ಸ್ಮೃತಿ ಮಂಧಾನ - ರೋಹಿತ್ ಶರ್ಮಾ 
ಕ್ರಿಕೆಟ್

'ನನ್ನ ಹೆಂಡತಿ ನೋಡುತ್ತಾಳೆ...': ಸ್ಮೃತಿ ಮಂಧಾನ ಪ್ರಶ್ನೆಗೆ ರಹಸ್ಯ ಬಿಟ್ಟುಕೊಡದ ರೋಹಿತ್ ಶರ್ಮಾ!

ಭಾರತದ ಲೆಜೆಂಡರಿ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರು BCCI ಅವಾರ್ಡ್ಸ್ 2025 ರಲ್ಲಿ ಕರ್ನಲ್ ಸಿಕೆ ನಾಯುಡು ಜೀವಮಾನ ಸಾಧನೆ ಪ್ರಶಸ್ತಿ ಪಡೆದರು.

ಭಾರತದ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕ ರೋಹಿತ್ ಶರ್ಮಾಗೆ ಮರೆಯುವ ಅಭ್ಯಾಸವಿದೆ ಎಂಬುದು ಬಹಿರಂಗ ರಹಸ್ಯವಾಗಿ ಉಳಿದಿದೆ. ರೋಹಿತ್ ಅವರ ತಂಡದ ಸಹ ಆಟಗಾರರು ಈಗಾಗಲೇ ಮಾಧ್ಯಮಗಳಲ್ಲಿ ಈ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ಮುಂಬೈನಲ್ಲಿ ಶನಿವಾರ ನಡೆದ 'BCCI Awards 2025' ಕಾರ್ಯಕ್ರಮದ ವೇಳೆ ಭಾರತದ ಮಹಿಳಾ ತಂಡದ ಆಟಗಾರ್ತಿ ಸ್ಮೃತಿ ಮಂಧಾನ ಕೇಳಿದ ಪ್ರಶ್ನೆಗೆ ರೋಹಿತ್ ಶರ್ಮಾ ನೀಡಿದ ಉತ್ತರ ಇದೀಗ ಎಲ್ಲರನ್ನೂ ಬೆರಗುಗೊಳಿಸಿದೆ.

ರೋಹಿತ್ ಶರ್ಮಾ ಅವರು ಇತ್ತೀಚೆಗೆ ಹೊಸ ಅಥವಾ ತಂಡದ ಇತರ ಸದಸ್ಯರು ಕೀಟಲೆ ಮಾಡುವಂತಹ ಯಾವುದೇ ಹವ್ಯಾಸಗಳನ್ನು ಪ್ರಾರಂಭಿಸಿದ್ದೀರಾ ಎಂದು ಸ್ಮೃತಿ ಪ್ರಶ್ನಿಸುತ್ತಾರೆ. 'ನನಗೆ ಗೊತ್ತಿಲ್ಲ, ನನ್ನ ಮರೆವಿನ ಬಗ್ಗೆ ಅವರು ಕೀಟಲೆ ಮಾಡುತ್ತಾರೆ. ನಿಸ್ಸಂಶಯವಾಗಿ, ಇದು ಹವ್ಯಾಸವಲ್ಲ. ಆದರೆ, ಅವರು ನನ್ನನ್ನು ಗೇಲಿ ಮಾಡುವುದು ಏಕೆಂದರೆ ನಾನು ನನ್ನ ಪರ್ಸ್ ಮತ್ತು ಪಾಸ್‌ಪೋರ್ಟ್ ಅನ್ನು ಮರೆತುಬಿಡುತ್ತೇನೆ. ಇದು ಈಗಿನದಲ್ಲ ಬದಲಿಗೆ ಇದು ಒಂದೆರಡು ದಶಕಗಳ ಹಿಂದೆ ಸಂಭವಿಸಿದ್ದು' ಎಂದು ರೋಹಿತ್ ಹೇಳಿದರು.

ನಂತರ ಸ್ಮೃತಿ ಮಂಧಾನ ಅವರು, ರೋಹಿತ್‌ಗೆ ಅವರು ಮರೆತುಹೋದ ಇತರ ಯಾವುದಾದರೂ ದೊಡ್ಡ ವಿಷಯಗಳ ಬಗ್ಗೆ ಕೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ರೋಹಿತ್, 'ನಾನು ಅದನ್ನು ಹೇಳಲಾರೆ!' ಎಂದು ನಗುತ್ತಾ ಹೇಳಿದರು. 'ಇದು ಲೈವ್ ಆಗುತ್ತಿದ್ದರೆ, ನನ್ನ ಹೆಂಡತಿ ನೋಡುತ್ತಾಳೆ ಮತ್ತು ನಾನು ಅದನ್ನು ಹೇಳಲಾರೆ. ನಾನು ಅದನ್ನು ನನ್ನಲ್ಲಿಯೇ ಇಟ್ಟುಕೊಳ್ಳುತ್ತೇನೆ' ಎಂದು ಭಾರತ ತಂಡದ ನಾಯಕ ಹೇಳಿದರು.

ಭಾರತದ ಲೆಜೆಂಡರಿ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರು BCCI ಅವಾರ್ಡ್ಸ್ 2025 ರಲ್ಲಿ ಕರ್ನಲ್ ಸಿಕೆ ನಾಯುಡು ಜೀವಮಾನ ಸಾಧನೆ ಪ್ರಶಸ್ತಿ ಪಡೆದರು. ಮಾಸ್ಟರ್ ಬ್ಲಾಸ್ಟರ್ ಸಚಿನ್ ಇಂದಿಗೂ ಟೆಸ್ಟ್ ಮತ್ತು ODIಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಗಳನ್ನು ಹೊಂದಿದ್ದಾರೆ. ಜೊತೆಗೆ 100 ಶತಕಗಳನ್ನು ಗಳಿಸಿದ ಅನನ್ಯ ಸಾಧನೆಯನ್ನು ಹೊಂದಿದ್ದಾರೆ.

ಬಿಸಿಸಿಐನ ವಾರ್ಷಿಕ 'ನಮನ್ ಪ್ರಶಸ್ತಿ' ಸಮಾರಂಭದಲ್ಲಿ ಐಸಿಸಿ ಅಧ್ಯಕ್ಷ ಜಯ್ ಶಾ ಅವರು ಭಾರತದ ದಂತಕಥೆ ಸಚಿನ್ ತೆಂಡೂಲ್ಕರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

'2023-24ರ ಅತ್ಯುತ್ತಮ ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟಿಗ' ಆಗಿ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ ಪಾಲಿ ಉಮ್ರಿಗರ್ ಪ್ರಶಸ್ತಿಯನ್ನು ನೀಡಿ ಗೌರವಿಸಿದರೆ, ಮಹಿಳಾ ವಿಭಾಗದಲ್ಲಿ ಸ್ಮೃತಿ ಮಂಧಾನ ಅದೇ ಗೌರವ ಪಡೆದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT