ಕ್ರಿಕೆಟ್

ಟಿ20 ವಿಶ್ವಕಪ್: 'ಭಾರತದ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್', ಜಸ್ ಪ್ರೀತ್ ಬುಮ್ರಾ ಹಿರಿಮೆಗೆ ಮತ್ತೊಂದು ಗರಿ

Srinivasamurthy VN

ದುಬೈ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಬೌಲಿಂದ್ ಪ್ರದರ್ಶಿಸಿದ ಭಾರತದ ಜಸ್ ಪ್ರೀತ್ ಬುಮ್ರಾ ದಾಖಲೆಯೊಂದನ್ನು ಬರೆದಿದ್ದಾರೆ.

ಇಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ 2 ವಿಕೆಟ್ ಪಡೆದ ಬುಮ್ರಾ ಆ ಮೂಲಕ ಟಿ20 ಕ್ರಿಕೆಟ್ ನಲ್ಲಿ ತಮ್ಮ ವಿಕೆಟ್ ಗಳಿಕೆಯನ್ನು 64ಕ್ಕೆ ಏರಿಕೆ ಮಾಡಿಕೊಂಡರು.

ಆ ಮೂಲಕ ಜಸ್ ಪ್ರೀತ್ ಬುಮ್ರಾ ಟಿ20 ಕ್ರಿಕೆಟ್ ನಲ್ಲಿ ಭಾರತದ ಪರ ಅತೀ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.  ಬುಮ್ರಾ 53 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಇದಕ್ಕೂ ಮೊದಲು ಈ ಸಾಧನೆ ಭಾರತ ಮತ್ತೋರ್ವ ಸ್ಚಾರ್ ಬೌಲರ್ ಯಜುವೇಂದ್ರ ಚಹಲ್ ಅವರ ಹೆಸರಿನಲ್ಲಿತ್ತು. ಚಹಲ್ 49 ಪಂದ್ಯಗಳಲ್ಲಿ 63 ವಿಕೆಟ್ ಗಳಿಸಿ ಅತೀ ಹೆಚ್ಚು ವಿಕೆಟ್ ಗಳಿಸಿದ ಭಾರತದ ಬೌಲರ್ ಎನಿಸಿಕೊಂಡಿದ್ದರು. ಇದೀಗ ಈ ಸಾಧನೆಯನ್ನು ಬುಮ್ರಾ ಹಿಂದಿಕ್ಕಿದ್ದಾರೆ.

27 ವರ್ಷ ವಯಸ್ಸಿನ ಬುಮ್ರಾ 2016ರಲ್ಲಿ ಟಿ20 ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಜಿಂಬಾಬ್ವೆ ವಿರುದ್ಧ ಬುಮ್ರಾ ಕೇವಲ 11 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಇದು ಅವರ ಟಿ20 ಕ್ರಿಕೆ್ಟ್ ವೃತ್ತಿ ಜೀವನದ ಸರ್ವಶ್ರೇಷ್ಠ ಪ್ರದರ್ಶನವಾಗಿದೆ. 

SCROLL FOR NEXT