ಕ್ರಿಕೆಟ್

ನನಗೆ ಬೇಕಾಗಿದ್ದನ್ನು ಸಾಧಿಸಿದ್ದೇನೆ, ಹೆಚ್ಚಿನ ಅವಧಿಗೆ ಕೋಚ್ ಆಗಿ ಮುಂದುವರಿಯಲು ಆಸಕ್ತಿಯಿಲ್ಲ: ನಿವೃತ್ತಿಯತ್ತ ರವಿ ಶಾಸ್ತ್ರಿ ಹೆಜ್ಜೆ

Harshavardhan M

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಾವಳಿ ನಂತರ ಕೊನೆಗೊಳ್ಳಲಿರುವ ಕೋಚ್ ಅವಧಿಯ ಬಗ್ಗೆ ರವಿ ಶಾಸ್ತ್ರಿ ತಣ್ನಗೆ ಪ್ರತಿಕ್ರಿಯಿಸಿದ್ದಾರೆ. 

ನಿಗದಿತ ಅವಧಿಗಿಂತ ಹೆಚ್ಚಿನ ಅವಧಿಗೆ ಕೋಚ್ ಆಗಿ ಮುಂದುವರಿಯಲು ತಮಗೆ ಆಸಕ್ತಿಯೇನಿಲ್ಲ ಎಂದು ಹೇಳಿರುವ ಅವರು, ತಮ್ಮ ಅವಧಿಯಲ್ಲಿ ಹೆಚ್ಚಿನ ಸಾಧನೆಯನ್ನು ತೋರಿರುವ ತೃಪ್ತಿ ಇದೆ ಎಂದು ತಿಳಿಸಿದ್ದಾರೆ. 

2017ರಲ್ಲಿ ರವಿ ಶಾಸ್ತ್ರಿ ಟೀಂ ಇಂಡಿಯಾ ಕೋಚ್ ಆಗಿ ನೇಮಕಗೊಂಡಿದ್ದರು. ನಂತರ 2019ರಲ್ಲಿ ಮರುನೇಮಕಗೊಂಡಿದ್ದರು. 59 ವರ್ಷದ ರವಿ ಶಾಸ್ತ್ರಿ ಸದ್ಯ ಕೊರೊನಾ ಹಿನ್ನೆಲೆಯಲ್ಲಿ ಕ್ವಾರಂಟೈನ್ ನಲ್ಲಿದ್ದಾರೆ.

ಈ ಬಾರಿಯ ವಿಶ್ವಕಪ್ ನಲ್ಲೂ ಭಾರತ ತಂಡ ಗೆಲ್ಲುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಈ ಬಾರಿ ತಂಡ ವಿಶೇಷ ತರಬೇತಿಗೆ ಒಳಗಾಗಿದೆ, ಅವೆಲ್ಲಾ ಪರಿಶ್ರಮ ಫಲ ನೀಡಲಿದೆ ಎಂದವರು ತಿಳಿಸಿದ್ದಾರೆ. ಇದೇ ವೇಳೆ ಅವರು ತಮ್ಮ ಕೋಚ್ ಅವಧಿಯಲ್ಲಿ ತಾವು ಕಂಡ ಅತ್ಯುತ್ತಮ ಟೆಸ್ಟ್ ಕ್ರಿಕೆಟ್ ಬೌಲರ್ ಎಂದರೆ ಜಸ್ ಪ್ರೀತ್ ಬುಮ್ರಾ ಎಂದು ಹೊಗಳಿದ್ದಾರೆ.

SCROLL FOR NEXT