ಆರ್‌ಸಿಬಿ ಆಟಗಾರರು 
ಕ್ರಿಕೆಟ್

IPL 2026: LSG ವಿರುದ್ಧದ ಪಂದ್ಯಕ್ಕೂ ಮುನ್ನ ಮಾಲ್ಡೀವ್ಸ್ ಪ್ರವಾಸ ಕೈಗೊಂಡ RCB

ರಜತ್ ಪಾಟೀದಾರ್ ನೇತೃತ್ವದ ತಂಡವು ಐಪಿಎಲ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಇದೀಗ ಪ್ಲೇಆಫ್ ಸ್ಥಾನದ ಹಾದಿಯಲ್ಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು IPL 2026 ರಿಂದ ಸ್ವಲ್ಪ ಸಮಯದವರೆಗೆ ವಿರಾಮ ತೆಗೆದುಕೊಳ್ಳಲು ಆಯ್ಕೆ ಮಾಡಿಕೊಂಡಿದೆ. ಹಾಲಿ ಚಾಂಪಿಯನ್‌ಗಳ ವೇಳಾಪಟ್ಟಿಯಲ್ಲಿ ಮುಂದಿನ ಪಂದ್ಯಕ್ಕೂ ಮುನ್ನ ಒಂದು ವಾರದ ವಿರಾಮ ಹೊಂದಿರುವುದರಿಂದ ಇದೀಗ ಮಾಲ್ಡೀವ್ಸ್‌ಗೆ ಹಾರಿದ್ದಾರೆ. IPL 2026 ರಲ್ಲಿ ಅತ್ಯುತ್ತಮ ಅಭಿಯಾನ ಹೊಂದಿರುವ ಆರ್‌ಸಿಬಿ, ಆಡಿರುವ ಒಂಬತ್ತು ಪಂದ್ಯಗಳಲ್ಲಿ ಆರನ್ನು ಗೆದ್ದಿದೆ. ಇದೀಗ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಮುಂದಿನ ಪಂದ್ಯಕ್ಕೂ ಮುನ್ನ ಪ್ರವಾಸಕ್ಕೆ ತೆರಳಿದೆ.

ರಜತ್ ಪಾಟೀದಾರ್ ನೇತೃತ್ವದ ತಂಡವು ಐಪಿಎಲ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಇದೀಗ ಪ್ಲೇಆಫ್ ಸ್ಥಾನದ ಹಾದಿಯಲ್ಲಿದೆ. ಟೂರ್ನಿಯ ಆರಂಭದಿಂದಲೂ ಆರ್‌ಸಿಬಿ ಎರಡು ಪಂದ್ಯಗಳನ್ನು ಗೆದ್ದ ನಂತರ ಒಂದು ಪಂದ್ಯವನ್ನು ಸೋತಿದೆ. ಇದೇ ಮಾದರಿಯಲ್ಲಿ ಮೂರು ಪಂದ್ಯಗಳನ್ನು ಸೋತಿದೆ. ನ್ಯೂಜಿಲೆಂಡ್ ವೇಗಿ ಜೇಕಬ್ ಡಫಿ ದ್ವೀಪ ರಾಷ್ಟ್ರದ ಒಂದು ನೋಟವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿರುವುದು ಬೆಳಕಿಗೆ ಬಂದಿದೆ. ಫ್ರಾಂಚೈಸಿ ಅಧಿಕೃತವಾಗಿ ಪ್ರವಾಸವನ್ನು ಘೋಷಿಸಿಲ್ಲವಾದರೂ, ದೀರ್ಘ ಪಂದ್ಯಾವಳಿಯ ಸಮಯದಲ್ಲಿ ಆಟಗಾರರನ್ನು ಮಾನಸಿಕವಾಗಿ ತಾಜಾವಾಗಿಡಲು ಇದೊಂದು ಸಣ್ಣ ವಿರಾಮ ಇದು ಎಂದು ತಿಳಿದುಬಂದಿದೆ.

ಈ ಮಾರ್ಗವನ್ನು ಆರಿಸಿಕೊಂಡ ಮೊದಲ ತಂಡ ಆರ್‌ಸಿಬಿ ಅಲ್ಲ. ಇತ್ತೀಚಿನ ಆವೃತ್ತಿಗಳಲ್ಲಿ, ಪ್ರಯಾಣ, ತರಬೇತಿ ಮತ್ತು ಪಂದ್ಯಗಳ ಏಕತಾನತೆಯನ್ನು ಮುರಿಯಲು ಫ್ರಾಂಚೈಸಿಗಳು ಸಣ್ಣ ಪ್ರವಾಸಗಳತ್ತ ಒಲವು ತೋರುತ್ತಿವೆ. ಉದಾಹರಣೆಗೆ, ಮುಂಬೈ ಇಂಡಿಯನ್ಸ್ 2024ರಲ್ಲಿ ಕಠಿಣ ಹಂತದಲ್ಲಿ ವಿರಾಮವನ್ನು ತೆಗೆದುಕೊಂಡಿತು. ಸನ್‌ರೈಸರ್ಸ್ ಹೈದರಾಬಾದ್ (SRH) ಸಹ 2025 ರಲ್ಲಿ ಮಾಲ್ಡೀವ್ಸ್‌ಗೆ ತೆರಳಿತು. ಡೆಲ್ಲಿ ಕ್ಯಾಪಿಟಲ್ಸ್‌ನ ಮಾರ್ಗದರ್ಶಕ ಕೆವಿನ್ ಪೀಟರ್ಸನ್ ಕಳೆದ ವರ್ಷ ಆವೃತ್ತಿಯ ಮಧ್ಯೆ ಇದೇ ಮಾದರಿಯನ್ನು ಆಯ್ಕೆ ಮಾಡಿಕೊಂಡಿದ್ದರು.

ಆರ್‌ಸಿಬಿಗೆ ಈ ಸಮಯ ಸೂಕ್ತವಾಗಿದೆ. ಅವರ ಕೊನೆಯ ಪಂದ್ಯ ಏಪ್ರಿಲ್ 30 ರಂದು ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧವಾಗಿತ್ತು. ಅವರ ಮುಂದಿನ ಪಂದ್ಯ ಮೇ 7 ರಂದು ಲಕ್ನೋದಲ್ಲಿ ಎಲ್ಎಸ್‌ಜಿ ವಿರುದ್ಧ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!