ಮಿಚೆಲ್ ಸ್ಟಾರ್ಕ್  
ಕ್ರಿಕೆಟ್

IPL 2026: 11.75 ಕೋಟಿ ರೂ ಮೊತ್ತದ ಮಿಚೆಲ್ ಸ್ಟಾರ್ಕ್ ಲಭ್ಯತೆ ಬಗ್ಗೆ ಅನಿಶ್ಚಿತತೆ; ಸೌರವ್ ಗಂಗೂಲಿ ಕಿಡಿ!

ಈ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಇದು ನೋವುಂಟುಮಾಡುತ್ತದೆ. ಏಕೆಂದರೆ ಕೊನೆಯ ಕ್ಷಣದಲ್ಲಿ ಗುಣಮಟ್ಟದ ಆಟಗಾರರು ಬರದಿದ್ದಾಗ ಅದು ತಂಡದ ಸಮತೋಲನವನ್ನು ಅಲುಗಾಡಿಸುತ್ತದೆ ಎಂದಿದ್ದಾರೆ.

ನವದೆಹಲಿ: IPL 2026 ಆರಂಭಕ್ಕೆ ಇನ್ನೂ ಕೇವಲ ನಾಲ್ಕು ದಿನ ಬಾಕಿಯಿದ್ದು, ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಲಭ್ಯತೆ ಬಗ್ಗೆ ಇನ್ನೂ ಅನಿಶ್ಚಿತತೆಯ ಕಾರ್ಮೋಡವಿದೆ. ಮಿಚೆಲ್ ಸ್ಟಾರ್ಕ್ ಗಾಗಿ ಕ್ರಿಕೆಟ್ ಆಸ್ಟ್ರೇಲಿಯಾದಿಂದ ಗ್ರೀನ್ ಸಿಗ್ನಲ್ ಗಾಗಿ ಕಾಯುತ್ತಿದ್ದೇವೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಿಳಿಸಿದೆ.

ಈ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಇದು ನೋವುಂಟುಮಾಡುತ್ತದೆ. ಏಕೆಂದರೆ ಕೊನೆಯ ಕ್ಷಣದಲ್ಲಿ ಗುಣಮಟ್ಟದ ಆಟಗಾರರು ಬರದಿದ್ದಾಗ ಅದು ತಂಡದ ಸಮತೋಲನವನ್ನು ಅಲುಗಾಡಿಸುತ್ತದೆ ಎಂದಿದ್ದಾರೆ.

2026-27 ರ ಕ್ಯಾಲೆಂಡರ್‌ ನಲ್ಲಿನ ವೇಳಾಪಟ್ಟಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಎಚ್ಚರಿಕೆಯಿಂದ ನಿರ್ವಹಿಸುತ್ತಿರುವುದರಿಂದ ಸ್ಟಾರ್ಕ್ ಆರಂಭಿಕ ಪಂದ್ಯಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿಲ್ಲ. ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಆಟಗಾರರ ಲಭ್ಯತೆ ಕುರಿತು ಮಾತನಾಡಿದ ಗಂಗೂಲಿ, ಅಂತಹ ತಡವಾಗಿ ಹಿಂತೆಗೆದುಕೊಳ್ಳುವಿಕೆಯ ಪರಿಣಾಮವು ಅಂತರರಾಷ್ಟ್ರೀಯ ಕ್ರಿಕೆಟ್‌ಗಿಂತ ಐಪಿಎಲ್‌ನಲ್ಲಿ ತುಂಬಾ ಹೆಚ್ಚಾಗಿದೆ ಎಂದು ಹೇಳಿದರು.

ಇದು ನೋವುಂಟು ಮಾಡುತ್ತದೆ. ಏಕೆಂದರೆ ಐಪಿಎಲ್ ತಂಡಕ್ಕಿಂತ ಟೀಂ ಇಂಡಿಯಾ ರಚಿಸುವುದು ಸುಲಭ ಎಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಏಕೆಂದರೆ ಅತ್ಯುತ್ತಮ ಆಟಗಾರರು ಆಯ್ಕೆ ಮಾಡಲು ಎಲ್ಲಾ ಸಮಯದಲ್ಲೂ ಲಭ್ಯವಿರುತ್ತಾರೆ. ಐಪಿಎಲ್ ನ 10 ತಂಡಗಳಲ್ಲಿ ಆಟಗಾರರು ಹಂಚಿಕೆಯಾಗಿರುತ್ತಾರೆ. ಕೊನೆಯ ಕ್ಷಣದಲ್ಲಿ ಗುಣಮಟ್ಟದ ಆಟಗಾರರು ಬರದಿದ್ದರೆ, ಅದು ತಂಡದ ಸಮತೋಲನವನ್ನು ಅಲುಗಾಡಿಸುತ್ತದೆ. ಐಪಿಎಲ್‌ನಲ್ಲಿ ಮಿಚೆಲ್ ಸ್ಟಾರ್ಕ್ ಬರದಿದ್ದರೆ ಅವರ ಸ್ಥಾನವನ್ನು ತುಂಬುವುದು ಕಷ್ಟ. ಹಾಗಾಗಿ ಅದು ಸವಾಲುಗಳಲ್ಲಿ ಒಂದಾಗಿದೆ ಎಂದರು.

ಡೆಲ್ಲಿ ಕ್ಯಾಪಿಟಲ್ 11.75 ಕೋಟಿ ಕೊಟ್ಟು ಮಿಚೆಲ್ ಸ್ಟಾರ್ಕ್ ಖರೀದಿಸಿದೆ. ಇಂಗ್ಲೆಂಡ್ ಕ್ರಿಕೆಟಿಗ ಬೆನ್ ಡಕೆಟ್ ಕೂಡ ಅಂತರಾಷ್ಟ್ರೀಯ ಕ್ರಿಕೆಟ್‌ನತ್ತ ಗಮನ ಹರಿಸಲು ಬಯಸಿದ್ದರಿಂದ ಈ ಬಾರಿಯ ಐಪಿಎಲ್ ನಿಂದ ಹಿಂದೆ ಸರಿದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮತ್ತೊಂದು F-18 ಫೈಟರ್ ಜೆಟ್ ಹೊಡೆದುರುಳಿಸಿದ್ದೇವೆ ಎಂದ Iran, ಬೆಚ್ಚಿದ ಅಮೆರಿಕದಿಂದ Fact-Check

ಯುದ್ದದಲ್ಲಿ ಗೆದ್ದು ಕೂಡ ಸೋಲುತ್ತಿರುವ ಅಮೇರಿಕಾ ಮತ್ತು ಚೀನಾ! (ಹಣಕ್ಲಾಸು)

ವಿವಾದದ ನಡುವೆ ಮೈಸೂರಿನ ಮುಕ್ತ ವಿವಿಯಲ್ಲಿ RSS ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್

'ಜೀವ ಬಾಯಿಗೆ ಬಂದಿತ್ತು': ಆಗಸದಲ್ಲೇ ಗಿರಕಿ ಹೊಡೆದ ಡಿಕೆ ಶಿವಕುಮಾರ್, ರೇವಣ್ಣ ಪ್ರಯಾಣಿಸುತ್ತಿದ್ದ ವಿಮಾನ, ಕೆಲಕಾಲ ಆತಂಕ! ಆಗಿದ್ದೇನು?

ಡಿಪ್ರೆಷನ್, ಮಧ್ಯಪಾನ, ಆತ್ಮ*ತ್ಯೆ, ಮಗಳ ಕೊಟ್ಟು ಮದುವೆ ಮಾಡಲು ಸಿದ್ಧರಿರಲಿಲ್ಲ: ಭಾರತ ತಂಡದ ಮಾಜಿ ಕ್ರಿಕೆಟಿಗ ಆಳಲು

SCROLL FOR NEXT