ಭಾರತ ಕ್ಯಾಚ್ ಡ್ರಾಪ್ 
ಕ್ರಿಕೆಟ್

Asia Cup 2025: ಭಾರತ ಕಳಪೆ ಫೀಲ್ಡಿಂಗ್, Saif Hassan ಗೆ 4 ಬಾರಿ ಜೀವದಾನ, ಬಾಂಗ್ಲಾ ಬ್ಯಾಟರ್ ವಿಚಿತ್ರ ದಾಖಲೆ! Elite Group ಸೇರ್ಪಡೆ!

ಬಾಂಗ್ಲಾದೇಶ ಬ್ಯಾಟಿಂಗ್ ವೇಳೆ ಭಾರತ ತಂಡ ಒಂದಲ್ಲ.. ಬರೊಬ್ಬರಿ 5 ಕ್ಯಾಚ್ ಡ್ರಾಪ್ ಮಾಡಿದೆ.

ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಇಂದಿನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತ ತಂಡ 41 ರನ್ ಗಳ ಭರ್ಜರಿ ಜಯ ಸಾಧಿಸಿದೆಯಾದರೂ ಈ ಪಂದ್ಯದಲ್ಲಿ ಭಾರತದ ಕಳಪೆ ಫೀಲ್ಡಿಂಗ್ ಎಲ್ಲರ ಟೀಕೆಗೆ ಗುರಿಯಾಗಿದೆ.

ಹೌದು.. ಭಾರತ ನೀಡಿದ್ದ 169ರನ್ ಗಳ ಸವಾಲಿನ ಗುರಿ ಬೆನ್ನು ಹತ್ತಿದ ಬಾಂಗ್ಲಾದೇಶ 19.3 ಓವರ್ ನಲ್ಲಿ 127 ರನ್ ಗಳಿಗೇ ಆಲೌಟ್ ಆಯಿತು. ಆ ಮೂಲಕ ಭಾರತ 41 ರನ್ ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು. ಆದರೆ ಬಾಂಗ್ಲಾದೇಶ ಬ್ಯಾಟಿಂಗ್ ವೇಳೆ ಭಾರತ ತಂಡ ಒಂದಲ್ಲ.. ಬರೊಬ್ಬರಿ 5 ಕ್ಯಾಚ್ ಡ್ರಾಪ್ ಮಾಡಿದೆ.

ಬಾಂಗ್ಲಾದೇಶದ ಆರಂಭಿಕ ಆಟಗಾರ ಸೈಫ್ ಹಸನ್ ಒಬ್ಬರೇ ನಾಲ್ಕು ಬಾರಿ ಜೀವದಾನ ಪಡೆದಿದ್ದಾರೆ. ಆ ಮೂಲಕ ಸೈಫ್ ಹಸನ್ ಜೀವದಾನ ಪಡೆಯುವುದರಲ್ಲೂ ದಾಖಲೆ ನಿರ್ಮಿಸಿದ್ದಾರೆ.

ಬಾಂಗ್ಲಾ ಬ್ಯಾಟರ್ ವಿಚಿತ್ರ ದಾಖಲೆ!

ಬಾಂಗ್ಲಾದೇಶದ ಸೈಫ್ ಹಸನ್ 40ರನ್ ಗಳ ಆಸುಪಾಸಿನಲ್ಲಿದ್ದಾಗ 12ನೇ ಓವರ್ ನಲ್ಲಿ ಅಕ್ಸರ್ ಪಟೇಲ್, ಬಳಿಕ 64 ರನ್ ಗಳಾಗಿದ್ದಾಗ 16ನೇ ಓವರ್ ನಲ್ಲಿ ಶಿವಂ ದುಬೆ ಮತ್ತು ಸಂಜು ಸ್ಯಾಮ್ಸನ್ ಮತ್ತು 17ನೇ ಓವರ್ ನಲ್ಲಿ ಅಭಿಷೇಕ್ ಶರ್ಮಾ ಕ್ಯಾಚ್ ಡ್ರಾಪ್ ಮಾಡಿದರು. ತಮಗೆ ಸಿಕ್ಕ 4 ಜೀವದಾನವನ್ನು ಸೈಫ್ ಹಸನ್ ಅತ್ಯುತ್ತಮವಾಗಿ ಬಳಸಿಕೊಂಡರಾದರೂ ಅವರಿಗೆ ತಂಡದ ಇತರೆ ಆಟಗಾರರಿಂದ ಸಾಥ್ ದೊರೆಯದೇ ಅವರ ಏಕಾಂಗಿ ಹೋರಾಟ ವ್ಯರ್ಥವಾಯಿತು.

Dropped catches in Asia Cup 2025 (catch efficiency in brackets)

  • 12 India (67.5%)

  • 11 HK, China (52.1%)

  • 8 Ban (74.1%)

  • 6 SL (68.4%)

  • 4 Afg (76.4%)

  • 4 Oman (76.4%)

  • 3 Pak (86.3%)

  • 2 UAE (85.7%)

Elite Group ಸೇರ್ಪಡೆ!

ಇನ್ನು ಸತತ ನಾಲ್ಕು ಜೀವದಾನ ಪಡೆದ ಸೈಫ್ ಹಸನ್ ಇದೀಗ ಒಂದೇ ಪಂದ್ಯಲ್ಲಿ 4 ಅಥವಾ ಅದಕ್ಕಿಂತ ಹೆಚ್ಚು ಜೀವದಾನ ಪಡೆದ ಆಟಗಾರರ ಪಟ್ಟಿಯಲ್ಲಿ 4ನೇ ಬ್ಯಾಟರ್ ಆಗಿ ಸ್ಥಾನಪಡೆದಿದ್ದಾರೆ. ಈ ಹಿಂದೆ 2018ರಲ್ಲಿ ಶ್ರೀಲಂಕಾದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಇಂಗ್ಲೆಂಡ್ ಜೇಸನ್ ರಾಯ್ ಮೊದಲ ಬಾರಿಗೆ ಒಂದೇ ಪಂದ್ಯದಲ್ಲಿ 4 ಜೀವದಾನ ಪಡೆದಿದ್ದರು.

ಸೈಫ್ ಹಸನ್ ಅಲ್ಲದೇ ಇತ್ತೀಚಿನ ಉದಾಹರಣೆ ಎಂದರೆ ಇದೇ ಏಷ್ಯಾಕಪ್ ಟಿ20 2025 ಸರಣಿಯ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾದ ಪಾತುಮ್ ನಿಸ್ಸಾಂಕಾ ಕೂಡ 4 ಬಾರಿ ಜೀವದಾನ ಪಡೆದಿದ್ದರು.

Four catches dropped off a batter in a T20I

  • Jason Roy vs SL Colombo RPS 2018

  • Mohd Hafeez vs NZ Hamilton 2020

  • Pathum Nissanka vs HK Dubai 2025

  • Saif Hassan vs Ind Dubai 2025

- the last two instances coming in Asia Cup 2025

ಭಾರತ ಕಳಪೆ ಫೀಲ್ಡಿಂಗ್

ಸೈಫ್ ಹಸನ್ 4 ಜೀವದಾನ ಮಾತ್ರವಲ್ಲದೇ ಅಂತಿಮ ಓವರ್ ನಲ್ಲೂ ತಿಲಕ್ ವರ್ಮಾ ಬೌಲಿಂಗ್ ನಲ್ಲಿ ಬಾಂಗ್ಲಾದೇಶದ ನಸುಮ್ ಅಹ್ಮದ್ ನೀಡಿದ ಕ್ಯಾಚ್ ಅನ್ನು ಕುಲದೀಪ್ ಯಾದವ್ ಕೈಚೆಲ್ಲಿದರು. ಈ ಮೂಲಕ ಒಂದೇ ಪಂದ್ಯದಲ್ಲಿ ಬಾಂಗ್ಲಾದೇಶದ ಬ್ಯಾಟರ್ ಗಳು ಬರೊಬ್ಬರಿ 5 ಬಾರಿ ಜೀವದಾನ ಪಡೆದಂತಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Ladakh violence ಗೆ ಸೋನಮ್ ವಾಂಗ್‌ಚುಕ್ ಪ್ರಚೋದನಕಾರಿ ಹೇಳಿಕೆಗಳೇ ಕಾರಣ: ಕೇಂದ್ರ ಸರ್ಕಾರ

ಲಡಾಖ್ ಹಿಂಸಾಚಾರಕ್ಕೆ ನಾಲ್ವರು ಬಲಿ: 30 ಜನರಿಗೆ ಗಾಯ; ಬಿಜೆಪಿ ಕಚೇರಿ, ಪೊಲೀಸ್ ವ್ಯಾನ್ ಗೆ ಬೆಂಕಿ; Video

Asia Cup 2025: ಇತಿಹಾಸ ಬರೆದ Abhishek Sharma, ಶ್ರೀಲಂಕಾ ಲೆಜೆಂಡ್ Sanath Jayasuriya ದಾಖಲೆ ಪತನ

Asia Cup 2025: ಬಾಂಗ್ಲಾದೇಶ ಬಗ್ಗು ಬಡಿದ ಭಾರತ, ಫೈನಲ್ ಗೆ ಲಗ್ಗೆ, Srilanka ಟೂರ್ನಿಯಿಂದ ಔಟ್!

ನನ್ನ ರಾಷ್ಟ್ರ ನಿರ್ಮಾಣದ ಆಶಯಗಳಿಗೆ ಎಸ್ಎಲ್ ಭೈರಪ್ಪನವರೇ ಪ್ರೇರಣೆ: BJP ಸಂಸದ ತೇಜಸ್ವೀ ಸೂರ್ಯ

SCROLL FOR NEXT