ನವದೆಹಲಿ: ತಮ್ಮ ಅದ್ಭುತ ಪ್ರದರ್ಶನದ ಮೂಲಕ ಕ್ರಿಕೆಟ್ ಲೋಕದಲ್ಲಿ ನಂಬರ್ ಕ್ರಿಕೆಟಿಗ ಎಂಬ ಕೀರ್ತಿಗೆ ಭಾಜನರಾಗಿರುವ ನಾಯಕ ವಿರಾಟ್ ಕೊಹ್ಲಿ, ಇದೀಗ ಜಾಹಿರಾತು ಕ್ಷೇತ್ರದಲ್ಲೂ ನಂಬರ್ 1 ಆಗಿ ಮುಂದುವರೆದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಟೀಂ ಇಂಡಿಯಾ ನಾಯಕ ಕೊಹ್ಲಿ ಇದೀಗ ಜಾಹಿರಾತು ಕ್ಷೇತ್ರದಲ್ಲೂ ನಂಬರ್ 1 ಸ್ಥಾನಿಯಾಗಿ ಮುಂದುವರೆದಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಭಾರತದ ಪ್ರಮುಖ ಸೆಲೆಬ್ರಿಟಿ ಜಾಹಿರಾತುದಾರರ ಪಟ್ಟಿಯಲ್ಲಿ ಕೊಹ್ಲಿ ಅಗ್ರ ಸ್ಥಾನಿಯಾಗಿ ಮುಂದುವರೆದಿದ್ದಾರೆ. ಜಾಹಿರಾತುಗಳಲ್ಲಿ ಅತಿ ಹೆಚ್ಚು ಶುಲ್ಕ ಪಡೆಯುವ ಮೂಲಕ ಬ್ರಾಂಡ್ ವ್ಯಾಲ್ಯೂ ಉಳಿಸಿಕೊಂಡಿದ್ದ ಕೊಹ್ಲಿ, ಇದೀಗ ಬಿಟೌನ್ ನ ಸೆಲಿಬ್ರಿಟಿಗಳನ್ನ ಹಿಂದಿಕ್ಕಿದ್ದಾರೆ. ಸ್ಪೋರ್ಟ್ಸ್ ಪರ್ಸನ್ ಆಗಿರೋ ವಿರಾಟ್ ನಂಬರ್ 1 ಜಾಹಿರಾತು ಸೆಲೆಬ್ರಿಟಿ ಎಂಬ ಪಟ್ಟವನ್ನ ಮುಡಿಗೇಡಿಸಿಕೊಂಡಿದ್ದಾರೆ.
2018ರಲ್ಲಿ ಸಾಕಷ್ಟು ಜಾಹಿರಾತುಗಳಲ್ಲಿ ವಿರಾಟ್ ಕಾಣಿಸಿಕೊಂಡಿದ್ದು,ಅತಿ ಹೆಚ್ಚು ರೇಟಿಂಗ್ಸ್ ವಿರಾಟ್ ಜಾಹೀರಾತುಗಳಿಗಿದೆ ಎಂದು ಸೆಲೆಬ್ರಿಟಿ ಬ್ರ್ಯಾಂಡ್ ಎಂಡೋರ್ಸ್ಮೆಂಟ್ ವರದಿಯಿಂದ ಬಹಿರಂಗವಾಗಿದೆ. ಇನ್ನು ಎರಡನೇ ಸ್ಥಾನದಲ್ಲಿ ದೀಪಿಕಾ ಪಡುಕೋಣೆಯಿದ್ದು, ಮೂರನೇ ಸ್ಥಾನದಲ್ಲಿ ಅಕ್ಷಯ್ ಕುಮಾರ್, ನಾಲ್ಕನೇ ಸ್ಥಾನದಲ್ಲಿ ರಣ್ವೀರ್ ಸಿಂಗ್ ಹಾಗೂ 5ನೇ ಸ್ಥಾನದಲ್ಲಿ ಶಾರುಖ್ ಖಾನ್ ಇದ್ದಾರೆ.