ಹೈದರಾಬಾದ್: ಐಪಿಎಲ್ ಟೂರ್ನಿಯ ನಿನ್ನೆಯ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ದಾಖಲೆಗಳ ಸುರಿಮಳೆಯೇ ಸೃಷ್ಟಿಯಾಗಿದೆ.
ನಿನ್ನೆ ಹೈದರಾಬಾದ್ ನ ರಾಜೀವ್ ಗಾಂಧಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನೀಡಿದ 246 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡ 18.3 ಓವರ್ ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 247 ರನ್ ಗಳಿಸಿ ಗುರಿ ಮುಟ್ಟಿತು. ಈ ಪಂದ್ಯದಲ್ಲಿ ಅಸಾಧ್ಯವಾಗಿದ್ದ ಗುರಿಯನ್ನು ಹೈದರಾಬಾದ್ ಯಶಸ್ವಿಯಾಗಿ ಮುಟ್ಟಿತ್ತು.
ಹೈದಾರಾಬಾದ್ ಗೆಲುವಿನಲ್ಲಿ ಆರಂಭಿಕರಾದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಪ್ರಮುಖ ಪಾತ್ರ ವಹಿಸಿದ್ದರು. ಟ್ರಾವಿಸ್ ಹೆಡ್ 37 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 9 ಬೌಂಡರಿ ನೆರವಿನಿಂದ 66 ರನ್ ಸಿಡಿಸಿದರೆ, ಮತ್ತೊಂದು ಬದಿಯಲ್ಲಿದ್ದ ಅಭಿಷೇಕ್ ಶರ್ಮಾ ಕೇವಲ 55 ಎಸೆತಗಳಲ್ಲಿ 10 ಸಿಕ್ಸರ್ ಮತ್ತು 14 ಬೌಂಡರಿಗಳ ಸಹಿತ 141 ರನ್ ಚಚ್ಚಿದರು.
ಈ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ ನಿಂದ ಒಟ್ಟು 492 ರನ್ ಗಳು ಹರಿದು ಬಂದಿವೆ. ಪಂಜಾಬ್ ಕಿಂಗ್ಸ್ 245 ರನ್ ಪೇರಿಸಿದರೆ, ಸನ್ ರೈಸರ್ಸ್ ಹೈದರಾಬಾದ್ 247ರನ್ ಚಚ್ಚಿತು.
ದಾಖಲೆಗಳ ಸರಣಿ
ಇನ್ನು ಈ ಪಂದ್ಯದಲ್ಲಿ ಉಭಯ ತಂಡಗಳ ಬೌಲರ್ ಗಳು ಹೈರಾಣಾಗಿದ್ದು ಮಾತ್ರ ನಿಜ. ಆದಾಗ್ಯೂ ಈ ಪಂದ್ಯ ಹಲವು ದಾಖಲೆಗಳನ್ನೇ ಸೃಷ್ಟಿಸಿದೆ.
ಐಪಿಎಲ್ ಇತಿಹಾಸದ 2ನೇ ಗರಿಷ್ಠ ರನ್ ಚೇಸ್
ಇನ್ನು ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಪಂಜಾಬ್ ನೀಡಿದ 246 ರನ್ ಗಳ ಗುರಿಯನ್ನು ಯಶಸ್ವಿಯಾಗಿ ಗುರಿ ಮುಟ್ಟಿತು. ಟ್ರಾವಿಸ್ ಹೆಡ್ ಅರ್ಧಶತಕ ಮತ್ತು ಅಭಿಷೇಕ್ ಶರ್ಮಾ ಶತಕಗಳ ನೆರವಿನಿಂದ ಕೇವಲ 2 ವಿಕೆಟ್ ನಷ್ಟಕ್ಕೆ 18.3 ಓವರ್ ನಲ್ಲೇ 247ರನ್ ಗಳಿಸಿ ಜಯಭೇರಿ ಭಾರಿಸಿತು. ಇದು ಐಪಿಎಲ್ ಇತಿಹಾಸದಲ್ಲೇ 2ನೇ ಗರಿಷ್ಟ ರನ್ ಚೇಸ್ ಎಂಬ ದಾಖಲೆಗೆ ಪಾತ್ರವಾಗಿದೆ. ಈ ಹಿಂದೆ ಕಳೆದ ವರ್ಷದ ಆವೃತ್ತಿಯಲ್ಲಿ ಇದೇ ಪಂಜಾಬ್ ಕಿಂಗ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 262 ರನ್ ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿತ್ತು.
Highest targets successfully chased in the IPL
262 - PBKS vs KKR, Kolkata, 2024
246 - SRH vs PBKS, Hyderabad, 2025*
224 - RR vs PBKS, Sharjah, 2020
224 - RR vs KKR, Kolkata, 2024
219 - MI vs CSK, Delhi, 2021
ಐಪಿಎಲ್ ಒಂದೇ ತಂಡದ ವಿರುದ್ಧ ಒಂದೇ ಮೈದಾನದಲ್ಲಿ ಅತೀ ಹೆಚ್ಚು ಗೆಲುವು
ಇನ್ನು ನಿನ್ನೆ ಹೈದರಾಬಾದ್ ನಲ್ಲಿ ಪಂಜಾಬ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡ ತನ್ನ 9ನೇಗ ಗೆಲುವು ಸಾಧಿಸಿತು. ಆ ಮೂಲಕ ಐಪಿಎಲ್ ಇತಿಹಾಸದಲ್ಲಿ ಒಂದು ಮೈದಾನದಲ್ಲಿ ಒಂದು ತಂಡದ ವಿರುದ್ಧ ಅತೀ ಹೆಚ್ಚು ಗೆಲುವು ಸಾಧಿಸಿದ ಜಂಟಿ 2ನೇ ತಂಡ ಎಂಬ ಕೀರ್ತಿಗೆ SRH ಭಾಜನವಾಗಿದೆ. ಇದಕ್ಕೂ ಮೊದಲು ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ತಂಡ ಕೆಕೆಆರ್ ವಿರುದ್ಧ 10 ಪಂದ್ಯಗಳನ್ನು ಜಯಿಸಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅಲ್ಲದೆ ಪಂಜಾಬ್ ವಿರುದ್ಧ ಹೈದರಾಬಾದ್ ಮೈದಾನದಲ್ಲಿ SRH ತನ್ನ ಅಜೇಯ ಓಟ ಮುಂದುವರೆಸಿದೆ.
Most wins against an opponent at a venue in IPL
10 - MI vs KKR at Wankhede
9 - KKR vs PBKS at Kolkata
9 - SRH vs PBKS at Hyderabad*
Longest winning streak by a team against an opponent at a venue in IPL
8 - CSK vs RCB at Chennai (2010-24)
8 - SRH vs PBKS at Hyderabad (2015-25)*
7 - CSK vs DC at Chennai (2011-23)
7 - MI vs KKR at Wankhede (2013-23)
ಗರಿಷ್ಛ ಆರಂಭಿಕ ಜೊತೆಯಾಟ
ಇನ್ನು ನಿನ್ನೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಜೋಡಿ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಈ ಜೋಡಿ ಮೊದಲ ವಿಕೆಟ್ ಗೆ ಬರೊಬ್ಬರಿ 171 ರನ್ ಗಳ ಜೊತೆಯಾಟವಾಡಿತು. ಟ್ರಾವಿಸ್ ಹೆಡ್ 37 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 9 ಬೌಂಡರಿ ನೆರವಿನಿಂದ 66 ರನ್ ಸಿಡಿಸಿದರೆ, ಮತ್ತೊಂದು ಬದಿಯಲ್ಲಿದ್ದ ಅಭಿಷೇಕ್ ಶರ್ಮಾ ಕೇವಲ 55 ಎಸೆತಗಳಲ್ಲಿ 10 ಸಿಕ್ಸರ್ ಮತ್ತು 14 ಬೌಂಡರಿಗಳ ಸಹಿತ 141 ರನ್ ಚಚ್ಚಿದರು. ಇನ್ನು ಈ ಜೊತೆಯಾಟ ಐಪಿಎಲ್ ಇತಿಹಾಸದ 2ನೇ ಗರಿಷ್ಛ ಆರಂಭಿಕ ಜೊತೆಯಾಟವಾಗಿದೆ. ಈ ಹಿಂದೆ 2019ರಲ್ಲಿ ಆರ್ ಸಿಬಿ ವಿರುದ್ಧ ಇದೇ ಸನ್ ರೈಸರ್ಸ್ ತಂಡದ ಜಾನಿ ಬೇರ್ ಸ್ಟೋ ಮತ್ತು ಡೇವಿಡ್ ವಾರ್ನರ್ ಜೋಡಿ 185 ರನ್ ಗಳ ಜೊತೆಯಾಟವಾಡಿತ್ತು.
Highest opening partnership for SRH in IPL
185 - J Bairstow, D Warner vs RCB, 2019
171 - Abhishek Sharma, T Head vs PBKS, 2025
167 - Abhishek Sharma, T Head vs LSG, 2024
160 - J Bairstow, D Warner vs PBKS, 2020
10 ಓವರ್ ನಲ್ಲಿ 4ನೇ ಗರಿಷ್ಠ ರನ್
ಇನ್ನು ನಿನ್ನೆಯ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಮೊದಲ 10 ಓವರ್ ನಲ್ಲಿ ವಿಕೆಟ್ ನಷ್ಟವಿಲ್ಲದೇ 143 ರನ್ ಕಲೆಹಾಕಿತ್ತು. ಇದು ಐಪಿಎಲ್ ಇತಿಹಾಸದಲ್ಲಿ ಇನ್ನಿಂಗ್ಸ್ ನ ಮೊದಲ 10 ಓವರ್ ನಲ್ಲಿ ತಂಡವೊಂದು ಕಲೆಹಾಕಿದ 4ನೇ ಗರಿಷ್ಠ ಸ್ಕೋರ್ ಆಗಿದೆ. 2024ರಲ್ಲಿ ಎಲ್ ಎಸ್ ಜಿ ವಿರುದ್ಧ ಎಸ್ ಆರ್ ಎಚ್ ತಂಡ 9.4 ಓವರ್ ನಲ್ಲೇ 167ರನ್ ಪೇರಿಸಿತ್ತು. ಇದು ಈ ಪಟ್ಟಿಯ ಅಗ್ರಸ್ಥಾನದಲ್ಲಿದೆ.
Highest total after first 10 overs in IPL
167/0 (9.4) - SRH vs LSG, Hyderabad, 2024
158/4 - SRH vs DC, Delhi, 2024
148/2 - SRH vs MI, Hyderabad, 2024
143/0 - SRH vs PBKS, Hyderabad, 2025*
141/2 - MI vs SRH, Hyderabad, 2024
ಉಭಯ ತಂಡಗಳ 4ನೇ ಗರಿಷ್ಠ ಮೊದಲ 10 ಓವರ್ ಗಳಿಕೆ
ಇನ್ನು ಈ ಪಂದ್ಯದಲ್ಲಿ ಮೊದಲ ಹತ್ತು ಓವರ್ ನಲ್ಲಿ ಉಭಯ ತಂಡಗಳ ಗಳಿಕೆ 263 ರನ್ ಗಳಾಗಿದೆ. ಈ ಪೈಕಿ ಸನ್ ರೈಸರ್ಸ್ ಹೈದರಾಬಾದ್ ತಂಡ 143ರನ್ ಪೇರಿಸಿದ್ದರೆ, ಪಂಜಾಬ್ ಕಿಂಗ್ಸ್ ತಂಡ 100 ಕಲೆ ಹಾಕಿತ್ತು. ಆ ಮೂಲಕ ಈ ಪಂದ್ಯ 10 ಓವರ್ ನಲ್ಲಿ ಗರಿಷ್ಠ ರನ್ ಬಂದ ನಾಲ್ಕನೇ ಪಂದ್ಯವಾಗಿದೆ. ಇದಕ್ಕೂ ಮೊದಲು 2024ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ 296ರನ್ ಬಂದಿತ್ತು. ಇದು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
Highest combined total in the first 10 overs in IPL
296 - DC vs SRH, Delhi, 2024
289 - SRH vs MI, Hyderabad, 2024
269 - KKR vs PBKS, Kolkata, 2024
263 - SRH vs PBKS, Hyderabad, 2025*
253 - SRH vs RR, Hyderabad, 2025
2ನೇ ಗರಿಷ್ಠ ಜಂಟಿ ಪವರ್ ಪ್ಲೇ ಸ್ಕೋರ್
ಇನ್ನು ಈ ಪಂದ್ಯದ ಉಭಯ ಇನ್ನಿಂಗ್ಸ್ ನ ಪವರ್ ಪ್ಲೇ ನಲ್ಲಿ 172 ರನ್ ಹರಿದುಬಂದಿದ್ದು, ಇದು ಐಪಿಎಲ್ ಇತಿಹಾಸದ 2ನೇ ಗರಿಷ್ಠ ಜಂಟಿ ಪವರ್ ಪ್ಲೇ ಸ್ಕೋರ್ ಆಗಿದೆ. 2024ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಪವರ್ ಪ್ಲೇ ನಲ್ಲಿ 213 ಹರಿದುಬಂದಿತ್ತು.
Highest combined powerplay totals in an IPL match
213 - DC vs SRH, Delhi, 2024
172 - SRH vs PBKS, Hyderabad, 2025*
171 - SRH vs RR, Hyderabad, 2025
170 - CSK vs PBKS, Wankhede, 2014
169 - KKR vs PBKS, Kolkata, 2024