಂತೆ ಬಿಗ್​​ಬಾಸ್ ಸೀಸನ್ 12.

ಬಿಗ್​​ಬಾಸ್ ಸೀಸನ್ 12 ಪ್ರಸಾರ ಸೆಪ್ಟೆಂಬರ್ 28, ಸಂಜೆ 6:30ಕ್ಕೆ ಆಗಿ ಪ್ರತಿ ದಿನದ ಎಪಿಸೋಡ್​​ಗಳ ಪ್ರಸಾರ ರಾತ್ರಿ 9:30 ರಿಂದ 10:30ರ ವರೆಗೆ ನಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಆಪರೇಷನ್ ಸಿಂದೂರ್ ಸಮಯದಲ್ಲಿ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಬಂಕರ್ ನಲ್ಲಿ ಅಡಗಿ ಕುಳಿತಿದ್ದರು': ನಿವೃತ್ತ ಲೆ.ಜ. ಕೆಜೆಎಸ್ ಧಿಲ್ಲೋನ್

ಸಾಲಬಾಧೆಯಿಂದ ನೊಂದ ಕುಟುಂಬ ಆತ್ಮಹತ್ಯೆ ಯತ್ನ: ಗಂಡ- ಮಕ್ಕಳ ಕತ್ತು ಹಿಸುಕಿ ಕೊಂದ ತಾಯಿ; ಮೂವರ ಸಾವು

ವಿಪಕ್ಷಗಳ ಒತ್ತಡದ ನಂತರ ಮೋದಿ ಮಣಿಪುರ ಭೇಟಿ : ಹಿಂದೂ ಸಮಾಜದಲ್ಲಿ ಸಮಾನತೆ ಇದ್ದಿದ್ದರೆ ಜನ ಯಾಕೆ ಮತಾಂತರ ಆಗ್ತಿದ್ರು?

ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಮನೆಯಲ್ಲಿ ಕಳ್ಳತನ: ಕೇಸ್ ದಾಖಲು

ಬೆಂಗಳೂರು: ಹಣ ನೀಡದಿದ್ದಕ್ಕೆ ಡೆಲಿವರಿ ಬಾಯ್ ಅಪಹರಿಸಿ ಕೊಲೆ

SCROLL FOR NEXT