ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2026) ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇತ್ತೀಚೆಗೆ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಗೆಲುವಿನ ಹಾದಿಗೆ ಮರಳಿದೆ. ಇದರೊಂದಿಗೆ ವೀಕ್ಷಕರು ಮತ್ತು ಅಭಿಮಾನಿಗಳ ಆಸಕ್ತಿಯನ್ನು ಕೆರಳಿಸುವಲ್ಲಿಯೂ ಯಶಸ್ವಿಯಾಗಿದೆ.
ರುತುರಾಜ್ ಗಾಯಕ್ವಾಡ್ ಮತ್ತು ತಂಡವು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (MI) ತಂಡಗಳನ್ನು ಹಿಂದಿಕ್ಕಿ ಟೂರ್ನಮೆಂಟ್‌ನ ಸದ್ಯದ ಆವೃತ್ತಿಯಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ತಂಡ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಚರ್ಚೆಗೊಳಗಾದ ತಂಡವಾಗಿದೆ. ಕುತೂಹಲಕಾರಿಯಾಗಿ, ಸಾಮಾಜಿಕ ಮಾಧ್ಯಮ ಮತ್ತು ಗ್ರೌಂಡ್ ಉಪಸ್ಥಿತಿ ಎರಡರಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಆರ್‌ಸಿಬಿ, ಐಪಿಎಲ್ 2026ರಲ್ಲಿ ಇಲ್ಲಿಯವರೆಗೆ ಶ್ಲಾಘನೀಯ ಪ್ರದರ್ಶನ ನೀಡಿದರೂ, ಈ ಎರಡೂ ವಿಷಯಗಳಲ್ಲಿ ಹಿಂದುಳಿದಿದೆ.
ಅತಿಹೆಚ್ಚು ವೀಕ್ಷಣೆ ಕಂಡ ತಂಡ
ಅಧಿಕೃತ ಪ್ರಸಾರಕ ಸ್ಟಾರ್ ಸ್ಪೋರ್ಟ್ಸ್ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಐಪಿಎಲ್ 2026ರಲ್ಲಿ ಪ್ರತಿ ಸಿಎಸ್‌ಕೆ ಪಂದ್ಯವನ್ನು ಸರಾಸರಿ 308 ಮಿಲಿಯನ್ ವೀಕ್ಷಕರು ವೀಕ್ಷಿಸಿದ್ದಾರೆ. ಆರ್‌ಸಿಬಿಯ ಪ್ರತಿ ಪಂದ್ಯಕ್ಕೆ 303 ಮಿಲಿಯನ್ ಬಳಕೆದಾರರು ವೀಕ್ಷಿಸಿದ್ದಾರೆ. ಇತ್ತ ಎಂಐ, ಎಸ್‌ಆರ್‌ಎಚ್ ಮತ್ತು ಕೆಕೆಆರ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮುಂದಿನ ಮೂರು ತಂಡಗಳಾಗಿವೆ. ಸಿಎಸ್‌ಕೆ ಈ ಆವೃತ್ತಿಯಲ್ಲಿ ಇದುವರೆಗೆ ಆಡಿದ ಹತ್ತು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದಿದೆ. ತಂಡದ ಸಂಜು ಸ್ಯಾಮ್ಸನ್ 30ಕ್ಕೂ ಅಧಿಕ ರನ್‌ಗಳನ್ನು ಗಳಿಸಿರುವ ಎಲ್ಲ ಪಂದ್ಯಗಳಲ್ಲಿ, ಸಿಎಸ್‌ಕೆ ಗೆದ್ದಿದೆ. ಐಪಿಎಲ್ 2026 ಕ್ಕಿಂತ ಮೊದಲು ಗಾಯದಿಂದ ಬಳಲುತ್ತಿದ್ದ ಎಂಎಸ್ ಧೋನಿ ಇನ್ನೂ ತಂಡಕ್ಕೆ ಮರಳದಿದ್ದರೂ, ಸಿಎಸ್‌ಕೆ ಹೆಚ್ಚು ಆಡಿದ ಪಂದ್ಯ ಹೆಚ್ಚು ವೀಕ್ಷಣೆ ಕಂಡಿದೆ.
ಐಪಿಎಲ್ 2026 ರಲ್ಲಿ ಅತಿಹೆಚ್ಚು ವೀಕ್ಷಣೆ ಕಂಡ ತಂಡಗಳು
1. ಚೆನ್ನೈ ಸೂಪರ್ ಕಿಂಗ್ಸ್ - 308 ಮಿಲಿಯನ್
2. ರಾಯಲ್ ಚಾಲೆಂಜರ್ಸ್ ಬೆಂಗಳೂರು - 303 ಮಿಲಿಯನ್
3. ಮುಂಬೈ ಇಂಡಿಯನ್ಸ್ - 293 ಮಿಲಿಯನ್
4. ಸನ್‌ರೈಸರ್ಸ್ ಹೈದರಾಬಾದ್- 290 ಮಿಲಿಯನ್
5. ಕೋಲ್ಕತ್ತಾ ನೈಟ್ ರೈಡರ್ಸ್- 280 ಮಿಲಿಯನ್
ಪಂದ್ಯಾವಳಿ ಈಗಾಗಲೇ ಅರ್ಧ ಮುಕ್ತಾಯಗೊಂಡಿದ್ದು, ಈ ಆವೃತ್ತಿಯಲ್ಲಿ ಹೆಚ್ಚು ವೀಕ್ಷಣೆ ಕಂಡ ತಂಡಗಳ ಪಟ್ಟಿಯಲ್ಲಿರುವ ಐದು ತಂಡಗಳಲ್ಲಿ ನಾಲ್ಕು ತಂಡಗಳು ಐಪಿಎಲ್ 2026ರ ಪ್ಲೇಆಫ್‌ಗಳಲ್ಲಿ ಸ್ಥಾನ ಪಡೆಯುವ ಸ್ಪರ್ಧೆಯಲ್ಲಿವೆ. ಐಪಿಎಲ್ 2026ರ ಅಂಕಪಟ್ಟಿಯಲ್ಲಿ ಸಿಎಸ್‌ಕೆ 6ನೇ ಸ್ಥಾನದಲ್ಲಿದೆ. ಆರ್‌ಸಿಬಿ 4ನೇ ಸ್ಥಾನದಲ್ಲಿದೆ, ಎಂಐ 9 ನೇ ಸ್ಥಾನದಲ್ಲಿದೆ, ಕೆಕೆಆರ್ 7 ನೇ ಸ್ಥಾನದಲ್ಲಿದೆ ಮತ್ತು ಎಸ್‌ಆರ್‌ಎಚ್ 1ನೇ ಸ್ಥಾನದಲ್ಲಿದೆ.
IPL 2026ರಲ್ಲಿ ಹೆಚ್ಚು ಚರ್ಚೆಗೊಳಗಾದ ತಂಡ
IPL 2026ರಲ್ಲಿ ಅಭಿಮಾನಿಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಚರ್ಚೆಗೊಳಗಾದ ತಂಡಗಳ ಪಟ್ಟಿಯಲ್ಲಿ CSK ಅಗ್ರಸ್ಥಾನದಲ್ಲಿದೆ. RCB ಸಾಮಾಜಿಕ ಮಾಧ್ಯಮದಲ್ಲಿ ಬಲವಾದ ಮತ್ತು ಗಮನಾರ್ಹವಾದ ಬೆಂಬಲವನ್ನು ಹೊಂದಿದ್ದರೂ, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು CSK. ಶೇ 22 ರಷ್ಟು ಅಭಿಮಾನಿಗಳು ಆನ್‌ಲೈನ್‌ನಲ್ಲಿ ತಂಡದ ಬಗ್ಗೆ ಮಾತನಾಡುತ್ತಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಚರ್ಚೆಗೊಳಗಾದ ತಂಡಗಳು
1. ಚೆನ್ನೈ ಸೂಪರ್ ಕಿಂಗ್ಸ್ - 22%
2. ರಾಯಲ್ ಚಾಲೆಂಜರ್ಸ್ ಬೆಂಗಳೂರು - 21%
3. ಮುಂಬೈ ಇಂಡಿಯನ್ಸ್ - 13%
4. ಸನ್‌ರೈಸರ್ಸ್ ಹೈದರಾಬಾದ್ - 10%
5. ಕೋಲ್ಕತ್ತಾ ನೈಟ್ ರೈಡರ್ಸ್ - 7%