ಅಂಕಣಗಳು

Hmmm... ಪಾಂಚ್, ಗಾಂಧಿ ಬಜಾರಿನಲ್ಲಿ ಸಿಕ್ಕ ಹುಡುಗಿ

ಗಾಂಧಿ ಬಜಾರಿನಲ್ಲಿ ಸಿಕ್ಕ ಹುಡುಗಿ
-ಈಗಿನ್ ಕಾಲದಲ್ಲೂ ನಿಮ್ಮಂಥ ಹುಡುಗೀರ್ ಇದಾರಲ್ರೀ, ಪಾಪ ಎಷ್ಟ್ ಡೀಸೆಂಟಾಗಿ ತಲೆ ಬಗ್ಗಿಸಿಕೊಂಡು ಹೋಗ್ತಿದೀರಲ್ಲ?
ಅಯ್ಯೋ, ಡೀಸೆಂಟಾಗ್ ಇರೋದೆಲ್ಲ ಏನಿಲ್ಲ, ತಲೆ ಬಗ್ಗಿಸಿಕೊಂಡು ಮೊಬೈಲ್ ನೋಡ್ತಾ ಇದ್ದೆ. ಬಾಯ್‌ಫ್ರೆಂಡ್ ಕಳಿಸಿರೋ ಎಸ್‌ಎಮ್‌ಎಸ್‌ಗೆ ರಿಪ್ಲೈ ಮಾಡ್ತಾ ಇದ್ದೆ.

-ಅಯ್ಯೋ ಹೌದಾ, ಅದ್ಸರಿ, ನೀವು ಹುಡುಗೀರು ಹೇರ್‌ಸ್ಟೈಲ್ ಸರಿ ಇದ್ರೂ ಸುಮ್‌ಸುಮ್‌ನೇ ಆಗಾಗ ಸರಿ ಮಾಡ್ಕೊಳೋದ್ಯಾಕೆ?
ಇಲ್ಲಾಂದ್ರೆ, ಹುಡುಗರ ಅಟೆನ್ಶನ್ ಸಿಗೋದು ಹೇಗೆ. ನಾವು ನಮ್ಮ ಕೈಯಲ್ಲಿ ಕೂದಲು ಸರಿ ಮಾಡಿಕೊಂಡರೆ ಅವರ ಕೈಯಲ್ಲಿ ನಮ್ಮ ಕೂದಲಿನ ಬಗ್ಗೆಯೇ ಒಂದು ಕವನ ಬರೆಯೋವಷ್ಟು ಡಿಸ್ಟರ್ಬ್ ಆಗ್ಲಿ ಅಂತ.

-ಓಹೋಹೋ, ಕೂದಲ್ ಕವಿತೈ. ಸರಿ, ಸರಿ, ಆದ್ರೆ, ಇಷ್ಟು ಚೆನ್ನಾಗಿರೋ ನಿಮಗೆ ಬೈಕ್‌ನಲ್ ಕರ್‌ಕೊಂಡ್ ಹೋಗೋ ಬಾಯ್ ಫ್ರೆಂಡ್ ಇಲ್ವಾ? ಬಸ್‌ಸ್ಟ್ಯಾಂಡಲ್ಲಿ ನಿಂತಿದೀರಲ್ಲ?
ಹಲೋ...ಗೀವ್ ಮಿ ಎ ಬ್ರೇಕ್, ನನ್ ಬಾಯ್‌ಫ್ರೆಂಡ್ ಬೈಕ್ ತಗೊಂಡ್ ಬರ್ತಾನೆ. ಲ್ಯಾಂಡ್‌ಮಾರ್ಕ್ ಹೇಳೋಕೆ ಸುಲಭ ಅಂತ ಬಸ್‌ಸ್ಟ್ಯಾಂಡ್‌ನಲ್ಲಿ ನಿಂತಿದೀನಿ.

-ಓ ಹಂಗೆ, ಸರಿ, ನಿಮಗಿನ್ನೊಂದ್ ಪ್ರಶ್ನೆ. ಎರಡೂ ಮಹಾತ್ಮ ಗಾಂಧಿ ಹೆಸರಿನ ಜಾಗಗಳೇ ಆದ್ರೂ ಈ ಗಾಂಧಿ ಬಜಾರಿನ ಹುಡುಗೀರಿಗೂ ಎಂ.ಜಿ ರೋಡಿನ ಹುಡುಗೀರಿಗೂ ಯಾಕೆ ಇಷ್ಟೊಂದ್ ವ್ಯತ್ಯಾಸ ಇರುತ್ತೆ?
ಮದುವೆ ಮಾಡಿದಾಗ್ಲೂ ಊಟ ಹಾಕ್ತಾರೆ, ತಿಥಿ ಮಾಡಿದಾಗ್ಲೂ ಊಟ ಹಾಕ್ತಾರೆ. ಅಲ್ವಾ. ಇದೂ ಹಂಗೆ. ಅಷ್ಟಕ್ಕೂ ಮದ್ವೆ ಅಂದ್ರೆ ತಿಥಿನೇ ಅಲ್ವಾ. ಸರಿ ನನ್ ಬಾಯ್ ಫ್ರೆಂಡ್ ಬಂದ, ನಾನ್ ಹೊರಡ್ತೀನಿ

-ಓ ಇವನಾ ನಿಮ್ ಬಾಯ್‌ಫ್ರೆಂಡ್, ಬಟ್ ಹೋದವಾರ ನಿಮ್ಮನ್ನ ಯಾರೋ ಬೇರೆ ಹುಡುಗನ್ ಜೊತೆ ನೋಡ್ದಂಗಿತ್ತಲ್ಲ, ಇವನು ಹೊಸ ಬಾಯ್‌ಫ್ರೆಂಡ್ ಅನ್ಸತ್ತೆ, ಹೊಸ ಅಫೇರಾ?
ಹಳೇದು ಹೊಸದು ಅಂತೇನಿಲ್ಲ. ಈಗ್ಲೂ ಎಂಜಿ ರೋಡ್‌ನಲ್ಲಿ ಆ ಬಾಯ್‌ಫ್ರೆಂಡ್ ನೋಡೋಕೇ ಹೋಗ್ತಾ ಇದೀನಿ. ಅಲ್ಲಿವರೆಗೂ ಇವನು ಡ್ರಾಪ್ ಮಾಡ್ತಾನೆ. ಅಷ್ಟೆ. ಬೈ..ಬೈ..
(ಕಾಲ್ಪನಿಕ ಸಂದರ್ಶನ)

ಒಮ್ಮೆ ಭೇಟಿ ಕೊಡಿ
ಇತ್ತೀಚಿನ ಹುಡುಗಿಯರಿಗೆ ಕಾಲೇ ನೆಲದ ಮೇಲೆ ನಿಲ್ಲಲ್ಲ ಎಂದರೆ ಅವರು ಹೈ ಹೀಲ್ಡ್ ಚಪ್ಪಲಿ ಧರಿಸುವುದೇ ಅದಕ್ಕೆ ಕಾರಣ ಎನ್ನಲಾಗದಿದ್ದರೂ, ನಡತೆ ಜೊತೆ ನಡಿಗೆಯೂ ಮುಖ್ಯ ಎನ್ನುವ ಹೈ ಹೀಲ್ಡ್ಸ್ ಚಪ್ಪಲಿಗಳ ಬಗೆಗಿನ ವಿಷಯ ಇದು. ಹೈ ಹೀಲ್ಡ್ಸ್ ಚಪ್ಪಲಿಗಳನ್ನು ಧರಿಸಿದಾಗ ಹೇಗೆ ನಡೆದರೆ ಆರೋಗ್ಯಕರ ಎನ್ನುವುದರ ಬಗ್ಗೆ ಇಲ್ಲಿ ಕೆಲವು ಟಿಪ್ಸ್‌ಗಳಿವೆ.
-bit.ly/XLKp7 n bit.ly/12SIdKn n huff.to/T30bny n bit.ly/9Vwc n bit.ly/1e263rY

ಹರಿ-ಕಥೆ
ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಹುಡುಗನೊಬ್ಬನಿಗೆ ಬೀದಿನಾಯಿಯೊಂದು ಪುಟ್ಟ ಹುಡುಗಿಯ ಮೇಲೆ ಅಟ್ಯಾಕ್ ಮಾಡುತ್ತಿದ್ದ ದೃಶ್ಯ ಕಂಡು ಬಂತು. ಅಲ್ಲಿ ಸುತ್ತಲೂ ಇದ್ದವರಿಗೆಲ್ಲ ಹತ್ತಿರ ಹೋಗಲು ಭಯ. ಏಕೆಂದರೆ ಅದು ಹುಚ್ಚು ನಾಯಿ. ಹುಡುಗಿಯ ಬಟ್ಟೆಯನ್ನು ಬಾಯಲ್ಲಿ ಕಚ್ಚಿಕೊಂಡ ನಾಯಿ, ಅವಳ ಕಾಲಿಗೆ ಬಾಯಿ ಹಾಕಲು ಹವಣಿಸುತ್ತಿತ್ತು. ಈ ಹುಡುಗನಿಗೂ ಹತ್ತಿರ ಹೋಗಲು ಭಯ. ಒಂದೆರಡು ಕ್ಷಣ ಆ ಕಡೆ ಈ ಕಡೆ ನೋಡಿದವನಿಗೆ ಬೈಕ್ ಮೇಲೆ ಕೂತು ಇದನ್ನೆಲ್ಲ ನೋಡುತ್ತಿದ್ದವನೊಬ್ಬ ಕಾಣಿಸಿದ. ಈ ಹುಡುಗ ತಡಮಾಡದೆ ಅವನ ಬಳಿ ಬೈಕ್ ತೆಗೆದುಕೊಂಡು ಹತ್ತಿ ಚಲಾಯಿಸುತ್ತಾ ನಾಯಿಯ ಕಡೆ ನುಗ್ಗಿಸಿದ. ಕನ್‌ಫ್ಯೂಸ್ ಆದ ನಾಯಿ, ಇವನತ್ತ ತಿರುಗಿ ನೋಡುವಷ್ಟರಲ್ಲಿ ಬೈಕು ನಾಯಿಗೆ ಗುದ್ದಿತು. ಅಚಾನಕ್ಕಾಗಿ ಕೆಳಗೆ ಬಿದ್ದ ನಾಯಿಯ ಮೇಲೆ ಬೈಕ್ ಹರಿದು ನಾಯಿ ಸತ್ತು ಹೋಯಿತು. ಅಲ್ಲಿದ್ದವರೆಲ್ಲಾ ಓಡಿ ಬಂದು ಪುಟ್ಟ ಬಾಲಕಿಯ ಜೀವ ಉಳಿಸಿದ ಹುಡುಗನನ್ನು ಕೊಂಡಾಡಿದರು. ಅಷ್ಟರಲ್ಲಿ ಅಲ್ಲಿಗೆ ಒಬ್ಬ ಟಿವಿ ರಿಪೋರ್ಟರ್ ಆಗಮನವಾಯಿತು. ಎಲ್ಲ ವಿಷಯ ತಿಳಿದುಕೊಂಡ ರಿಪೋರ್ಟರ್ ಈ ಹುಡುಗನ ಹರಿದು ಹೋಗಿದ್ದ ತ್ರೀ ಫೋರ್ತ್ ಪ್ಯಾಂಟ್ ನೋಡಿ, ಇವನ ಬಳಿ ಬಂದು 'ಭೇಷ್, ಒಳ್ಳೆಯ ಕೆಲಸ ಮಾಡಿದ್ದೀಯ, ಸ್ಲಂ ಹುಡುಗನಿಂದ ಬಾಲಕಿಯ ಜೀವರಕ್ಷಣೆ ಅಂತ ಈವಾಗ್ಲೇ ಸುದ್ದಿ ಮಾಡ್ತೀನಿ' ಅಂದ. ಅದಕ್ಕೆ ಹುಡುಗ, 'ಆದ್ರೆ ನಾನು ಸ್ಲಂ ಹುಡುಗ ಅಲ್ಲ' ಎಂದ. ಆಗ ರಿಪೋರ್ಟರ್ ಇವನ ಹಳೆಯ ಕಾಲೇಜ್ ಬ್ಯಾಗ್ ನೋಡಿ, 'ಸರಿ, ಹಾಗಿದ್ರೆ ಗವರ್ನಮೆಂಟ್ ಕಾಲೇಜಿನ ಹುಡುಗನಿಂದ ಬಾಲಕಿಯ ಜೀವರಕ್ಷಣೆ ಅಂತ ಸುದ್ದಿ ಮಾಡ್ತೀನಿ ಬಿಡು' ಎಂದ. ಅದಕ್ಕೆ ಈ ಹುಡುಗ 'ನಾನು ಗೌರ್ನಮೆಂಟ್ ಕಾಲೇಜ್‌ನಲ್ಲಿ ಓದ್ತಾ ಇಲ್ಲ' ಎಂದ. ಅದಕ್ಕೆ ಟಿವಿ ರಿಪೋರ್ಟರ್ 'ಹಾಗಿದ್ರೆ ನೀನು ಯಾರು?' ಅಂತ ಕೇಳಿದ. ಹುಡುಗ ಹೇಳಿದ 'ನಾನು ಈ ರಾಜ್ಯದ ಗೃಹಮಂತ್ರಿಗಳ ಮಗ'. ಐದೇ ನಿಮಿಷದಲ್ಲಿ ಟಿವಿಯಲ್ಲಿ ಬ್ರೇಕಿಂಗ್ ನ್ಯೂಸ್ ಪ್ರಸಾರವಾಗತೊಡಗಿತು ' ಗೃಹಮಂತ್ರಿಯ ಮಗನ ನಿರ್ಲಕ್ಷ್ಯ ಬೈಕ್ ಚಾಲನೆಗೆ ಅಮಾಯಕ ಬೀದಿನಾಯಿ ಬಲಿ'.  

ಸ್ಯಾಂಡಲ್‌ವುಡ್
ಈ ವಾರ ಬಿಡುಗಡೆಯಾದ ಚಿತ್ರಗಳಲ್ಲಿ ಟೀನೇಜ್ ಮತ್ತು ಮಂಗನ ಕೈಲಿ ಮಾಣಿಕ್ಯ ವಿಶೇಷವಾಗಿ ಹೆಸರಿಸಬೇಕಾದಂಥವುಗಳು. ಏಕೆಂದರೆ ಅದ್ದೂರಿ ಪ್ರಚಾರದೊಂದಿಗೆ, ಅದ್ದೂರಿ ವೆಚ್ಚದಲ್ಲಿ ತಯಾರಾದ ಚಿತ್ರ, ಟೀನೇಜ್. ಬಿಡುಗಡೆಯಾಗಿದ್ದೇ ಗೊತ್ತಿಲ್ಲ ಎನ್ನುವಂತೆ ಬಂದ ಚಿತ್ರ, ಮಂಗನ ಕೈಲಿ ಮಾಣಿಕ್ಯ. ವಿಚಿತ್ರ ಎಂದರೆ ಟೀನೇಜ್ ಚಿತ್ರದಲ್ಲಿ ಎಲ್ಲವೂ ಇದೆ, ಆದರೆ ಕಥೆ, ಚಿತ್ರಕಥೆ, ಸಂಭಾಷಣೆ ವಿಷಯದಲ್ಲೇ ಕೊರತೆ. ಮಂಗನ ಕೈಯಲ್ಲಿ ಮಾಣಿಕ್ಯ ಚಿತ್ರದಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆಯೇ ಹೈಲೈಟ್. ಆದರೆ ಚಿತ್ರಕ್ಕೆ ಬಜೆಟ್‌ನ ಕೊರತೆ. ಪ್ರಚಾರದ ಕೊರತೆ. ಎರಡೂ ಚಿತ್ರಗಳನ್ನು ನೋಡಿದವರಿಗೆ ಟೀನೇಜ್ ಚಿತ್ರಕ್ಕೆ ಸಿಕ್ಕ ಬಜೆಟ್, ಪ್ರಚಾರ ಮಂಗನ ಕೈಲಿ ಮಾಣಿಕ್ಯಕ್ಕೆ ಸಿಕ್ಕಿದ್ದಿದ್ದರೆ ಚೆನ್ನಾಗಿರುತ್ತಿತ್ತು ಎನಿಸಿದರೆ, ಮಂಗನ ಕೈಲಿ ಮಾಣಿಕ್ಯ ಚಿತ್ರಕ್ಕೆ ಸಿಕ್ಕಂಥ ಗಟ್ಟಿ ಕಥೆ, ಚಿತ್ರಕಥೆ, ಸಂಭಾಷಣೆ ಟೀನೇಜ್ ಚಿತ್ರಕ್ಕೆ ಸಿಕ್ಕಿದ್ದಿದ್ದರೆ ಚೆನ್ನಾಗಿರುತ್ತಿತ್ತು ಎನಿಸಬಹುದು ಎಂಬುದು ವಿಚಿತ್ರವಾದರೂ ಸತ್ಯ. ಅದ್ದೂರಿತನ, ಹಾಡುಗಳು, ಗಿನ್ನೆಸ್ ದಾಖಲೆ, ಕಿಶನ್‌ನ ಫೇಸ್‌ವ್ಯಾಲ್ಯೂ ಇಷ್ಟನ್ನೇ ನಂಬಿಕೊಂಡು ಎಡವಿದ ಟೀನೇಜ್ ಒಂದು ಕಡೆಯಾದರೆ, ರಮೇಶ್ ಅರವಿಂದ್ ನಾನೇ ನಿರ್ದೇಶನ ಮಾಡ್ತೀನಿ ಅಂತ ಹೇಳಿ ಸಿನಿಮಾ ಶುರು  ಮಾಡಿ, ಆಮೇಲೆ ರಾಜೇಂದ್ರ ಕಾರಂತ್ ಅವರನ್ನ ಕರೆತಂದರು ಎಂಬ ಅಸಮಾಧಾನದಲ್ಲಿ ತಮ್ಮ ಚಿತ್ರವನ್ನೇ ಕಡೆಗಣಿಸಿದ ನಿರ್ಮಾಪಕ ಸಂದೇಶ್ ನಾಗರಾಜ್ ಇನ್ನೊಂದು ಕಡೆ. ಒಟ್ಟಿಗೆ ಕನ್ನಡ ಚಿತ್ರಗಳಲ್ಲಿ ಅದಿದ್ರೆ ಇದಿಲ್ಲ, ಇದಿದ್ರೆ ಅದಿಲ್ಲ ಎನ್ನುವಂಥ ಪರಿಸ್ಥಿತಿ ಮಾತ್ರ ಇನ್ನೂ ಇದೆ ಎನ್ನುವುದಕ್ಕೆ ಜೊತೆಜೊತೆಯಾಗಿ ಬಂದಿರುವ ಈ ಎರಡು ಚಿತ್ರಗಳು ಉತ್ತಮ ಉದಾಹರಣೆಯಾಗಬಲ್ಲವು.

ಡಬ್ಕುಡಬಲ್ ತುದಾಂಡಲ್...
-ಕಳಪೆ ಜೋಕ್ ಮಾಡಿ, ಸರ್ದಾರ್ಜಿಗಳನ್ನು ಕೀಳಾಗಿ ನೋಡುವವರು.
'ಸಿಖ್‌' ಮೈಂಡೆಡ್ ಪೀಪಲ್

ಪಿಯುಟಿ 'ಪುಟ್‌' ಆದ್ರೆ ಸಿಯುಟಿ ಕುಟ್ ಅಲ್ವಾ?
ಜಿಓ 'ಗೋ' ಆದ್ರೆ ಡಿಓ ಡೋ ಅಲ್ವಾ?
ಎಸ್‌ಇಇ 'ಸೀ' ಆದ್ರೆ ಎಸ್‌ಇಎನೂ ಸೀ ಹೆಂಗೆ? ಈ ಇಂಗ್ಲಿಷ್ ಅನ್ನೋದು ಎಂಥ ಲಾಂಗ್ವೇಜ್, ಅಂತ ಬಯ್ಯೋರಿಗೆ ಈ ಮೂರನ್ನೂ ಸೇರಿಸಿದ್ರೆ ಇನ್ನೊಂದು ತರಲೆ ಉತ್ತರ ಸಿಗಬಹುದು.
'ಪುಟ್‌' 'ಗೋ' 'ಸೀ' ಲ್ಯಾಂಗ್ವೇಜ್!
-ಬದುಕೋದು ಕಷ್ಟ ಎನ್ನುವಂತಿದ್ದ ಮಹಿಳೆಯನ್ನು ನೋಡಿ ಆಪರೇಷನ್ ಥಿಯೇಟರ್‌ನಿಂದ ಹೊರಬಂದ ಡಾಕ್ಟರ್ ಆಕೆಯ ಗಂಡನ ಬಳಿ  ಬೇಜಾರಿನಿಂದ ಹೇಳಿದರು.
ಪಾಪ, ನಿಮ್ ಹೆಂಡ್ತೀನಾ ನೋಡೋಕಾಗಲ್ಲ.
ನಿಜ. ನಂಗೂ ಆಗಲ್ಲ. ಬಟ್, ಮದುವೆ ಆಗಿ 6 ವರ್ಷ ಆಯ್ತು. ಈಗೇನ್ ಮಾಡೋಕಾಗುತ್ತೆ?
-ಎಲ್ಲರೂ ಕಾಲು ಕೆರ್‌ಕೊಂಡು ಹೊಡೆಯೋಕೆ ಹೋಗುವ ಸಂದರ್ಭ ಯಾವುದು?
ಸೊಳ್ಳೆಗಳು ಕಾಲಿಗೆ ಕಡಿದಾಗ
-ಕಾಂಗ್ರೆಸ್ ಸರ್ಕಾರದ್ದು - ಮಿಡ್‌ಡೇ ಮೀಲ್
ಜೆಡಿಎಸ್ ಸರ್ಕಾರ ಬಂದ್ರೆ - ಮುದ್ದೆ ಮೀಲ್
-ಆಸ್ತಿಕ - ಸಿಕ್ಕಾಪಟ್ಟೆ ಆಸ್ತಿ ಮಾಡಿದವನು
-ಒಂದು ಡೌಟು
ಸೀರಿಯಸ್ಸಾಗಿದಾರೆ, ಆಸ್ಪತ್ರೆಗೆ ಸೇರಿಸಿದೀವಿ ಅಂತಾರಲ್ಲ. ಸುಮ್ ಸುಮ್ನೆ ನಗೋವ್ರನ್ನ ಮೆಂಟಲ್ ಆಸ್ಪತ್ರೆಗೆ ಸೇರಿಸೋದು ಕೇಳಿದೀವಿ. ಪಾಪ ಸೀರಿಯಸ್ಸಾಗಿರೋದೂ ತಪ್ಪಾ?

-ಹರಿ
harikannadaprabha@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ