ರಿಷಬ್ ಪಂತ್ ಸ್ಟಂಪಿಂಗ್ 
ಕ್ರಿಕೆಟ್

2nd Test: Rishabh Pant ಮಿಂಚಿನ ಸ್ಟಂಪಿಂಗ್, ಕೇವಲ 0.3 ಸೆಕೆಂಡ್ ನಲ್ಲೇ ಲಂಕಾ ಬ್ಯಾಟರ್ ಪೆವಿಲಿಯನ್ ಗಟ್ಟಿದ ಭಾರತದ ವಿಕೆಟ್ ಕೀಪರ್!

ಸೂರಿಯಬಂಡಾರ 92 ರನ್‌ಗಳಿಸಿ ಬ್ಯಾಟಿಂಗ್ ಮಾಡುತ್ತಾ ಚೊಚ್ಚಲ ಟೆಸ್ಟ್ ಶತಕದ ಸನಿಹದಲ್ಲಿದ್ದರು. ಈ ವೇಳೆ ಭಾರತದ ಸ್ಪಿನ್ನರ್ ಮಾನವ್ ಸುತಾರ್ ಎಸೆದ 61ನೇ ಓವರ್‌ನಲ್ಲಿ ಸೂರಿಯಬಂಡಾರ ಕ್ರೀಸ್ ಬಿಟ್ಟು ಮುಂದೆ ಬಂದು ಹೊಡೆಯಲು..

ಕೊಲಂಬೋ: ಭಾರತ-ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್‌ನ ನಾಲ್ಕನೇ ದಿನ ರಿಷಭ್ ಪಂತ್ ಮತ್ತೊಮ್ಮೆ ತಮ್ಮ ಅದ್ಭುತ ವಿಕೆಟ್‌ಕೀಪಿಂಗ್ ಕೌಶಲ್ಯದಿಂದ ಗಮನ ಸೆಳೆದಿದ್ದಾರೆ.

2ನೇ ಇನ್ನಿಂಗ್ಸ್ ನಲ್ಲಿ ಶತಕದ ಅಂಚಿನಲ್ಲಿದ್ದ ಶ್ರೀಲಂಕಾದ ಅಪಾಯಕಾರಿ ಬ್ಯಾಟರ್ ಪಸುಂದು ಸೂರಿಯಬಂಡಾರ ಅವರನ್ನು ಪಂತ್ ಮಿಂಚಿನ ವೇಗದಲ್ಲಿ ಸ್ಟಂಪ್‌ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸೂರಿಯಬಂಡಾರ 92 ರನ್‌ಗಳಿಸಿ ಬ್ಯಾಟಿಂಗ್ ಮಾಡುತ್ತಾ ಚೊಚ್ಚಲ ಟೆಸ್ಟ್ ಶತಕದ ಸನಿಹದಲ್ಲಿದ್ದರು. ಈ ವೇಳೆ ಭಾರತದ ಸ್ಪಿನ್ನರ್ ಮಾನವ್ ಸುತಾರ್ ಎಸೆದ 61ನೇ ಓವರ್‌ನಲ್ಲಿ ಸೂರಿಯಬಂಡಾರ ಕ್ರೀಸ್ ಬಿಟ್ಟು ಮುಂದೆ ಬಂದು ಹೊಡೆಯಲು ಯತ್ನಿಸಿದರು. ಆದರೆ ಸುತಾರ್ ಚೆಂಡನ್ನು ನಿಧಾನವಾಗಿ ಆಫ್‌ಸ್ಟಂಪ್‌ನಿಂದ ಹೊರಭಾಗಕ್ಕೆ ಎಸೆದ ಪರಿಣಾಮ ಬ್ಯಾಟರ್‌ ಚೆಂಡನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ.

ಚೆಂಡನ್ನು ಕ್ಷಣಾರ್ಧದಲ್ಲಿ ಸಂಗ್ರಹಿಸಿದ ಪಂತ್ ಬೇಲ್ಸ್‌ಗಳನ್ನು ಕೆಡವಿ ಸೂರಿಯಬಂಡಾರ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಸ್ಟಂಪಿಂಗ್‌ ಕೇವಲ 0.3 ಸೆಕೆಂಡ್‌ನಲ್ಲಿ ಪೂರ್ಣಗೊಂಡಿದೆ ಎಂಬ ಹೇಳಿಕೆ ವೈರಲ್ ಆಗಿದೆ. ಆದರೆ ಲಭ್ಯವಿರುವ ವರದಿಗಳು 0.3 ಸೆಕೆಂಡ್‌ ಸಮಯವನ್ನು ಅಧಿಕೃತ ದಾಖಲೆ ಎಂದು ದೃಢಪಡಿಸಿಲ್ಲ.

ಪಂತ್‌ರ ಮಾಸ್ಟರ್ ಪ್ಲ್ಯಾನ್!

ಈ ವಿಕೆಟ್ ಕೇವಲ ವೇಗದ ಸ್ಟಂಪಿಂಗ್ ಮಾತ್ರವಾಗಿರಲಿಲ್ಲ. ಸೂರಿಯಬಂಡಾರ ಹಿಂದಿನ ಎಸೆತದಲ್ಲಿ ಎಲ್‌ಬಿಡಬ್ಲ್ಯು ತೀರ್ಪನ್ನು ಡಿಆರ್‌ಎಸ್ ಮೂಲಕ ಬದಲಿಸಿಕೊಂಡಿದ್ದರು. ಅಲ್ಲದೆ ಆ ಓವರ್ ನಲ್ಲಿ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸುತ್ತಿದ್ದರು. ಇದಾದ ಬಳಿಕ ಬ್ಯಾಟರ್‌ ಪಸುಂದು ಅಸಹನೆಯಿಂದ ಕ್ರೀಸ್ ಬಿಟ್ಟು ಮುಂದೆ ಬರುವ ಸಾಧ್ಯತೆಯನ್ನು ಪಂತ್ ಗ್ರಹಿಸಿದ್ದರು.

ಪಂತ್ ಮಿಡ್‌ಆನ್‌ನಲ್ಲಿದ್ದ ಫೀಲ್ಡರ್‌ಗೂ ಸಿದ್ಧವಾಗಿರುವಂತೆ ಸೂಚಿಸಿದ್ದರು. ಮುಂದಿನ ಎಸೆತದಲ್ಲೇ ಸೂರಿಯಬಂಡಾರ ಕ್ರೀಸ್ ಬಿಟ್ಟು ಮುಂದೆ ಬಂದರು. ಸುತಾರ್ ಕೂಡ ಪರಿಸ್ಥಿತಿಯನ್ನು ಅರಿತು ಚೆಂಡಿನ ವೇಗ ಕಡಿಮೆ ಮಾಡಿ ಆಫ್‌ಸ್ಟಂಪ್‌ನಿಂದ ದೂರ ಎಸೆದರು. ಚೆಂಡನ್ನು ಸಂಪರ್ಕಿಸಲು ವಿಫಲರಾದ ಸೂರಿಯಬಂಡಾರ ರನ್ನು ಪಂತ್ ಸುಲಭವಾಗಿ ಸ್ಟಂಪಿಂಗ್ ಮಾಡಿದರು.

ಚೊಚ್ಚಲ ಶತಕ ಮಿಸ್

ಸೂರಿಯಬಂಡಾರ 173 ಎಸೆತಗಳಲ್ಲಿ 92 ರನ್, 10 ಬೌಂಡರಿ ಹಾಗೂ ಒಂದು ಸಿಕ್ಸರ್‌ನೊಂದಿಗೆ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಆದರೆ ಶತಕಕ್ಕೆ ಕೇವಲ 8 ರನ್‌ಗಳ ಅಂತರದಲ್ಲಿದ್ದಾಗ ಅವರ ಇನ್ನಿಂಗ್ಸ್ ಅಂತ್ಯಗೊಂಡಿತು.

ಈ ವಿಕೆಟ್‌ನೊಂದಿಗೆ ಭಾರತ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿತು. ದಿನದಾಟ ಮಳೆಯಿಂದ ಬೇಗನೆ ಮುಕ್ತಾಯಗೊಂಡಾಗ ಶ್ರೀಲಂಕಾ ಎರಡನೇ ಇನ್ನಿಂಗ್ಸ್‌ನಲ್ಲಿ 229/6 ಗಳಿಸಿದ್ದು, ಭಾರತಕ್ಕಿಂತ 16 ರನ್‌ಗಳ ಮುನ್ನಡೆ ಸಾಧಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!

2nd Test: ಬೌಂಡರಿ ಲೈನ್ ಬಳಿ ದುರ್ವರ್ತನೆ ತೋರಿದ್ದ ಲಂಕಾ ಆಟಗಾರ Prabath Jayasuriyaಗೆ ಬರೆ ಹಾಕಿದ ICC!

ನಟ ದೇವರಾಜ್ 2ನೇ ಪುತ್ರ ನಟ ಪ್ರಣಮ್ ನಿಶ್ಚಿತಾರ್ಥ