ಅಭಿಷೇಕ್ ಶರ್ಮಾ ಡಕೌಟ್ 
ಕ್ರಿಕೆಟ್

T20 World Cup 2026: ಸತತ 3ನೇ ಬಾರಿಗೆ ಡಕೌಟ್; ಕೋಚ್ ಗಂಭೀರ್ ಕಳಪೆ ದಾಖಲೆ ಸರಿಗಟ್ಟಿದ Abhishek Sharma!

ಅಮೆರಿಕ ಮತ್ತು ಪಾಕಿಸ್ತಾನ ತಂಡಗಳ ವಿರುದ್ಧ ಶೂನ್ಯ ಸುತ್ತಿದ್ದ ಅಭಿಷೇಕ್ ಶರ್ಮಾ ಇದೀಗ ನೆದರ್ಲೆಂಡ್ ವಿರುದ್ಧವೂ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಸೇರಿಕೊಂಡಿದ್ದಾರೆ.

ಅಹ್ಮದಾಬಾದ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಬ್ಯಾಟಿಂಗ್ ವೈಫಲ್ಯ ಮುಂದುವರೆದಿದ್ದು ಸತತ ಮೂರನೇ ಬಾರಿಗೆ ಡಕೌಟ್ ಆಗಿದ್ದಾರೆ.

ಗುಜರಾತ್ ನ ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಮತ್ತೆ ಡಕೌಟ್ ಆಗುವ ಮೂಲಕ ಅಭಿಮಾನಿಗಳ ಆಸೆಗೆ ನೀರೆರಚಿದ್ದಾರೆ.

ಈ ಹಿಂದೆ ಅಮೆರಿಕ ಮತ್ತು ಪಾಕಿಸ್ತಾನ ತಂಡಗಳ ವಿರುದ್ಧ ಶೂನ್ಯ ಸುತ್ತಿದ್ದ ಅಭಿಷೇಕ್ ಶರ್ಮಾ ಇದೀಗ ನೆದರ್ಲೆಂಡ್ ವಿರುದ್ಧವೂ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಸೇರಿಕೊಂಡಿದ್ದಾರೆ. ಆ ಮೂಲಕ ಹ್ಯಾಟ್ರಿಕ್ ಡಕೌಟ್ ಆಗಿ ಹೀನಾಯ ದಾಖಲೆ ನಿರ್ಮಿಸಿದ್ದಾರೆ.

ಇಂದಿನ ಗುಂಪು ಹಂತದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಬ್ಯಾಟಿಂಗ್ ಆರಿಸಿಕೊಂಡರು. ಇಶಾನ್ ಕಿಶನ್ ಅವರೊಂದಿಗೆ ಆರಂಭಿಕನಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಅವರು ನೆದರ್ಲೆಂಡ್ ನ ಆಫ್ ಸ್ಪಿನ್ನರ್ ಆರ್ಯನ್ ದತ್ತ ಅವರು ಎಸೆದ ಮೊದಲ ಒವರ್ ನ ಮೂರನೇ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಹೀಗಾಗಿ ಭಾರತ ತಂಡ ಶೂನ್ಯ ರನ್ ಗೇ ಮೊದಲ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು.

ಡಕೌಟ್ ನಲ್ಲೂ ಹೀನಾಯ ದಾಖಲೆ

ಇನ್ನು ಅಭಿಷೇಕ್ ಶರ್ಮಾ ಈ ಡಕೌಟ್ ಮೂಲಕ ಹೀನಾಯ ದಾಖಲೆಗೆ ಪಾತ್ರರಾಗಿದ್ದು, ಕೋಚ್ ಗೌತಮ್ ಗಂಭೀರ್ ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಈ ಹಿಂದೆ 2014ರ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ಆಡಿದ್ದ ಗೌತಮ್ ಗಂಭೀರ್ ಸತತ ಮೂರು ಪಂದ್ಯಗಳಲ್ಲಿ ಡಕೌಟ್ ಆಗಿದ್ದರು. ಈ ದಾಖಲೆಯನ್ನು ಇದೀಗ ಅಭಿಷೇಕ್ ಶರ್ಮಾ ಸರಿಗಟ್ಟಿದ್ದಾರೆ.

ಕಾಲೆಂಡರ್ ವರ್ಷದಲ್ಲಿ ಗರಿಷ್ಠ ಡಕೌಟ್, ಸಂಜು ಸ್ಯಾಮ್ಸನ್ ದಾಖಲೆ ಸರಿಸಮ

ಇದೇ ವೇಳೆ ಅಭಿಷೇಕ್ ಇಂದಿನ ಪಂದ್ಯದ ಡಕೌಟ್ ಸೇರಿದಂತೆ ಕಳೆದ 10 ಪಂದ್ಯಗಳಲ್ಲಿ ಅವರು ಐದು ಬಾರಿ ಶೂನ್ಯಕ್ಕೆ ಔಟ್ ಆದಂತಾಗಿದೆ. ಆ ಮೂಲಕ ಅಭಿಷೇಕ್ ಶರ್ಮಾ ಕಾಲೆಂಡರ್ ವರ್ಷದಲ್ಲಿ ಗರಿಷ್ಠ ಬಾರಿ ಡಕೌಟ್ ಆದ ಭಾರತದ ಜಂಟಿ 2ನೇ ಬ್ಯಾಟರ್ ಎಂಬ ಕುಖ್ಯಾತಿಗೂ ಭಾಜನರಾಗಿದ್ದಾರೆ.

ಈ ಹಿಂದೆ 2024ರಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಕೂಡ 5 ಬಾರಿ ಡಕೌಟ್ ಆಗಿದ್ದರು. ಅಭಿಷೇಕ್ ಶರ್ಮಾರ ಈ ಫಾರ್ಮ್ ಮಹತ್ವದ ಸೂಪರ್ 8 ಹಂತಕ್ಕೆ ಸಿದ್ಧವಾಗುತ್ತಿರುವ ಈ ಹೊತ್ತಲ್ಲಿ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಗೆ ತಲೆನೋವಿನ ಸಂಗತಿಯಾಗಿದೆ.

Most Ducks for India in a Calendar Year in T20I

  • 5 - Sanju Samson (2024)

  • 5 - Abhishek Sharma (2026)*

  • 3 - Yusuf Pathan (2009)

  • 3 - Rohit Sharma (2018)

  • 3 - Rohit Sharma (2022)

  • 3 - Virat Kohli (2024)

  • 3 - Suryakumar Yadav (2025)

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಂತ್ಯ ಸನ್ನಿಹಿತ?: ಇರಾನ್ ನತ್ತ ಮುಖ ಮಾಡಿದ ಅಮೆರಿಕದ ಅತ್ಯಂತ ವಿಧ್ವಂಸಕ ಕ್ಷಿಪಣಿ

ವಿಶೇಷ ಪಡೆ, ಹತ್ತಾರು ಸೇನಾ ವಿಮಾನ: ಶತ್ರು ನೆಲದಲ್ಲಿ ಬಿದ್ದ ತನ್ನ ಪೈಲಟ್​ ನ್ನು ಅಮೆರಿಕ ರಕ್ಷಿಸಿದ್ದೇ ರೋಚಕ!

ಏ.10 ಕ್ಕೆ ರಾಜ್ಯಸಭಾ ಸದಸ್ಯರಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ! ಸಿಎಂ ಸ್ಥಾನಕ್ಕೆ ರಾಜೀನಾಮೆ?

ಬಾಗಲಕೋಟೆ ಉಪಚುನಾವಣೆ: BJP ಅಭ್ಯರ್ಥಿ ವಿರುದ್ಧ ಕರಪತ್ರ ಹಂಚಿಕೆ: ಇಬ್ಬರು ಪೊಲೀಸ್ ಅಧಿಕಾರಿಗಳ ಎತ್ತಂಗಡಿ!

ಅಕ್ರಮ ಬಾಂಗ್ಲಾ ವಲಸಿಗರಿಗೆ ಹೊಸ ತಲೆನೋವು; ಗಡಿಗಳಲ್ಲಿ ಹಾವು. ಮೊಸಳೆಗಳ ನಿಯೋಜನೆ: BSF ಗಂಭೀರ ಚಿಂತನೆ!

SCROLL FOR NEXT