ವಿಜಯಲಕ್ಷ್ಮಿ ದರ್ಶನ್ - ದರ್ಶನ್ ತೂಗುದೀಪ 
ಸಿನಿಮಾ ಸುದ್ದಿ

'ನಿಮಗೆ ದ್ರೋಹ ಬಗೆಯುವುದು ನಿಮ್ಮ ಶತ್ರುಗಳಲ್ಲ, ಬದಲಾಗಿ ಒಂದೇ ತಟ್ಟೆಯಲ್ಲಿ ಉಂಡವರು': ವಿಜಯಲಕ್ಷ್ಮಿ ದರ್ಶನ್

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಭಾಗವಾಗಿ ಪುನೀತ್ ಕ್ರಾಸ್ ಎಕ್ಸಾಮಿನೇಷನ್ ನಡೆಯುವಾಗ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಆರೋಪಿಗಳಾದ ದರ್ಶನ್ ಹಾಗೂ ಪವಿತ್ರಾಗೌಡ ಪರಸ್ಪರ ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ ಎನ್ನಲಾಗಿದೆ.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ ಮತ್ತು ಅವರ ಗೆಳತಿ ಪವಿತ್ರಾ ಗೌಡ ಗುರುವಾರ ವಿಡಿಯೋ ಕಾನ್ಫರೆನ್ಸ್‌ ವಿಚಾರಣೆ ವೇಳೆ ನಡೆಸಿದ ಮಾತುಕತೆ ವಿಚಾರ ಇದೀಗ ಸಾಕಷ್ಟು ಸುದ್ದಿ ಮಾಡಿದ್ದು, ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಪರೋಕ್ಷವಾಗಿ ಕಿಡಿಕಾರಿದ್ದಾರೆ ಎನ್ನಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಭಾಗವಾಗಿ ಪುನೀತ್ ಕ್ರಾಸ್ ಎಕ್ಸಾಮಿನೇಷನ್ ನಡೆಯುವಾಗ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಆರೋಪಿಗಳಾದ ದರ್ಶನ್ ಹಾಗೂ ಪವಿತ್ರಾಗೌಡ ಪರಸ್ಪರ ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ ಎನ್ನಲಾಗಿದೆ.

'ಊಟ ಆಯ್ತಾ…? ಬೆನ್ನು ನೋವು ಹೇಗಿದೆ? ಫಿಸಿಯೋಥೆರಪಿ ಆಯ್ತಾ…? ಇನ್ನೂ ಎಷ್ಟು ದಿನ ಮಾಡಿಸಬೇಕು…?' ಎಂದು ಪವಿತ್ರಾಗೌಡ, ದರ್ಶನ್‌ ಯೋಗಕ್ಷೇಮ ವಿಚಾರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ದರ್ಶನ್‌, ʻಬೆನ್ನು ಪೂರ್ತಿ ಮುರಿದು ಹೋದಂತಾಗಿದೆ, ನೋವಾಗ್ತಿದೆ. ಫಿಸಿಯೋಥೆರಪಿ ಮಾಡ್ತಾ ಇದ್ದಾರೆ. ಒಂದು ಸೆಷನ್‌ ಆಗಿದೆ ಅಷ್ಟೇ, ಇನ್ನೂ ಮಾಡಿಸಬೇಕು ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಸ್ವಲ್ಪ ಹೊತ್ತಿಗೆ ವಿಡಿಯೋ ಕಾನ್ಫರೆನ್ಸ್​ನ ವಿಡಿಯೋ ಆಫ್ ಆಗಿದೆ. ಆ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ಪರಸ್ಪರ ಮಾತನಾಡಿದ್ದರು. ಅವರ ಮಾತುಗಳು ಕಾಲ್​ನಲ್ಲಿದ್ದ ಇತರರಿಗೆ ಗೊತ್ತಾಗಿದೆ.

ಈ ಎಲ್ಲ ಬೆಳವಣಿಗೆ ಮಧ್ಯೆ ವಿಜಯಲಕ್ಷ್ಮಿ ತಮ್ಮ ಇನ್​ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. 'ನಿಮಗೆ ದ್ರೋಹ ಬಗೆಯುವುದು ನಿಮ್ಮ ಶತ್ರುಗಳಲ್ಲ, ಬದಲಾಗಿ ನಿಮ್ಮ ಜೊತೆಯಲ್ಲಿ ಒಂದೇ ತಟ್ಟೆಯಲ್ಲಿ ಉಂಡವರು' ಎಂದು ಬರೆದಿರುವ ರೀಲ್ಸ್ ಅನ್ನು ಹಂಚಿಕೊಂಡಿದ್ದಾರೆ.

ವಿಬೋಧ್ & ವಿನೀಶ್ ದರ್ಶನ್ ಎನ್ನುವ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ ವಿಡಿಯೋವನ್ನು ವಿಜಯಲಕ್ಷ್ಮಿ ಅವರು ತಮ್ಮ ಇನ್​ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್ vs ಕಾಂಗ್ರೆಸ್: ಪ್ರಧಾನಿ ಮೋದಿ ಮುಂದೆ ಮೇಕೆದಾಟು ಪ್ರಸ್ತಾಪಿಸಿದ CM ಡಿಕೆಶಿ; ಖಂಡಿಸಿದ ಮಾಣಿಕ್ಯಂ ಟ್ಯಾಗೋರ್!

ರಾಜಕೀಯ ಬದ್ಧವೈರಿ ನಿತೀಶ್ ಕುಮಾರ್ ಮನೆಯಲ್ಲಿ 'ಖೀರ್' ಸವಿಯಲು ಲಾಲು ಪುತ್ರಿ ರೋಹಿಣಿ ನಿರ್ಧಾರ!

'ಅತ್ಯಂತ ಅಮಾನವೀಯ, 70 ವರ್ಷ ಬದುಕಬೇಕಿದ್ದ ಆನೆ 30ನೇ ವಯಸ್ಸಿಗೇ ಸಾವು'; ದೇಗುಲದ ಆನೆಗಳ ಸಂಕಷ್ಟದ ಬಗ್ಗೆ ನಟಿ ರಮ್ಯಾ ಕಿಡಿ, Video

'ನಮಗೆ ಪಾಠ ಮಾಡುವ ಮೊದಲು ನಿಮ್ಮ ಪೂರ್ವಗ್ರಹ ಸರಿಪಡಿಸಿಕೊಳ್ಳಿ, ಆಂತರಿಕ ವಿಚಾರದಲ್ಲಿ ಮೂಗು ತೂರಿಸಬೇಡಿ': ಅಮೆರಿಕಕ್ಕೆ ಭಾರತ ಖಡಕ್ ತಿರುಗೇಟು!

ಗೋಧ್ರಾ ಹತ್ಯಾಕಾಂಡ ತನಿಖೆ ಬಗ್ಗೆ ಸೋನಿಯಾ ಸಂದೇಹ: ಸಿಬಿಐ ಮಾಜಿ ಅಧಿಕಾರಿ ಹೇಳಿದ್ದೇನು? Video