ನವಲಗುಂದ ತಾಲೂಕು ಕಾಂಗ್ರೆಸ್ ಘಟಕಕ್ಕೆ ಆಯ್ಕೆ
ನವಲಗುಂದ: ತಾಲೂಕು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರನ್ನಾಗಿ ಡಾ. ಶಾದಾಬ ನಿಂಬಾಳಕರ, ಉಪಾಧ್ಯಕ್ಷರನ್ನಾಗಿ ಮೈನುದ್ದೀನ ಕುಂದಗೋಳ, ಪ್ರಧಾನ ಕಾರ್ಯದರ್ಶಿಯಾಗಿ ಮಾಬುಲಿ ಹುಗ್ಗಿ ಅವರನ್ನು ನೇಮಕ ಮಾಡಲಾಗಿದೆ. ನವಲಗುಂದ ನಗರದ ಅಲ್ಪಸಂಖ್ಯಾತರ ಕಾಂಗ್ರೆಸ್ ಘಟಕಕ್ಕೆ ಅಧ್ಯಕ್ಷರಾಗಿ ಬಾಬಾಜಾನ ಮಕಾನದಾರ, ಉಪಾಧ್ಯಕ್ಷರಾಗಿ ಖಾದರಸಾಬ ಧಾರವಾಡ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮೌಲಾಸಾಬ ತಹಶೀಲ್ದಾರ ಅವರನ್ನು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಆದೇಶದ ಮೇರೆಗೆ ಆಯ್ಕೆ ಮಾಡಲಾಗಿದೆ ಎಂದು ನವಲಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಎಚ್. ಕೋನರಡ್ಡಿ ಪ್ರಕಟಣಿಯಲ್ಲಿ ತಿಳಿಸಿದ್ದಾರೆ.